ಬಿಜೆಪಿ ಶಾಸಕ ಮುನಿರತ್ನ ಅವರ ಕರ್ಮಕಾಂಡ ಒಂದಾ ಎರಡಾ ಅವರಿಂದ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಹಲವರು ಸಾಕಷ್ಟು ನೋವು ತಿಂದಿದ್ದಾರೆ. ದಲಿತರು, ಒಕ್ಕಲಿಗರು, ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರೋದು ಅಕ್ಷಮ್ಯ ಅಪರಾಧ ಎಂದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಸೆ.16): ಬಿಜೆಪಿ ಶಾಸಕ ಮುನಿರತ್ನ ಅವರ ಕರ್ಮಕಾಂಡ ಒಂದಾ ಎರಡಾ ಅವರಿಂದ ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಹಲವರು ಸಾಕಷ್ಟು ನೋವು ತಿಂದಿದ್ದಾರೆ. ದಲಿತರು, ಒಕ್ಕಲಿಗರು, ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರೋದು ಅಕ್ಷಮ್ಯ ಅಪರಾಧ ಎಂದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರರು ಶಾಸಕ ಮುನಿರತ್ನ ಬಿಬಿಎಂಪಿ ಗುತ್ತಿಗೆದಾರನಿಗೆ 35 ಲಕ್ಷ ರು. ಕೇಳಿ ಬಂಧನಕ್ಕೊಳಗಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಮುನಿರತ್ನ ಅವರಿಗೆ ಆಗ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟಿದ್ದೆ ತಪ್ಪಾಯಿತು.
ಇಂತಹವರನ್ನ ಬಿಜೆಪಿ ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಿದೆ. ತನ್ನ ತಪ್ಪುಗಳನ್ನು ಮುಚ್ಚಿಕೊಳಲು ಬಿಬಿಎಂಪಿಯಲ್ಲಿ ದಾಖಲೆಗಳನ್ನು ಸುಟ್ಟು ಹಾಕಿದ ಆತನ ನಡವಳಿಕೆ, ಬೆಳೆದು ಬಂದ ದಾರಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಣಕ್ಕೊಸ್ಕರ ಹಪಾಹಪಿಸುವ ಇಂತಹ ವ್ಯಕ್ತಿ ಸಮಾಜಕ್ಕೆ ಮಾರಕ. ಸಾರ್ವಜನಿಕ ಜೀವನದಲ್ಲಿ ಇಂತಹ ವ್ಯಕ್ತಿಗೆ ಉನ್ನತ ಸ್ಥಾನಮಾನ ಸಿಗಬಾರದು ಉಪ್ಪು ತಿಂದವರು ನೀರು ಕುಡಿಯಲಿ ಎಂದು ಆಕ್ರೋಷ ವ್ಯೆಕ್ತ ಪಡಿಸಿದರು.
ವಕ್ಫ್ ಬೋರ್ಡ್ ಹೆಸರಲ್ಲಿ ಅಕ್ರಮ ತಡೆಗೆ ತಿದ್ದುಪಡಿ ಮಸೂದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಶಾಸಕ ಮುನಿರತ್ನರನ್ನು ಸಮರ್ಥಿಸಿ ಕೊಂಡ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಕಿಡಿಕಾರಿದ ಸಚಿವ ಡಾ.ಎಂ.ಸಿ.ಸುಧಾಕರ್, ಅಶೋಕ್ ಒಕ್ಕಲಿಗರು ಹೌದು ಅಥವಾ ಅಲ್ಲ ಅಂತ ಹೇಳಬೇಕಾಗಿದೆ. ಶಾಸಕ ಮುನಿರತ್ನ ಪ್ರಕರಣದಲ್ಲಿ ವಿನಾಕಾರಣ ಸಮರ್ಥಿಸಿಕೊಳ್ಳುವ ಭರದಲ್ಲಿ ಆತ್ಮಸಾಕ್ಷಿಗೆ ವಂಚನೆ ಮಾಡಿ ಕೊಳ್ಳುತ್ತಿದ್ದಾರೆ. ತಾಯಿ, ಹೆಂಡತಿ ಬಗ್ಗೆ ಕೀಳಾಗಿ ಮಾತಾಡಿದ ಶಾಸಕ ಮುನಿರತ್ನ ಬಗ್ಗೆ ಸಮರ್ಥಿಸಿಕೊಳ್ಳೋದು ಎಷ್ಟು ಸರಿ.? ತಪ್ಪು ಮಾಡಿದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರಿಗಿಸುತ್ತದೆ ಎಂದು ಹೇಳಿದರು. ಸಂಸದ ಡಾ.ಕೆ.ಸುಧಾಕರ್ ರಿಂದ 300 ಕೋಟಿ ಲಾಸ್ ಆಗಿದೆ ಯಾರನ್ನು ಉದ್ಧಾರ ಮಾಡಲು ಮೆಡಿಕಲ್ ಕಾಲೇಜು ಕಟ್ಟಲಾಗಿದೆ.
ಸಚಿವರಾಗಿದ್ದ ವೇಳೆ ಜವಬ್ದಾರಿ ಸಚಿವ ಮತ್ತು ಶಾಸಕರಾಗಿ ನಿಮಗೆ ಜವಬ್ದಾರಿ ಇರಲಿಲ್ವಾ, ಪೆರೇಸಂದ್ರ ಬಳಿ ಮೆಡಿಕಲ್ ಕಾಲೇಜು ಮಾಡಲು ಯೋಗ್ಯತೆ ಇತ್ತಾ. ಮೆಡಿಕಲ್ ಕಾಲೇಜು ಅಲ್ಲಿ ಯಾರಿಗೆ ಉಪಯೋಗವಾಗುತ್ತಿದೆ. ಇನ್ನೂ ಮೆಡಿಕಲ್ ಕಾಲೇಜು ಯಾರಿಗೆ ಉಪಯೋಗ ಇದೆ. ಯಾರನ್ನು ಉದ್ಧಾರ ಮಾಡಕ್ಕೆ ಅಲ್ಲಿ ಮೆಡಿಕಲ್ ಕಾಲೇಜು ಮಾಡಿದ್ದೀರಾ? ಅಲ್ಲಿ ಆಸ್ಪತ್ರೆ ಮಾಡುವ ಅವಶ್ಯಕತೆ ಇಲ್ಲಾ ನಿಮ್ಮಿಂದ ಇವತ್ತು 300 ಕೋಟಿ ಲಾಸ್ ಆಗಿದೆ. ಯಾರ ದುಡ್ಡು ಅದು? ನಿಮ್ಮ ಮನೆಯ ಪಕ್ಕದಲ್ಲಿ ಮಾಡಲು ಹೋರಟ್ಟಿದ್ದೀರಾ? ಎಂದು ಪ್ರಶ್ನಿಸಿದರು. ಅಂದಿನ ಸಚಿವ ಡಾ.ಕೆ. ಸುಧಾಕರ್ ಜಿಲ್ಲೆಗೆ ಕೆಲಸ ಮಾಡಿದರಾ? ಅಥವಾ ಕೇವಲ ಪೆರೇಸಂದ್ರಕ್ಕೆ ಮಾತ್ರ ಕೆಲಸ ಮಾಡಿದಿರಾ? ಎಂದು ಕಿಡಿಕಾರಿದ್ರು.
ಪಿಲಿಕುಳದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ ಕಂಬಳ, ತುಳುನಾಡ ಉತ್ಸವ: ಸ್ಪೀಕರ್ ಯು.ಟಿ.ಖಾದರ್
ಅಲ್ಲಿ ಆಸ್ಪತ್ರೆ ಮಾಡುವ ಅವಶ್ಯಕತೆ ಇಲ್ಲಾ. ನಗರದಲ್ಲಿರುವ ಇದೇ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಕೆ ಮಾಡಿದ್ದರೆ ಸರ್ಕಾರಕ್ಕೆ 300 ಕೋಟಿ ಉಳಿಯುತ್ತಿತ್ತು. ಆದರೆ ಯಾರ ಸ್ವಾರ್ಥಕ್ಕೆ, ತೆವಲಿಗೆ ಅಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಿದಿರಿ, ಅಲ್ಲಿಗೆ ಚಿಕಿತ್ಸೆ ಪಡೆದುಕೊಳ್ಳಲು ಯಾರು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗ ಹೂವಿನ ಮಾರುಕಟ್ಟೆ 40 ಎಕರೆ ಪ್ರದೇಶದಲ್ಲಿ ನಗರಕ್ಕೆ ಹೊಂದಿಕೊಂಡಿದೆ ಇದರಿಂದ ರೈತರಿಗೆ ಉಪಯೋಗವಾಗಲಿದೆ. ನಾವು ತೋರಿಸಿದ ಮಾರುಕಟ್ಟೆ ಪ್ರದೇಶವನ್ನು ರೈತರು ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ಸರ್ವೆ ಕಾರ್ಯ ಮುಗಿಸಿ ಕೆಲಸ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.