ಮುನಿರತ್ನರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು: ಸಚಿವ ಎಚ್.ಕೆ.ಪಾಟೀಲ

By Kannadaprabha News  |  First Published Sep 16, 2024, 4:59 PM IST

ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು, ಅದನ್ನು ಬಿಟ್ಟು ನೋಟಿಸ್ ಕೊಡುತ್ತೇವೆ ಎಂದು ಹೇಳುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ. 


ಗದಗ (ಸೆ.16): ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು, ಅದನ್ನು ಬಿಟ್ಟು ನೋಟಿಸ್ ಕೊಡುತ್ತೇವೆ ಎಂದು ಹೇಳುತ್ತಿರುವುದು ಯಾವ ಉದ್ದೇಶಕ್ಕೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಡುವುದರಿಂದ ಏನಾಗುತ್ತದೆ? ಮುನಿರತ್ನ ಏನು ಮಾತನಾಡಿದ್ದಾರೆ? ಎನ್ನುವುದನ್ನು ಎಲ್ಲರೂ ಕೇಳಿದ್ದಾರೆ. ಅವರನ್ನು ಅಮಾನತು ಮಾಡುವುದು ಬಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಡಿ.ಕೆ. ಸುರೇಶ ಅವರಿಗೆ ಮಾತನಾಡು ಎಂದು ಹೇಳಿದ್ರಾ? ಡಿ.ಕೆ. ಸುರೇಶ್ ಮೇಲೆ ಯಾವ ಕಾರಣಕ್ಕೆ ಅಪಾದನೆ ಮಾಡುತ್ತೀರಿ? ಎಷ್ಟೆಲ್ಲ ಮಾತನಾಡಿದ್ದಾರೆ, ಆದರೂ ಅರೆಸ್ಟ್ ಮಾಡದೇ ಇರಬೇಕಿತ್ತಾ? ಸರ್ಕಾರ ಜನ ಪರ ಇರಬೇಕೋ, ಶಾಸಕರ ಪರ ಇರಬೇಕೋ? ನೀವೇ ಹೇಳಿ, ಯಾವುದು ಏನು ಮಾಡಬೇಕು ಅದನ್ನು ಕಾನೂನಿನ ಪ್ರಕಾರವೇ ನಮ್ಮ ಸರ್ಕಾರ ಮಾಡುತ್ತದೆ. ಷಡ್ಯಂತ್ರ ಎಂದು ಹೇಳುವ ಮೂಲಕ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುನಿರತ್ನ ಹೇಳಿಕೆಯನ್ನು ಡಿಫೆಂಡ್ ಮಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಜಾತಿ ಮೇಲೆ ಹೆಣ್ಣು ಮಕ್ಕಳನ್ನು ಕರೀತೀರಾ? ನಾಚಿಕೆ ಬರಲಿಲ್ವಾ? ನಿಮಗೆ, ನೀವು ಬಲಾಢ್ಯ, ಶ್ರೀಮಂತರಿರಬಹುದು. ಆದರೆ ಯಾವ ಕಾರಣಕ್ಕೂ ಬೇರೊಬ್ಬರನ್ನು ಅಗೌರವಿಸುವ ಹಕ್ಕು ನಿಮಗಿಲ್ಲ, ಈ ರೀತಿ ಮಾತನಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos

undefined

ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದಿದ್ರೆ ಕಾನೂನು ಹೋರಾಟ: ಸಚಿವ ಎಚ್‌.ಕೆ.ಪಾಟೀಲ್‌

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅ‍ವರು, ಸಮಾನತೆ ಬರಲಿ ಎಂದು ನೀಡಿರುವ ಹೇಳಿಕೆ ತಪ್ಪಾ? ಮೀಸಲಾತಿ ತೆಗೆಯುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರಾ? ಸಂವಿಧಾನ ಬದಲಾಯಿಸುತ್ತೇವೆ ಎಂದು ನಿಮ್ಮ ಮಂತ್ರಿಗಳೇ ಹೇಳಿಕೆ ನೀಡಿದ್ದರಲ್ಲ? ಹಾಗೇ ರಾಹುಲ್ ಗಾಂಧಿ ಹೇಳಿದ್ದಾರಾ? ಇಲ್ಲವಲ್ಲ, ಅದಾನಿಯವರ ಹಣ ಸ್ವಿಟ್ಜರ್ಲೆಂಡ್ ಲ್ಯಾಂಡ್ ಬ್ಯಾಂಕ್‌ನಲ್ಲಿ ಸೀಜಾಗಿದ್ದು ಇವರಿಗೆ ಸಂಕಟವಾಗಿದೆ. ಅದನ್ನು ಮುಚ್ಚಲ ಈ ರೀತಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ನಾಗಮಂಗಲ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಆರೋಪ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾಗಮಂಗಲ ಇರಲಿ, ಬೇರೆ ಯಾವುದೇ ಪ್ರದೇಶ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.

ಜಿಎಸ್‌ಟಿ, ಇನ್‌ಕಮ್ ಟ್ಯಾಕ್ಸ್ ಕಟ್ಟೋರಿಗೆ ಗ್ಯಾರಂಟಿ ಕೊಡಬಾರದು: ರಾಜ್ಯದಲ್ಲಿ ಶೀಘ್ರ ಜಿಲ್ಲಾ ಮತ್ತು ತಾಪಂ ಚುನಾವಣೆ ಸರ್ಕಾರ ನಡೆಸಲಿದೆ ಎಂದು ಕಾನೂನು ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಗುರುವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ ಎಂದರು. 

ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನಿಂದ ಪಾದಯಾತ್ರೆ?: ಸಚಿವ ಎಚ್.ಕೆ.ಪಾಟೀಲ್

ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ಕ್ರಮ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹಾಗೂ ಮತ್ತಿತರರು 3 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದ ಎಲ್ಲ 31 ಜಿಪಂ ಹಾಗೂ ತಾಪಂ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಂಡಿದೆ, ಆದರೆ ಮೀಸಲು ನಿಗದಿಗೆ ಅಲ್ಪ ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ನಮ್ಮ ಅಡ್ವೋಕೇಟ್ ಜನರಲ್ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜಿಲ್ಲಾ ಮತ್ತು ತಾಪಂಗೆ ಕಾನೂನಾತ್ಮಕವಾಗಿ ಚುನಾವಣೆ ನಡಸಬೇಕಾಗಿದೆ. ಜಿಪಂ, ತಾಪಂ ಚುನಾವಣೆ ಮಾಡೋದಕ್ಕೆ ಹೆಜ್ಜೆ ಇಡುತ್ತದೆ, ಆದಷ್ಟು ಬೇಗ ಘೋಷಣೆ ಮಾಡುತ್ತೇವೆ. ಜಿಪಂ ತಾಪಂ ಚುನಾವಣೆಯ ವಿಷಯ ನ್ಯಾಯಾಲಯದಲ್ಲಿದೆ ಎಂದರು.

click me!