Chikkamagaluru: ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

By Govindaraj S  |  First Published Feb 5, 2023, 10:29 AM IST

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್​ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದು, ಈ ಮಧ್ಯೆ ಹೆಬ್ಬಾಳ್ಕರ್​ ಇಂದು ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮ ಅವಧೂತ ವಿನಯ್ ಗುರೂಜಿಯವರನ್ನು ಭೇಟಿಯಾಗಲಿದ್ದಾರೆ. 


ಚಿಕ್ಕಮಗಳೂರು (ಫೆ.05): ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್​ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದು, ಈ ಮಧ್ಯೆ ಹೆಬ್ಬಾಳ್ಕರ್​ ಇಂದು ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮ ಅವಧೂತ ವಿನಯ್ ಗುರೂಜಿಯವರನ್ನು ಭೇಟಿಯಾಗಲಿದ್ದಾರೆ. ನಿನ್ನೆ (ಶನಿವಾರ) ಸಂಜೆಯೇ ಚಿಕ್ಕಮಗಳೂರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ಆಯೋಜನೆಯ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ಮೂಡಿಗೆರೆ ಪಟ್ಟಣ ಸಮೀಪದ ಹಾಂದಿಯಲ್ಲಿ ನಡೆಯಲಿರುವ ಆಶಾಕಿರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿನಯ್ ಗುರೂಜಿ, ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿಯಾಗಲಿದ್ದು, ರಮೇಶ್ ಜಾರಕಿಹೊಳಿಯ ಗಂಭೀರ ಆರೋಪ, ರಾಜಕಾರಣದ ಬಗ್ಗೆ ಚರ್ಚೆ ಸಾಧ್ಯತೆಯಿದೆ. ಕಾರ್ಯಕ್ರಮ ಮುಗಿದ ಬಳಿಕ ವಿನಯ್ ಗುರೂಜಿಯನ್ನು ಭೇಟಿಯಾಗುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಅಲ್ಲದೇ ವಿನಯ್ ಗುರೂಜಿ ಜೊತೆ ೩೦ ನಿಮಿಷ ಮಾತುಕತೆಗೆ  ಲಕ್ಷ್ಮೀ ಹೆಬ್ಬಾಳ್ಕರ್ ಸಮಯ ಕೇಳಿದ್ದು, ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡುವ ಸಾಧ್ಯತೆಯಿದೆ.

Tap to resize

Latest Videos

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ

ಡಿಕೆಶಿ, ಲಕ್ಷ್ಮಿ ಮೇಲಿನ ಆರೋಪದ ಹಿಂದೆ ಶಾ, ಷಡ್ಯಂತ್ರ: ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮಾಡಿರುವ ಆರೋಪ, ಹತಾಶೆಯ ನುಡಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇನ್ನಿತರೆ ಬಿಜೆಪಿ ನಾಯಕರು ಮಾಡಿರುವ ಷಡ್ಯಂತ್ರ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ ಬಾಬು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ರಾಜು ಅವರು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್‌ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಕೀಳು ಮಟ್ಟದ ಟೀಕೆ, ಆರೋಪ ಮಾಡಿದ್ದಾರೆ ಎಂದರು. 

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯವರು ರಮೇಶ್‌ ಜಾರಕಿಹೊಳಿ ಅವರನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷ ಹಾಗೂ ಪಕ್ಷದ ನಾಯಕರ ಮೇಲೆ ಅಪಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ವೈಪಲ್ಯ ಮುಚ್ಚಿಕೊಳ್ಳಲು ಇಂತಹ ಷಡ್ಯಂತ್ರ ನಡೆಸಲಾಗಿದೆ. ಅಮಿತ್‌ ಶಾ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಬೆಂಬಲ ಪಡೆದೇ ಮಾತನಾಡುತ್ತಿರುವುದಾಗಿ ರಮೇಶ್‌ ಜಾರಕಿಹೊಳಿ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ದೂರಿದರು. ಸಿಡಿ ಪ್ರಕರಣದಲ್ಲಿ ಇದುವರೆಗೂ ರಮೇಶ್‌ ಜಾರಕಿಹೊಳಿಗೆ ಕ್ಲೀನ್‌ಚಿಟ್‌ ಸಿಕ್ಕಿಲ್ಲ. ಎಸ್‌ಐಟಿ ನೀಡಿರುವ ವರದಿ ಸಂಬಂಧ ಸುಪ್ರೀಂಕೋರ್ಚ್‌ನಲ್ಲಿ ವಿಚಾರಣೆ ಬಾಕಿ ಇದೆ. 

ಕ್ರಿಕೆಟಿಗ ಧೋನಿ ಶಾಲೆ ಸೇರಿ 500+ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್‌

ಈ ವಿಚಾರವಾಗಿ ಜಾರಕಿಹೊಳಿ ಸ್ವತಃ ಯಾವುದೇ ಠಾಣೆಯಲ್ಲಿ ಇದುವರೆಗೆ ದೂರು ದಾಖಲಿಸಿಲ್ಲ. ಆದರೆ, ಈಗ ಏಕಾಏಕಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿರುವುದು ಅನುಮಾನ ಸೃಷ್ಟಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸಿಬಿಐಗೆ ವಹಿಸಲು ಒತ್ತಾಯಿಸಿರುವ ಸಾಧ್ಯತೆ ಇದೆ. ಸಿಬಿಐ ತನಿಖೆಗೆ ಆಗ್ರಹಿಸಿರುವ ರಮೇಶ್‌ ಜಾರಕಿಹೊಳಿ ಅವರಿಗೆ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಅಥವಾ ಸಿಬಿಐ ಮೂಲಕ ಬೇರೆಯವರ ಮೇಲೆ ಪ್ರಕರಣ ದಾಖಲಿಸುವ ಹುನ್ನಾರ ಅಡಗಿದೆಯಾ ಎಂದು ಪ್ರಶ್ನಿಸಿದರು.

click me!