ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಒಕ್ಕಲಿಗ ಸಮಾಜಕ್ಕೆ ರಾಜ್ಯಕ್ಕೆ ಈ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರು (ಜ.09): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಒಕ್ಕಲಿಗ ಸಮಾಜಕ್ಕೆ ರಾಜ್ಯಕ್ಕೆ ಈ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಹಾಸನ ಜಿಲ್ಲಾ ಬಳಗವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಚ್.ಡಿ. ದೇವೇಗೌಡರು ಗ್ರಾಪಂ, ತಾಪಂ, ಜಿಪಂಗೆ ಮೀಸಲಾತಿಯನ್ನು ಕೊಟ್ಟಿದ್ದು, ಹೆದ್ದಾರಿಗಳು, ಬೆಂಗಳೂರಿನ ಮೆಟ್ರೋ ರೈಲು, ನೀರಾವರಿ ಯೋಜನೆ, ಸಾಲ ಮನ್ನಾ ಯೋಜನೆಯನ್ನು ನೀಡಿದರು ಎಂದರು. ಪಂಜಾಬಿನಲ್ಲಿ ದೇವೇಗೌಡರ ಹೆಸರನ್ನು ಭತ್ತದ ತಳಿಗೆ ಇಟ್ಟಿದ್ದಾರೆ. ರಾಗಿ ಮುದ್ದೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಮೈಸೂರಿನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ದೇವೇಗೌಡರು, ಒಕ್ಕಲಿಗ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಅಧಿಕಾರ, ಐಶ್ವರ್ಯ ಯಾವುದೂ ಶಾಶ್ವತವಲ್ಲ. ಜಾತಿ ಹಿಂದೆ ಹೋದವರು ಯಾರು ಬೆಳೆದಿಲ್ಲ. ಆದ್ದರಿಂದ ಎಲ್ಲಾ ಸಮಾಜದವರನ್ನು ಪ್ರೀತಿಸಿದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ಹೇಳಿದರು.
undefined
ದಲಿತ ಮತಗಳು ಬಿಜೆಪಿಗೆ ಹೆಚ್ಚು ಬರುವಂತೆ ಸಂಘಟಿಸಿ: ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್ ಸಿಂಗ್ ಆರ್ಯ
ಮತದಾರರಿಂದ ಜೆಡಿಎಸ್‌ಗೆ ಬೆಂಬಲ: ಈ ಬಾರಿಯ ಚುನಾವಣೆಯಲ್ಲಿಯೂ ಜೆಡಿಎಸ್ ಸೋಲಿಸಲಾಗದು, ಪ್ರಾದೇಶಿಕ ಪಕ್ಷ ಉಳಿಸಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡರ ಕೈ ಬಲಪಡಿಸಲು ಮತದಾರರು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಯು ಕೋಲಾರದಿಂದ ಬೀದರ್‌ವರೆಗೆ ಮುಂದುವರೆದಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮಾಚ್‌ರ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆಯುತ್ತದೆ. ಈ ಭಾಗದಲ್ಲಿ ಗೆಲ್ಲಲು ಬಿಜೆಪಿ ಏನೇ ತಂತ್ರ ಮಾಡಿದರೂ ಸಾಧ್ಯವಾಗದು ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿ ಎಂಬ ಕಾರಣಕ್ಕೆ ಮತದಾರರು ಹೆಚ್ಚಿನ ಸ್ಥಾನವನ್ನು ಜೆಡಿಎಸ್‌ಗೆ ನೀಡುತ್ತಾರೆ. ಈಗಾಗಲೇ ಕೆ.ಆರ್.ನಗರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಟಿ.ನರಸೀಪುರದಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ. ಉಳಿದ ಕ್ಷೇತ್ರದಲ್ಲಿಯೂ ಶಕ್ತಿಮೀರಿ ಶ್ರಮಿಸಿ ಗೆಲ್ಲುತೇತವೆ. ಎಚ್.ಡಿ. ಕೋಟೆ ಕ್ಷೇತ್ರಕ್ಕೆ ಜಯಪ್ರಕಾಶ್ ಚಿಕ್ಕಣ್ಣ ಅವರ ಹೆಸರು ಒಪ್ಪಿಗೆಯಾಗಿದೆ ಎಂದರು. ಜ.15ರ ನಂತರ ಜಯಪ್ರಕಾಶ್ ಅವರನ್ನು ಘೋಷಣೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಗೆಲ್ಲುವವರಿಗೆ ಟಿಕೆಟ್ ಕೊಡಬೇಕು. ಗೆಲ್ಲೋದು ಮುಖ್ಯ. ನಾವು ಗೆಲ್ಲದಿದ್ದರೆ ಸರ್ಕಾರ ಅಧಿಕಾರಕ್ಕೆ ಬರುವುದು ಹೇಗೆ?, ಜಯಪ್ರಕಾಶ್ ಚಿಕ್ಕಣ್ಣ ಗೆಲ್ಲುವ ಕಾರಣ ಜಿಲ್ಲೆಯ ಎಲ್ಲಾ ನಾಯಕರೂ ಒಬ್ಬರನ್ನೇ ಶಿಫಾರಸ್ಸು ಮಾಡಿದ್ದೇವೆ ಎಂದರು.
Kodagu: ಡಾ.ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣ ಉದ್ಘಾಟಿಸಿದ ಸಿದ್ದಲಿಂಗ ಮಹಾಸ್ವಾಮೀಜಿ
ಇತಿಮಿತಿ ಅರ್ಥಮಾಡಿಕೊಂಡು ಮಾತನಾಡಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ್ದು ಸರಿಯಲ್ಲ. ಯಾರೇ ಆದರೂ ಇತಿಮಿತಿ ಅರ್ಥಮಾಡಿಕೊಂಡು ಮಾತನಾಡಬೇಕು. ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿ. ಅವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಎಂದರು. ಅವರವರ ಕ್ಷೇತ್ರಗಳಲ್ಲಿ ಗೆಲ್ಲಲಾಗದವರು ರಾಜ್ಯ, ರಾಷ್ಟ್ರೀಯ ವಿಚಾರಗಳನ್ನು ಮಾತನಾಡುತ್ತಾರೆ. ಆದಿಚುಂಚನಗಿರಿಯ ಹಿರಿಯ ಶ್ರೀಗಳು ಇದ್ದಾಗ ಭೈರವೇಶ್ವರನ ಸನ್ನಿಧಿಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಯಾರೇ ಬಂದರೂ ಕುಳಿತು ನಮಸ್ಕಾರ ಮಾಡುತ್ತಿತ್ತು. ನಾಯಿಗೆ ಇರುವ ನಿಯತ್ತು ಮನುಷ್ಯರಿಗೆ ಇಲ್ಲ. ನಾಯಿ ನಾರಾಯಣಸ್ವಾಮಿ ಎನ್ನುವುದರಿಂದ ಚಿಕ್ಕದಾಗಿ ನಾಯಿ ಅಂತ ಕರೆಯಲಾಗುತ್ತಿದೆ ಎಂದರು.