ಸುಳ್ಯದ ಜಯನಗರದ ಯುವಕನೊಬ್ಬ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕುರಿತು ಕೀಳುಮಟ್ಟದ ಮತ್ತು ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾನೆಂದು ಆರೋಪಿಸಿ ಬುಧವಾರ ರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ತಂಡ ಯುವಕನ ಮನೆಗೆ ಆಗಮಿಸಿ ಪೋಸ್ಟ್ ಡಿಲೀಟ್ ಮಾಡಲು ಒತ್ತಾಯಿಸಿದ ಘಟನೆ ನಡೆದಿದೆ.
ಸುಳ್ಯ (ಮೇ.26) : ಸುಳ್ಯದ ಜಯನಗರದ ಯುವಕನೊಬ್ಬ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕುರಿತು ಕೀಳುಮಟ್ಟದ ಮತ್ತು ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾನೆಂದು ಆರೋಪಿಸಿ ಬುಧವಾರ ರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ತಂಡ ಯುವಕನ ಮನೆಗೆ ಆಗಮಿಸಿ ಪೋಸ್ಟ್ ಡಿಲೀಟ್ ಮಾಡಲು ಒತ್ತಾಯಿಸಿದ ಘಟನೆ ನಡೆದಿದೆ.
ಜಯನಗರದ ಪ್ರಮೀತ್ ಮನೆಗೆ ಬಂದ ಶಾಸಕರ ಅಭಿಮಾನಿ ಬಳಗದ ತಂಡ, ಫೇಸ್‌ಬುಕ್‌ನಲ್ಲಿ ಬರೆದ ಪೋಸ್ ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡೂ ತಂಡದವರನ್ನು ಸುಳ್ಯ ಠಾಣೆಗೆ ಕರೆದೊಯ್ದರು. ಬಳಿಕ ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಆಗಮಿಸಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ.
ಪುತ್ತೂರಿನ ಕೈ ಅಭ್ಯರ್ಥಿ ಸಹೋದರನ ಮನೆ ಮೇಲೆ ಐಟಿ ರೈಡ್: ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶ
ಪ್ರಮೀತ್ ಎಂಬ ಯುವಕ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಬರಹ ನೋಡಿದ ಶಾಸಕರ ಅಭಿಮಾನಿ ಬಳಗದ ಯುವಕರು, ಯುವಕನಿಗೆ ಕರೆ ಮಾಡಿ ಪೋಸ್ಟ್ ಡಿಲೀಟ್ ಮಾಡುವಂತೆ ತಿಳಿಸಿದ್ದಾರೆ. ಈ ಸಂದರ್ಭ ಆತ ಅದನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೇಳಿರುವುದಾಗಿಯೂ ಪರಸ್ಪರ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಬಳಿಕ ಪುತ್ತೂರಿನ ಸುಮಾರು 15ಕ್ಕೂ ಹೆಚ್ಚು ಮಂದಿ ಇದ್ದ ತಂಡವೊಂದು ಜಯನಗರದ ಪ್ರಮೀತ್‌ನ ಮನೆಯನ್ನು ಹುಡುಕಿ ಜಯನಗರಕ್ಕೆ ಹೋಗಿ ಪೋಸ್ಟ್ ಡಿಲೀಟ್ ಮಾಡಲು ಒತ್ತಾಯಿಸಿದ್ದಾರೆ. ಆಗಲೂ ಪ್ರಮೀತ್ ಡಿಲೀಟ್ ಮಾಡಲು ಒಪ್ಪದಿದ್ದಾಗ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಘಟನೆ ತಿಳಿದ ಸ್ಥಳೀಯ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು. ಈ ವೇಳೆ ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ಶಾಹಿದ್ ಅಫ್ರಿದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಜನರ ಗುಂಪನ್ನು ಚದುರಿಸಿ ಪುತ್ತೂರಿನಿಂದ ಬಂದಿದ್ದ ಯುವಕರನ್ನು ಮತ್ತು ಪ್ರಮೀತ್ ಅವರನ್ನು ಸುಳ್ಯ ಠಾಣೆಗೆ ಕರೆದೊಯ್ದರು. ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡು ಪೋಸ್ಟ್ ಡಿಲೀಟ್ ಮಾಡಲಾಗಿದೆ. ಮಾತುಕತೆಯ ಸಂದರ್ಭ ಸುಳ್ಯದ ಕೆಲವು ನಾಯಕರು ಕೂಡಾ ಉಪಸ್ಥಿತರಿದ್ದರು.
ಘಟನೆ ಸಂಬಂಧ ಶಾಸಕ ಅಶೋಕ್ ರೈ ಪ್ರತಿಕ್ರಿಯೆ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ(Ashok rai MLA) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಅಭಿಮಾನಿಗಳ ಗೂಂಡಾಗಿರಿ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಶಾಸಕರು. ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ದೌರ್ಜನ್ಯ ನಡೆದಿತ್ತು. ಅದೇ ವಿಚಾರಕ್ಕೆ ನನ್ನ ಅಪ್ಪ-ಅಮ್ಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಸುಳ್ಯದ ಯುವಕ ಹಾಕಿದ್ದ. ಅದನ್ನುನನ್ನ ಅಭಿಮಾನಿಗಳು ಹೋಗಿ ಪ್ರಶ್ನಿಸಿದ್ದಾರೆ. ಸಮಾಜದಲ್ಲಿ ಇಂಥ ಪ್ರಶ್ನೆ ಮಾಡುವ ವಿಚಾರ ಆಗಬೇಕು, ನನ್ನ ಗಮನಕ್ಕೆ ಆ ವಿಚಾರ ಬಂದಿಲ್ಲ.
ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್
ಬಿಜೆಪಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದೆ. ಬಿಜೆಪಿಯವರೇ ಪೋಲೀಸರಿಗೆ ಒತ್ತಡ ಹೇರಿ ಯುವಕರಿಗೆ ಹೊಡಿಸಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು ಈ ವಿಚಾರವಾಗಿ ಒತ್ತಡ ಹೇರಿದವರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ಅಧಿಕೃತವಾಗಿ ದಾಖಲೆ ದೊರೆತರೆ ಅಗತ್ಯ ಬಿದ್ದರೆ ಸಮಾಜದ ಮುಂದೆ ಇಡುವೆ ಎಂದರು.