ರಾಮಭಕ್ತ ಹನುಮನ ದೇವಸ್ಥಾನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಶಾಸಕ ಬೆಲ್ಲದ!

By Govindaraj S  |  First Published Jan 5, 2024, 5:01 PM IST

ಇದೇ ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಶ್ರೀರಾಮ ಚಂದ್ರನ ಅಪ್ಪಟ ಭಕ್ತ ಆಂಜನೇಯ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರ ವಿರಾಜಮಾನನಾದರೆ ಇತ್ತ ರಾಮನ ಭಕ್ತನಾದ ಹನುಮನ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ.


ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜ.05): ಇದೇ ಜ.22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಶ್ರೀರಾಮ ಚಂದ್ರನ ಅಪ್ಪಟ ಭಕ್ತ ಆಂಜನೇಯ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರ ವಿರಾಜಮಾನನಾದರೆ ಇತ್ತ ರಾಮನ ಭಕ್ತನಾದ ಹನುಮನ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಗೊಳ್ಳಲಿದ್ದು, ಈ ದೇವಸ್ಥಾನ ಅಭಿವೃದ್ದಿಯತ್ತ ಸಾಗುತ್ತಿದೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೆತ್ರದ ಶಾಸಕ ಅರವಿಂದ ಬೆಲ್ಲದ ಇಚ್ಚಾಶಕ್ತಿಯಿಂದ ಅಭಿವೃದ್ದಿಯತ್ತ ನಡೆಯುತ್ತಿದೆ.

Tap to resize

Latest Videos

ಇದು ಧಾರವಾಡದ ನುಗ್ಗಿಕೇರಿ ಆಂಜನೇಯನ ದೇವಸ್ಥಾನ ನುಗ್ಗಿಕೇರಿ ಆಂಜನೇಯನ ದೇವಸ್ಥಾನ ಅತ್ಯಂತ ಪ್ರಸಿದ್ಧ ದೇವಸ್ಥಾನ ಶನಿವಾರವಂತೂ ಈ ದೇವಸ್ಥಾನ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ ಪ್ರತಿದಿನ ಈ ದೇವಸ್ಥಾನಕ್ಕೆ ಸಾವಿರಾರು ಜನ ಬಂದು ರಾಮಭಕ್ತ ಹನುಮನ ದರ್ಶನ ಪಡೆದುಕೊಂಡು ಹೋಗುತ್ತಾರೆ ಇಂತಹ ಪ್ರಸಿದ್ಧ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಇದಕ್ಕಾಗಿ ಶಾಸಕ ಅರವಿಂದ ಬೆಲ್ಲದ 10 ಕೋಟಿ ರೂಪಾಯಿ ಅನುದಾನ ತಂದು ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಮುಂದಾಗಿದ್ದಾರೆ. 

ಇದಷ್ಟೇ ಅಲ್ಲ ಧಾರವಾಡದ ಟೋಲನಾಕಾದಿಂದ ನುಗ್ಗಿಕೇರಿವರೆಗೆ ಇರುವ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಯನ್ನಾಗಿ ಪರಿವರ್ತಿಸಿ ಆ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ಉದ್ದೇಶ ಶಾಸಕ ಬೆಲ್ಲದ ಅವರದ್ದಾಗಿದೆ..ಈ ರಸ್ತೆ ನಿರ್ಮಾಣಕ್ಕೆ ಅಂದಾಜು 40 ಕೋಟಿ ರೂಪಾಯಿ ಅನುದಾನ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರದ ವಿಶೇಷ ನಿಧಿಯಿಂದ ಈ ಕಾಮಗಾರಿಗಳು ನಡೆಯಲಿವೆ. ಈಗಾಗಲೇ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣದ ಬಗ್ಗೆ ಹಾಗೂ ಆಂಜನೇಯ ದೇವಸ್ಥಾನದಲ್ಲಿ ನಡೆಯಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಸ್ಥಳವನ್ನು ಶಾಸಕ ಬೆಲ್ಲದ ವೀಕ್ಷಿಸಿದ್ದಾರೆ. ಟೋಲನಾಕಾದಿಂದ ನುಗ್ಗಿಕೇರಿವರೆಗೆ ನಡೆಯಲಿರುವ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಒಳ್ಳೆಯ ಫುಟಪಾತ್ ವಿದ್ಯುತ್ ವ್ಯವಸ್ಥೆ ಹಾಗೂ ವಿಶ್ರಾಂತಿ ಆಸನಗಳ ವ್ಯವಸ್ಥೆ ಕೂಡ ಇರಲಿದೆ. 

ಶಿಕ್ಷಣಕ್ಕೆ ವಿಶ್ವವೇ ಧಾರವಾಡದತ್ತ ತಿರುಗಿ ನೋಡುವಂತಾಗಬೇಕು: ಅರವಿಂದ ಬೆಲ್ಲದ

ಒಟ್ಟಾರೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಯಾದ ಬೆನ್ನಲ್ಲೇ ರಾಮಭಕ್ತ ಹನುಮನ ದೇವಸ್ಥಾನ ಕೂಡ ಧಾರವಾಡದಲ್ಲಿ ಅಭಿವೃದ್ಧಿ ಹೊಂದಲಿದ್ದು, ನುಗ್ಗಿಕೇರಿ ದೇವಸ್ಥಾನ ಮತ್ತಷ್ಟು ಪ್ರಸಿದ್ಧಿ ಹೊಂದುವುದರಲ್ಲಿ ಸಂದೇಹವೇ ಇಲ್ಲ. ಒಟ್ಟಿನಲ್ಲಿ ಜನೇವರಿ 22 ರಂದು ಅಯೋದ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ, ಗೊಳ್ಳುತ್ತಿದೆ ಇತ್ತ ರಾಮನ ಭಕ್ತ ಆಂಜನೇಯ ಮಂದಿರ ಅಭಿವೃದ್ಧಿ ಕಾಣಲು ಮುಂದಾಗಿದೆ ಸುಮಾರು 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಶಾಸಕ ಅರವಿಂದ ಬೆಲ್ಲದ ಅವರಿಗೆ ಹೀಂದೂ ಸಮಾಜದ ಜನರು,ಧಾರವಾಡ ಜನತೆ ಆಲ್ ದಿ ಬೆಸ್ಟ ಹೇಳಿದೆ...ಶಾಸಕ ಅರವಿಂದ ಬೆಲ್ಲದ ಅವರಿಗೆ ಇನ್ನಷ್ಡು ಅಭಿವೃದ್ಧಿ ಕೆಲಸ ಮಾಡಲು ಆ ಆಂಜನೇಯ ಶಕ್ತಿ ಕೊಡಲಿ ಎನ್ನುವುದೆ ನಮ್ಮ‌ಆಶಯ.

click me!