ಜನಮಾನಸದಲ್ಲಿ ಎಸ್‌.ಬಂಗಾರಪ್ಪರಿಗೆ ಶಾಶ್ವತ ಸ್ಥಾನ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Oct 29, 2023, 3:00 AM IST

ಬಡಜನರ ಕಷ್ಟದ ಬಗ್ಗೆ ಅಪಾರ ಸಹಾನುಭೂತಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಸಮಾಜದಲ್ಲಿನ ಕಟ್ಟಕಡೆಯ ಬಡಮಕ್ಕಳು ಉನ್ನತ ಶಿಕ್ಷಣದ ಮೂಲಕ ಸಮುದಾಯದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂಬ ಮಹದಾಸೆ ಹೊಂದಿದ್ದರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 


ಶಿಕಾರಿಪುರ (ಅ.29): ಬಡಜನರ ಕಷ್ಟದ ಬಗ್ಗೆ ಅಪಾರ ಸಹಾನುಭೂತಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಸಮಾಜದಲ್ಲಿನ ಕಟ್ಟಕಡೆಯ ಬಡಮಕ್ಕಳು ಉನ್ನತ ಶಿಕ್ಷಣದ ಮೂಲಕ ಸಮುದಾಯದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂಬ ಮಹದಾಸೆ ಹೊಂದಿದ್ದರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಉಳ್ಳಿ ಫೌಂಡೇಶನ್ ವತಿಯಿಂದ ತಾಲೂಕಿನ ಎಂಸಿಆರ್‌ಪಿ ಕಾಲೋನಿಯ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿನ ಅಲೆಮಾರಿ ಜನಾಂಗದ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪುಸ್ತಕ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸುವ ಜತೆಗೆ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿ ಅವರು ಮಾತನಾಡಿದರು. 

ಈ ದಿಸೆಯಲ್ಲಿ ಬಂಗಾರಪ್ಪ ಅವರ ಅಭಿಲಾಷೆಗೆ ಪೂರಕವಾಗಿ ಉಳ್ಳಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ ಎಂದರು. ಬಂಗಾರಪ್ಪ ಅವರು ಬಡವರ ಕಷ್ಟಕ್ಕೆ ಸ್ಪಂದಿಸುವ ಬಹುದೊಡ್ಡ ಗುಣ ಹೊಂದಿದ್ದರು. ಎಂತಹ ಸಂದರ್ಭದಲ್ಲಿಯೂ ಕಷ್ಟ ಎಂದು ಬಂಗಾರಪ್ಪ ಅವರ ಬಳಿ ಬಂದ ಜನತೆಗೆ ನಿರಾಸೆ ಮಾಡದೇ ಮಾನವೀಯತೆ ನೆಲೆಗಟ್ಟಿನಲ್ಲಿ ಕೂಡಲೇ ಸ್ಪಂದಿಸುವ ಔದಾರ್ಯತೆ ಬೆಳೆಸಿಕೊಂಡಿದ್ದರು. ಆದ್ದರಿಂದ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದ ಬಣ್ಣಿಸಿದರು. ಇಲ್ಲಿನ ಅಲೆಮಾರಿ ಜನಾಂಗದವರ ಕಷ್ಟ-ಸುಖ ಆಲಿಸಿದ್ದೇನೆ. ಮೂಲಸೌಕರ್ಯಗಳಿಂದ ಅವರು ವಂಚಿತರಾಗಿದ್ದು, ಇವರ ಸಮಸ್ಯೆಗೆ ಶೀಘ್ರದಲ್ಲಿ ಸರ್ಕಾರದ ಹಂತದಲ್ಲಿ ದೊರೆಯಬೇಕಾದ ಸೌಲಭ್ಯಗಳನ್ನು ಹಾಗೂ ಶಾಶ್ವತ ಶಾಲೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

Tap to resize

Latest Videos

ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಳ್ಳಿ ಫೌಂಡೇಶನ್‌ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್. ಬಂಗಾರಪ್ಪ. ಅವರ ಹುಟ್ಟುಹಬ್ಬವನ್ನು ಅವರ ಆಶಯದಂತೆ ಬಡಮಕ್ಕಳಿಗೆ ಪುಸ್ತಕ ಸ್ಕೂಲ್‌ ಬ್ಯಾಗ್‌ ವಿತರಿಸುವ ಮೂಲಕ ಆಚರಿಸಿದ ಹೆಮ್ಮೆ ಹೊಂದಿದ್ದೇವೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್, ಮುಖಂಡ ಎಸ್‌.ಪಿ. ನಾಗರಾಜ್ ಗೌಡ, ದಯಾನಂದ ಗಾಮ, ಸ.ನ. ಮಂಜಪ್ಪ, ಸುರೇಶ್ ಗುಡ್ಡಳ್ಳಿ, ರಾಜು ಉಡುಗಣೆ, ಸಂತೋಷ ಎಂ., ಗಿರೀಶ್ಎಂ .ಸಿ., ನಾಗರಾಜ್ ನಾಯಕ್, ಶರತ್, ಪರಶುರಾಮ್, ರೂಪೇಶ್, ನಾಗರಾಜ್ ಬನ್ನೂರು, ದೇವೆಂದ್ರಪ್ಪ, ದೇವರಾಜ್ ಸಹಿತ ಹಲವರು ಹಾಜರಿದ್ದರು.

click me!