ಬಳ್ಳಾರಿ: ಅಲ್ಪಸಂಖ್ಯಾತರ ಮತ ಒಗ್ಗೂಡಿಸಲು ಸಚಿವ ಜಮೀರ್ ಯತ್ನ, ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನೆಪದಲ್ಲಿ ಪ್ರಚಾರ..?

Published : Sep 27, 2023, 10:45 AM IST
ಬಳ್ಳಾರಿ: ಅಲ್ಪಸಂಖ್ಯಾತರ ಮತ ಒಗ್ಗೂಡಿಸಲು ಸಚಿವ ಜಮೀರ್ ಯತ್ನ, ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನೆಪದಲ್ಲಿ ಪ್ರಚಾರ..?

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತ ಸಮುದಾಯ ಶೇ.100 ರಷ್ಟು ಕಾಂಗ್ರೆಸ್ ಪರ ನಿಲ್ಲಬೇಕು ಯಾಕೆಂದರೆ ಅಲ್ಪ ಸಂಖ್ಯಾತರ ಬಲವೇ ಕಾಂಗ್ರೆಸ್. ಹೀಗಾಗಿ ಯಾವುದೇ ಕಾರಣಕ್ಕೂ ಮತ ವಿಭಜನೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ ಸಚಿವ ಜಮೀರ್‌ ಅಹ್ಮದ್ ಖಾನ್‌. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಸೆ.27):  ಲೋಕಸಭೆ ಚುನಾವಣೆಗೆ ಇನ್ನೂ ಎಂಟು ತಿಂಗಳು ಬಾಕಿ ಇರುವಂತೆಯೇ ಸಚಿವ ಜಮೀರ್ ಅಹ್ಮದ್ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪ್ರಚಾರ ಆರಂಭ ಮಾಡಿದ್ದಾರೆ. ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನೆಪದಲ್ಲಿ ಕಳೆದೆರಡು ದಿನಗಳಿಂದ ಹೊಸಪೇಟೆ ಸಂಡೂರು, ಬಳ್ಳಾರಿ ಭಾಗದಲ್ಲಿರೋ ಸಚಿವ ಜಮೀರ್‌ ಅಹ್ಮದ್ ಖಾನ್‌ ಸಮುದಾಯದ ಮುಖಂಡರ ಮನೆ ಹಾಗೂ ಮಸೀದಿಗಳಲ್ಲಿ ಚುನಾವಣೆ ಪ್ರಚಾರ ಮಾಡ್ತಿದ್ದಾರೆ‌ ಎನ್ನುವ ಮಾತುಗಳು ಕೇಳಿ ಬರುತ್ತಿದೆ.  ಇದಕ್ಕೆ ಸಾಕ್ಷಿ ಅವರು ಹೇಳ್ತಿರೋ ಈ‌ ಮಾತುಗಳು.  

ಹೌದು, ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತ ಸಮುದಾಯ ಶೇ.100 ರಷ್ಟು ಕಾಂಗ್ರೆಸ್ ಪರ ನಿಲ್ಲಬೇಕು ಯಾಕೆಂದರೆ ಅಲ್ಪ ಸಂಖ್ಯಾತರ ಬಲವೇ ಕಾಂಗ್ರೆಸ್. ಹೀಗಾಗಿ ಯಾವುದೇ ಕಾರಣಕ್ಕೂ ಮತ ವಿಭಜನೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಮತ್ತೊಮ್ಮೆ ಶ್ರೀರಾಮುಲು V/S ನಾಗೇಂದ್ರ: ಉಭಯ ನಾಯಕರ ಮಧ್ಯೆ ಲೋಕಸಭೆ ಫೈಟ್..?

ಸಮುದಾಯದ ಮುಖಂಡರ ಬಳಿ ಮನವಿ ಮಾಡಿದ ಜಮೀರ್

ಸರ್ಕಾರಿ ಕಾರ್ಯಕ್ರಮ, ಜನತಾ ದರ್ಶನ, ಸಭೆ,ಸಮಾರಂಭದ ಜೊತೆಗೆ ಇಂದು ಸಂಡೂರಿನ ಚಪ್ಪರದ ಹಳ್ಳಿಯಲ್ಲಿ ಜಾಮಿಯಾ ಮಸೀದಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಾದಿ ಮಹಲ್ ಕಾಮಗಾರಿ ವೀಕ್ಷಿಸಿದ ಜಮೀರ್ ಅಹ್ಮದ್  ಸಮುದಾಯದ ಮುಖಂಡರ ಸಭೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮತದಾನ ಮಾಡಲು ನಿರ್ಲಕ್ಷ್ಯ ಮಾಡಬೇಡಿ. ನೀವು ಒಂದು ಮತ ಹಾಕದಿದರೇ ಬಿಜೆಪಿಗೆ ಎರಡು ಮತದ ಲಾಭವಾದಂತೆ. ದೇಶದ ಹಿತಾಸಕ್ತಿಗಾಗಿ ಮತ್ತು ಇಡೀ ಸಮುದಾಯ ಒಳಿತಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಹೇಳಿದರು. ಮುಂದಿನ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ವಿಧಾನ ಸಭೆ ಚುನಾವಣೆ ರೀತಿಯಲ್ಲೇ ಲೋಕಸಭೆ ಚುನಾವಣೆಯಲ್ಲೂ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪರ ನಿಲ್ಲಬೇಕು ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಮಾತ್ರ ನೆಮ್ಮದಿ ಸಾಧ್ಯ

ಇನ್ನೂ ಒಂದಷ್ಟು ಭಾವನಾತ್ಮಕವಾಗಿ ಮಾತನಾಡಿರೋ ಸಚಿವ ಜಮೀರ್ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶದಲ್ಲಿ ನೆಮ್ಮದಿ ಸಾಧ್ಯ. ದೇಶದಲ್ಲಿ  ಕಾಂಗ್ರೆಸ್ ಅಧಿಕಾರ ನಡೆಸಿದಾಗಲೆಲ್ಲ ಜನಪರ ಅಭಿವೃದ್ಧಿ ಯೋಜನೆ ರೂಪಿಸಿದೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಗ್ಯಾರಂಟಿ ಯೋಜನೆ ಜಾರಿಗೂಳಿಸಿದ್ದು, ಕೋಟ್ಯಂತರ ಕುಟುಂಬಗಳು ನೆರವು ಪಡೆದಿವೆ. ಲೋಕಸಭೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಹಕಾರಿಯಾಗ್ತದೆ ಎಂದಿದ್ದಾರೆ.

ಬಳ್ಳಾರಿಯಲ್ಲಿ ಮತ್ತೊಮ್ಮೆ ಜೋರಾದ ರೆಡ್ಡಿ ವರ್ಸಸ್ ರೆಡ್ಡಿ ಫೈಟ್: ಸ್ಥಳದಲ್ಲಿ ಬಿಗುವಿನ ವಾತಾವರಣ

ಜಾಮಿಯಾ ಮಸೀದಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಾದಿ ಮಹಲ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎರಡು ಹಂತದಲ್ಲಿ ತಲಾ 50 ಲಕ್ಷ ನೆರವು ಬಿಡುಗಡೆ ಮಾಡಲಾಗುವುದು ಎಂದರು. ಇನ್ನೂ ಇದೇ ವೇಳೆ 11 ಮಸೀದಿಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಗತ್ಯ ಅರ್ಥಿಕ ನೆರವು ನೀಡಲಾಗುವುದು ಎಂದ ಹೇಳಿದರು.

ಸರ್ಕಾರಿ ಸೌಲಭ್ಯ ಬಳಸಿಕೊಳ್ಳುಲು ಕರೆ

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಲಯ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ ವತಿಯಿಂದ ಶಿಕ್ಷಣ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹಲವಾರು ಯೋಜನೆಗಳಿದ್ದು ಸಮುದಾಯ ಅದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಾಸಕ ತುಕಾರಾಂ, ಮಸೀದಿ ಮುಖ್ಯಸ್ಥರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ