ಅಧಿಕಾರದ ಆಸೆಗೆ ಬಿಜೆಪಿ ಸಂಗ ಮಾಡಿದ ಜೆಡಿಎಸ್‌ನ ನಿಜ ಬಣ್ಣ ಬಯಲು: ಸಚಿವ ತಿಮ್ಮಾಪೂರ

By Kannadaprabha News  |  First Published Sep 26, 2023, 12:34 PM IST

ಆಗ ಬಿಜೆಪಿ ಮತ್ತು ಜೆಡಿಎಸ್‌ನವರು ಕದ್ದು-ಮುಚ್ಚಿ ಸೇರುತ್ತಿದ್ದರು. ಈಗ ಓಪನ್ ಆಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಿಂದೆ ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಾಗ ನಮಗೆ ಆದ ಎಫೆಕ್ಟ್ ಈ ಬಾರಿ ಬಿಜೆಪಿಗೆ ಆಗುತ್ತದೆ: ಸಚಿವ ಆರ್.ಬಿ.ತಿಮ್ಮಾಪೂರ 


ಬಾಗಲಕೋಟೆ(ಸೆ.26): ಜೆಡಿಎಸ್ ಪಕ್ಷ ತನ್ನನ್ನು ತಾನು ಸಮಾಜವಾದಿ, ಜಾತ್ಯತೀತ ಎಂದು ಹೇಳಿಕೊಳ್ಳುತ್ತಿತ್ತು. ಈಗ ಎಲ್ಲಿ ಹೋಯಿತು ಅವರ ಜಾತ್ಯತೀತ ಮನೋಭಾವದ. ಅಧಿಕಾರದ ಆಸೆಗೆ ಬಿಜೆಪಿ ಸಂಗ ಮಾಡಿರುವ ಜೆಡಿಎಸ್‌ನ ನಿಜ ಬಣ್ಣ ಈಗ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ವ್ಯಂಗ್ಯವಾಡಿದರು.

ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗ ಬಿಜೆಪಿ ಮತ್ತು ಜೆಡಿಎಸ್‌ನವರು ಕದ್ದು-ಮುಚ್ಚಿ ಸೇರುತ್ತಿದ್ದರು. ಈಗ ಓಪನ್ ಆಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಿಂದೆ ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಾಗ ನಮಗೆ ಆದ ಎಫೆಕ್ಟ್ ಈ ಬಾರಿ ಬಿಜೆಪಿಗೆ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ನಮ್ಮ ಪಕ್ಷಕ್ಕೆ ಕಡಿಮೆ ಸೀಟ್ ಬಂದಿದ್ದವು. ಆ ಪರಿಸ್ಥಿತಿ ಈಗ ಬಿಜೆಪಿಗೆ ಬರುತ್ತದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

Latest Videos

undefined

ಬಿಜೆಪಿ ಬಗ್ಗೆ ಹಗುರು ಮಾತನಾಡುವುದು ನಿಲ್ಲಿಸಿ: ಸಚಿವ ತಿಮ್ಮಾಪುರಗೆ ಎಚ್ಚರಿಕೆ ಕೊಟ್ಟ ಶಾಂತಗೌಡ

ಸಿಎಂ ಮಾಡುವ ಪವರ್ ಫುಲ್ ಸ್ಥಾನವನ್ನು ದಲಿತರಿಗೆ ಕಾಂಗ್ರೆಸ್‌ ಕೊಟ್ಟಿದೆ:

ರಾಜ್ಯದಲ್ಲಿ ದಲಿತರು ಏಕೆ ಸಿಎಂ ಆಗಬಾರದು ಎಂದು ಹೇಳಿರುವ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಐಸಿಸಿ ಅಧ್ಯಕ್ಷರ ಸ್ಥಾನವನ್ನೇ ನಾವು ದಲಿತರಿಗೆ ನೀಡಿದ್ದೇವೆ. ನಮ್ಮ ಪಕ್ಷದಿಂದ ದೇಶದ ಯಾವುದೇ ರಾಜ್ಯದಲ್ಲಿ ಸಿಎಂ ಮಾಡುವ ಪವರ್ ಫುಲ್ ಸ್ಥಾನ ಅದಾಗಿದೆ. ಕಾಂಗ್ರೆಸ್ ಪಕ್ಷದಿಂದ ದೇಶದ ಯಾವುದೇ ರಾಜ್ಯದಲ್ಲಿ ಸಿಎಂ ನೇಮಕ ಮಾಡುವ ಅಧಿಕಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆ. ನೀವು ಬರೀ ಕರ್ನಾಟಕ ಮಾತ್ರ ಕೇಳುತ್ತಿದ್ದೀರಿ. ನಮ್ಮ ಪಕ್ಷದ ಉನ್ನತ ಸ್ಥಾನದಲ್ಲಿ ದಲಿತ ನಾಯಕನಿದ್ದಾನೆ ಎಂಬುದನ್ನು ಮರೆಯದಿರಿ. ನಮ್ಮ ಪಕ್ಷದ ಒಬ್ಬ ಹಿರಿಯ ರಾಜಕಾರಣಿ ರಾಜಣ್ಣ. ಅವರು ದಲಿತ ನಾಯಕ, ಅವರು ತನ್ನ ವಿಚಾರ ಹೊರಹಾಕಿದ್ದಾರೆ ಅದರಲ್ಲಿ ತಪ್ಪೇನಿದೆ?, ನೀವು ಮಾಧ್ಯಮದವರೇ ಅನಗತ್ಯ ಗೊಂದಲ ಸೃಷ್ಟಿಸಿಬಿಡುತ್ತೀರಿ ಎಂದು ಸಮಜಾಯಷಿ ನೀಡಿದರು.

ಬಿಜೆಪಿಯವ್ರು ಇಲ್ದೆ ಚೈತ್ರಾರಿಂದ ಇಂತಹ ಕೆಲಸ ನಡೆಯಲ್ಲ: ಸಚಿವ ತಿಮ್ಮಾಪುರ

ಜನಸಂಖ್ಯೆ ಹೆಚ್ಚಾಗಿದೆ; ಮದ್ಯದಂಗಡಿ ಕಡಿಮೆಯಾಗಿವೆ

ಗ್ರಾಮ ಪಂಚಾಯಿತಿಗೊಂದು ಮದ್ಯದಂಗಡಿ ಆರಂಭಿಸುವ ಚಿಂತನೆ ಕುರಿತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಮಾಡುತ್ತಿದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ತಿಮ್ಮಾಪೂರ, ರಾಜ್ಯದ ಜನಸಂಖ್ಯೆ ಹೆಚ್ಚಾಗಿದೆ. ಮದ್ಯದಂಗಡಿ ಸಂಖ್ಯೆ ಕಡಿಮೆಯಾಗಿದೆ. ಗ್ರಾಮೀಣ ಜನರು ಪಟ್ಟಣಕ್ಕೆ ಬಂದು ₹10ಕ್ಕೆ ಸಿಗುವ ಮದ್ಯವನ್ನು ₹15 ಕೊಟ್ಟು ಖರೀದಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುವುದನ್ನು ತಪ್ಪಿಸಲು ಈ ಕ್ರಮವಹಿಸಲಾಗಿದೆ ಎಂದರು.

ನಮ್ಮ ಸರ್ಕಾರ ಹಣ ಕ್ರೋಡೀಕರಣ ಮಾಡಲು ಹೆಚ್ಚಿನ ಸಂಖ್ಯೆಯ ಮದ್ಯದಂಗಡಿಗಳನ್ನು ತೆರೆಯುವ ಚಿಂತನೆ ಮಾಡುತ್ತಿಲ್ಲ. ಈ ಹಿಂದೆ ಇದ್ದ ಸರ್ಕಾರಗಳು ಏನು ಮಾಡಿದ್ದವೋ, ನಾವೂ ಅದನ್ನೇ ಮಾಡುತ್ತಿದ್ದೇವೆ. ಅದರಲ್ಲೂ ನಾವು ಗ್ರಾಹಕರಿಗೆ ಆಗುವ ಹೆಚ್ಚಿನ ಹೊರೆ ತಪ್ಪಿಸುವ ನಿಟ್ಟಿನಲ್ಲಿ ವಿಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

click me!