ಸಿಎಂ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಯೂಟರ್ನ್ ಹೊಡೆದ್ರಾ ಯೋಗೇಶ್ವರ್?

By Suvarna NewsFirst Published Jun 7, 2021, 5:30 PM IST
Highlights

* ಸಚಿವ ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ
* ಯೂಟರ್ನ್ ಹೊಡೆದ್ರಾ ಸಚಿವ ಸಿ.ಪಿ.ಯೋಗೇಶ್ವರ್..?
* ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ಸೈನಿಕ ಬ್ಯಾಟಿಂಗ್

ಬೆಂಗಳೂರು, (ಜೂನ್.07): ನಾಯಕತ್ವದ ಬದಲಾವಣೆ ಧ್ಯನಿ ಎತ್ತುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ  ವಿರುದ್ಧ ತೊಡೆತಟ್ಟಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಯೂಟರ್ನ್ ಹೊಡೆದಂತಿದೆ.

ಹೌದು... ಸಿಎಂ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಬೆಂಗಳೂರು ಟು ದೆಹಲಿ ಸುತ್ತಾಡಿದ್ರು. ಆದ್ರೆ, ಈಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.

'ಸೈನಿಕ'ನ ವಿರುದ್ಧ ಮುಗಿಬಿದ್ದ ಕೇಸರಿ ಮಿತ್ರರು, ಅಖಾಡಕ್ಕೆ ಬಾ ನೋಡ್ಕೋತೀನಿ ಎಂದ ರೇಣುಕಾಚಾರ್ಯ

ಇಂದು (ಸೋಮವಾರ) ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್,  ಬಿಜೆಪಿ ಸರ್ಕಾರ ಬರಲು ನನ್ನದೂ ಅಳಿಲು ಸೇವೆಯಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ನನ್ನ ಕೊಡುಗೆಯೂ ಇದೆ ಎಂದು ಹೇಳಿದರು.

ಮೈತ್ರಿ ಸರ್ಕಾರ ಬೇಡವೆಂದು ಬಿ.ಎಸ್. ಯಡಿಯುರಪ್ಪನವರಿಗೆ ನಾವೆಲ್ಲರೂ ಬೆಂಬಲ ಕೊಟ್ಟಿದ್ದೇವೆ. ಯಡಿಯೂರಪ್ಪನವರು ಸಿಎಂ ಆಗಿರುವುದರ ಹಿಂದೆ ನನ್ನದೂ ಅಳಿಲು ಸೇವೆಯಿದೆ. ನಾನು ಯಾವತ್ತೂ ಪಕ್ಷದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪನವರು ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರೆಯಬೇಕು ಎಂದೇ ನಾನು ಬಯಸುತ್ತೇನೆ. ಪಕ್ಷದ ಭವಿಷ್ಯದ ಬಗ್ಗೆಯೂ ಯೋಚಿಸುತ್ತೇನೆ. ಆದರೆ ನಾನೇನೇ ಹೇಳಿದರೂ ಮಾಧ್ಯಮಗಳು ತಮಗೆ ಬೇಕಾದಂತೆ ಸುದ್ದಿ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧವೂ ಕಿಡಿಕಾರಿದ ಯೋಗೇಶ್ವರ್, ಡಿ.ಕೆ.ಶಿ. ಹಾಗೂ ಎಚ್.ಡಿ.ಕಕುಮಾರಸ್ವಾಮಿ ನಮ್ಮ ಪಕ್ಷದ ಬಗ್ಗೆ ಯಾಕೆ ಹೇಳಿಕೆಗಳನ್ನು ನೀಡುತ್ತಿದ್ದಾರೆ? ಡಿಕೆಶಿ ಜೈಲಿಗೆ ಹೋಗಿ ಬಂದ ಬಳಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೊಂದು ಸಲಹೆ ನೀಡುತ್ತೇನೆ ನಮ್ಮ ಪಕ್ಷದ ಸದಸ್ಯತ್ವ ಸ್ವೀಕರಿಸಲಿ ಇಲ್ಲವಾದರೆ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲಿ. ಅದನ್ನು ಬಿಟ್ಟು ಬಿಜೆಪಿ ಬಗ್ಗೆ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಗುಡುಗಿದರು.

 ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಟ್ಟ ಹೋಗುತ್ತೇನೆ ಎಂದು ಪರೋಕ್ಷವಾಗಿ ಎದುರಾಗಿಗಳಿಗೆ ಸಿಎಂ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಸೈನಿಕ್ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
 

click me!