ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಸಿಎಂ ಪರ ಸಹಿ ಸಂಗ್ರಹಕ್ಕೆ ಮುಂದಾದವರಿಗೆ ಖಡಕ್ ಎಚ್ಚರಿಕೆ

By Suvarna NewsFirst Published Jun 7, 2021, 4:52 PM IST
Highlights

* ರಾಜ್ಯ ಬಿಜೆಪಿ ಭುಗಿಲೆದ್ದ ಅಸಮಾಧಾನ
* ಸಿಎಂ ಪರ ಸಹಿ ಸಂಗ್ರಹಕ್ಕೆ ಮುಂದಾಗಿದ್ದ ರೇಣುಕಾಚಾರ್ಯಗೆ ವಾರ್ನಿಂಗ್
* ಖಡಕ್ ಎಚ್ಚರಿಕೆ ಕೊಟ್ಟ ಸಚಿವ ಆರ್. ಅಶೋಕ್

ಬೆಂಗಳೂರು, (ಜೂನ್.07): ಬಿ.ಎಸ್.ಯಡಿಯೂರಪ್ಪ ಪರ ಸಹಿ ಸಂಗ್ರಹಿಸಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್,  ಯಾರೂ ಪರ, ವಿರುದ್ಧ ಸಹಿ ಸಂಗ್ರಹ ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸಿದರೆ ಕ್ರಮ ನಿಶ್ಚಿತ ಎಂದ ರೇಣುಕಾಚಾರ್ಯಗೆ ಖಡಕ್ ಎಚ್ಚರಿಕೆ ಕೊಟ್ಟರು.

ಯಡಿಯೂರಪ್ಪ ಪರ ಸಹಿ ಸಂಗ್ರಹ: ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ

ಯಾರೂ ಪರ, ವಿರೋಧದ ಹೇಳಿಕೆಗಳನ್ನ ನೀಡಬಾರದು. ಸಹಿ ಸಂಗ್ರಹವನ್ನೂ ಮಾಡಬಾರದು. ಪರ, ವಿರುದ್ಧ ಸಹಿ ಸಂಗ್ರಹವನ್ನೂ ಮಾಡಬಾರದು. ಸಿಎಂ ಬಗ್ಗೆಯೂ ಯಾವುದೇ ಹೇಳಿಕೆಗಳನ್ನ ನೀಡಬಾರದು. ಅನಗತ್ಯ ಗೊಂದಲ ಸೃಷ್ಟಿಸಿದರೆ ಕ್ರಮ ನಿಶ್ಚಿತ. ಈ ಸಂಬಂಧ ಸಮಿತಿಯನ್ನ ಕೂಡ ರಚಿಸಲಾಗಿದೆ ಎಂದು ಎಚ್ಚರಿಸಿದರು.

ಒಂದು ಬಾರಿ ಸಭೆಯನ್ನ ಕೂಡ ನಡೆಸಲಾಗಿದೆ. ನಮ್ಮ ಪಕ್ಷದ ರಾಜ್ಯದ ಅಧ್ಯಕ್ಷರು ಸಮಿತಿ ರಚನೆ ಮಾಡಿದ್ದಾರೆ. ಸಮಿತಿ ಮೂಲಕ ಗೊಂದಲಕಾರಿ ಹೇಳಿಕೆ ತಡೆಯುವಂಥ ಕೆಲಸ ಮಾಡಲಾಗುತ್ತೆ. ಪರವಾಗಿ, ವಿರುದ್ಧವಾಗಿ ಯಾರೂ ಮಾತಾಡಬಾರದು. ಸಿಎಂ ವಿರುದ್ಧ ಅನಗತ್ಯವಾಗಿ ಹೇಳಿಕೆ ನೀಡಬಾರದು. ಮುಂದೆ ಬಿಜೆಪಿಗೆ ಬೂಸ್ಟ್ ಆಗುವ ರೀತಿಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

click me!