ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಸಹಿ ಸಂಗ್ರಹ ಪಟ್ಟಿ ರಿಲೀಸ್ ಮಾಡಿ: ರೇಣುಕಾಚಾರ್ಯಗೆ ಸವಾಲು

By Suvarna News  |  First Published Jun 7, 2021, 3:58 PM IST

* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
*ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯಗೆ ಸವಾಲು 
* ಸಹಿ ಸಂಗ್ರಹಿಸಿದ್ದರೆ ಆ ಶಾಸಕರ ಪಟ್ಟಿ ಬಿಡುಗಡೆ ಮಾಡಲಿ ಎಂದ ಡಿಕೆಶಿ


ಬೆಂಗಳೂರು, (ಜೂನ್.07): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಶಾಸಕರ ಸಹಿ ಸಂಗ್ರಹ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್,  ಸಹಿ ಸಂಗ್ರಹಿಸಿದ್ದರೆ ಆ ಶಾಸಕರ ಪಟ್ಟಿ ಬಿಡುಗಡೆ ಮಾಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯಗೆ ಸವಾಲು ಹಾಕಿದರು.

Latest Videos

undefined

ಅಶೋಕ್ ಸಹ ಸಿಎಂ ರೇಸ್‌ನಲ್ಲಿದ್ದಾರೆ: ಹೊಸ ಬಾಂಬ್ ಸಿಡಿಸಿದ ಬಿಎಸ್‌ವೈ ಆಪ್ತ

 ರಾಜ್ಯದಲ್ಲಿ ಜನರು ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಸಿಕೆ ಸಿಗದೇ ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಸರ್ಕಾರದಲ್ಲಿರುವ ಶಾಸಕರು, ಸಚಿವರು, ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದಲ್ಲದೇ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಿಗೆ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ ಎಂಬಂತಾಗಿದೆ ರಾಜ್ಯದ ಸ್ಥಿತಿ. ಇವರಿಗೆ ಮಾನ ಮರ್ಯಾದೆ ಇದ್ದರೆ ಸರ್ಕಾರ ನಡೆಸಲಿ. ಇಲ್ಲವಾದರೆ ಮನೆಗೆ ತೆರಳಲಿ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಪರವಾಗಿ 65 ಶಾಸಕರ ಸಹಿ ಸಂಗ್ರಹ ಮಾಡಿದ್ದಾರಂತೆ. ಶಾಸಕರ ಸಹಿ ಸಂಗ್ರಹಿಸಿದ್ದರೆ ಅವರ ಪಟ್ಟಿ ಬಿಡುಗಡೆ ಮಾಡಲಿ. ಬಿಜೆಪಿ ನಾಯಕರು ರಾಜ್ಯದ ಜನರಿಗೆ ಬೂದಿ ನೀಡುತ್ತಿದ್ದಾರೆ. ಇಂತಹ ಆಡಳಿತ ನಡೆಸುವ ಬದಲು ರಾಜೀನಾಮೆ ನೀಡಿ ಕೆಳಗಿಳಿಯಲಿ ಎಂದು ಗುಡುಗಿದರು.

click me!