ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂದ ಸಿದ್ದುಗೆ ತಿರುಗೇಟು ನೀಡಿದ ಸಚಿವ ಸೋಮಣ್ಣ

By Govindaraj SFirst Published Jan 22, 2023, 11:40 AM IST
Highlights

ಬಸವರಾಜ ಬೊಮ್ಮಾಯಿ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಯಾಕೆ ಈ ರೀತಿ ಮಾತಾನಾಡುತ್ತಾರೆ ಗೊತ್ತಿಲ್ಲ? ಮೊದಲೆಲ್ಲಾ ಚೆನ್ನಾಗಿ ಇದ್ದರು. ಈಗ ಕೇಳಿದರೆ ಗ್ರಾಮೀಣ ಪದ ಬಳಸಿದ್ದೀನಿ ಅನ್ನುತ್ತಾರೆ. ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮೈಸೂರು (ಜ.22): ಬಸವರಾಜ ಬೊಮ್ಮಾಯಿ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಯಾಕೆ ಈ ರೀತಿ ಮಾತಾನಾಡುತ್ತಾರೆ ಗೊತ್ತಿಲ್ಲ? ಮೊದಲೆಲ್ಲಾ ಚೆನ್ನಾಗಿ ಇದ್ದರು. ಈಗ ಕೇಳಿದರೆ ಗ್ರಾಮೀಣ ಪದ ಬಳಸಿದ್ದೀನಿ ಅನ್ನುತ್ತಾರೆ. ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ತಿಳಿಸಿದ್ದಾರೆ. ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮೀಗೆ ಎರಡು ಸಾವಿರ ಕಾಂಗ್ರೆಸ್ ಭರವಸೆ ವಿಚಾರವಾಗಿ ಮಾತನಾಡಿದ ಸೋಮಣ್ಣ, ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಉಚಿತ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. 

ಕೇವಲ ಜನರಿಗೆ ಆಸೆ ಹುಟ್ಟಿಸಲು ಭರವಸೆ ನೀಡುವುದು ಸರಿಯಲ್ಲ. ವಾಸ್ತವವಾಗಿ ಇದು ಸಾಧ್ಯವಿಲ್ಲ ಅಂತಾ ಸಿದ್ದರಾಮಯ್ಯಗೂ ಗೊತ್ತಿದೆ. ಜೆಡಿಎಸ್‌ನವರು ಈ ರೀತಿ ಭರವಸೆ ನೀಡಿದ್ದರೆ ನನಗೆ ಏನು ಅನ್ನಿಸುತ್ತಿರಲಿಲ್ಲ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಸಿದ್ದರಾಮಯ್ಯ ಸಿಎಂ ಆಗಿ 13 ಬಜೆಟ್ ಮಂಡಿಸಿದ್ದವರು‌‌. ಅಂತವರು ಈ ರೀತಿ ಆಸೆ ಹುಟ್ಟಿಸುವುದು ಸರಿಯಲ್ಲ. ಸಿದ್ದರಾಮಯ್ಯ ಮೇಲೆ ನನಗೆ ಗೌರವ ಇದೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಚಿಕ್ಕಿ ನೀಡುವಂತಿಲ್ಲ: ಸರ್ಕಾರ ಆದೇಶ

ರಾಷ್ಟ್ರೀಯ ಪಕ್ಷದ ಪರಿಕಲ್ಪನೆ ಗೊತ್ತಿಲ್ಲದ ಸಿದ್ದರಾಮಯ್ಯ: ಬಿಜೆಪಿ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಬಂದಿರುವ ಕುರಿತು ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಪಕ್ಷದ ಪರಿಕಲ್ಪನೆ ಗೊತ್ತಿಲ್ಲವೇ? ಎಲ್ಲ ರಾಷ್ಟ್ರೀಯ ಪಕ್ಷಗಳ ಮುಖಂಡರು ರಾಜ್ಯಕ್ಕೆ ಬಂದು ಹೋಗುವುದು ಸಾಮಾನ್ಯ. ಈ ಸಾಮಾನ್ಯ ಜ್ಞಾನ ಸಿದ್ದರಾಮಯ್ಯನವರಿಗೆ ಇಲ್ಲದಿರುವುದು ಸೋಜಿಗದ ಸಂಗತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದರು.

ಧಾರವಾಡದಲ್ಲಿ ಮನೆ-ಮನೆಯ ಗೋಡೆ ಬರಹ ಪ್ರಚಾರಕ್ಕೆ ಶನಿವಾರ ಚಾಲನೆ ನೀಡಿದರು. ಬಿಜೆಪಿ ಸರ್ಕಾರದ ಶೇ. 40ರ ಲಂಚ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆರೋಪ ಮಾಡಿದವರು ಮಧ್ಯರಾತ್ರಿ ಜಾಮೀನು ತೆಗೆದುಕೊಂಡು ಬಂದಿದ್ದಾರೆ. ಕೋವಿಡ್‌ ಸಮಯದಲ್ಲಿ ಸಿದ್ದರಾಮಯ್ಯ ಬಿಜೆಪಿ . 2500 ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದರು. ಇಲ್ಲಿಯ ವರೆಗೆ 13 ಅಧಿವೇಶನಗಳು ನಡೆದಿದ್ದು, ಯಾವತ್ತೂ ದಾಖಲೆ ಸಮೇತ ಆರೋಪ ಮಾಡಲಿಲ್ಲ. ಬರೀ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಉಡಾಫೆ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ಹೇಳಿಕೆಗಳೆಲ್ಲವೂ ನಿರಾಧಾರ. ಅವರ ಭಾಷಣ ಸಹ ಒಂದು ರೀತಿ ಟೈಮ್‌ ಪಾಸ್‌ ಇದ್ದಂತೆ ಎಂದು ಜರಿದರು.

ಮನೆ ಬಾಗಿಲಿಗೆ ಮಾಸಾಶನ ಸ್ಥಗಿತದಿಂದ ಜನರ ಪರದಾಟ: ಅಂಗವಿಕಲರು, ವೃದ್ಧರಿಗೆ ಹೆಚ್ಚು ತೊಂದರೆ

ಶಾಸಕ ತಿಪ್ಪಾರೆಡ್ಡಿ ಮೇಲೆ ಲಂಚದ ಆರೋಪ ಕುರಿತು ಈ ರೀತಿ ಆರೋಪ ಇವತ್ತಿಂದಲ್ಲ. ಮುಖಂಡರಾದ ಈಶ್ವರಪ್ಪ ಅವರಿಗೂ ಬಂದಿತ್ತು. ಗುತ್ತಿಗೆದಾರ ಸಂತೋಷ ಬೆಳಗಾವಿ ಲಕ್ಷ್ಮೇ ಹೆಬ್ಬಾಳಕರ ಅವರ ಕ್ಷೇತ್ರದಲ್ಲಿನ ಗುತ್ತಿಗೆದಾರರು. ಆಗ ಕಾಂಗ್ರೆಸ್‌ ಶಾಸಕಿ ಆ ಬಗ್ಗೆ ಪ್ರಶ್ನೆ ಮಾಡಬೇಕಲ್ಲವೇ? ಆತನಿಗೆ ವರ್ಕ್ ಆರ್ಡರ್‌ ಕೊಟ್ಟವರು ಯಾರು? ಯಾವ ಯೋಜನೆಯಲ್ಲಿ ಹಣ ತಂದಿದ್ದು ಎಂದು ಕೇಳಬೇಕಲ್ಲವೇ? ಇದು ಅವರ ಜವಾಬ್ದಾರಿ ಅಲ್ಲವಾ? ಜಾರಕಿಹೋಳಿ ಮೇಲೆ ಸಹ ಆರೋಪ ಮಾಡಿದರು. ಹಿಜಾಬ, ಟಿಪ್ಪು ವಿಷಯ ತಂದರು. ಈ ತರದ ಪ್ರಸ್ತುತವಲ್ಲದ ವಿಷಯ ತಂದು ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಪಕ್ಷ ಮತ್ತು ಅದರ ಮುಖಂಡರನ್ನು ಜನರು ತಿರಸ್ಕರಿಸಿದ್ದಾರೆ. ಮುಂದೆಯೂ ತಿರಸ್ಕರಿಸುತ್ತಾರೆ ಎಂದರು.

click me!