ಮೂರು ಕ್ಷೇತ್ರಗಳ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದರಿಂದ ನಮ್ಮ ಅಭ್ಯರ್ಥಿಗಳಿಗೆ ಗೆಲುವಾಗಿದೆ ಎಂದು ತಿಳಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ/ಕಲಬುರಗಿ(ನ.23): ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಸೇರಿದಂತೆ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಕಾರ್ಯಕರ್ತರ ಛಲದಿಂದಾಗಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮೂರು ಕ್ಷೇತ್ರಗಳ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾರ್ಯಕರ್ತರು ಒಗ್ಗಟ್ಟಾಗಿದ್ದರಿಂದ ನಮ್ಮ ಅಭ್ಯರ್ಥಿಗಳಿಗೆ ಗೆಲುವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಗೆಲುವು ನೋಡಲಾಗದೇ ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ!
ವಿಪಕ್ಷಗಳು ಮುಡಾ, ವಕ್ಫ್ ಎಂದು ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮಾಡಿದ್ದರು, ಆದರೆ ಮತದಾರ ಬಾಂಧವರು ಅವುಗಳನ್ನೆಲ್ಲ ಅಲಕ್ಷಿಸಿ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಪಂಚ ಗ್ಯಾರಂಟಿಗಳಿಂದಾಗಿಯೂ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆಂದು ಎಂದು ಜೇವರ್ಗಿ ಕಾಂಗ್ರೆಸ್ ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಜೆಡಿಎಸ್ ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ಅದು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಸದಾ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಈ ಚುನಾವಣೆಯಲ್ಲಿ ಜನರೇ ತಿರಸ್ಕರಿಸಿದ್ದಾರೆ. ವಾಲ್ಮೀಕಿ, ವಕ್ಫ್ ಹಾಗೂ ಮುಡಾ ವಿಚಾರಕ್ಕೆ ಜನರು ಮನ್ನಣೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಮುಡಾ ವಿಚಾರಕ್ಕೆ ಪಾದಯಾತ್ರೆ ಸಹ ಮಾಡಿದ್ರು. ವಕ್ಫ್ ವಿಚಾರವಾಗಿ ಧರಣಿ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಚುನಾವಣೆಯ ಫಲಿತಾಂಶ ಉತ್ತರ ಕೊಟ್ಟಿದೆ. ಈ ಸರ್ಕಾರದ ಪರವಾಗಿ ಜನರು ತೀರ್ಪು ಕೊಟ್ಟಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಬಿಜೆಪಿ, ಜೆಡಿಎಸ್‌ನವರು ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ರಾಜಕೀಯ ಕುತಂತ್ರಕ್ಕೆ ಜನರ ತಕ್ಕ ಉತ್ತರ: ಮಹದೇವಪ್ಪ
ಮೈಸೂರು: ರಾಜ್ಯದ ಮೂರು ಕ್ಷೇತ್ರದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಜನರ ಸರಿಯಾದ ತೀರ್ಪನ್ನ ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ಅದು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಸದಾ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಡಾ.ಎಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ ಅವರು, ಮುಡಾ ಹಗರಣ ಬಗ್ಗೆ ಸಚಿವ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣವೇ ಅಲ್ಲ. ಅಲ್ಲಿ ಏನು ನಡೆದಿದೆ, ಹಗರಣ ಅನ್ನುವುದಕ್ಕೆ, ಬಿಜೆಪಿ ಸುಳ್ಳು ಸೃಷ್ಟಿ ಮಾಡಿತ್ತು. ಹೀಗಾಗಿ ಜನ ಇದಕ್ಕೆ ಕಿವಿ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ, ಜನರು ಯಾರು ಸಹ ಹಗರಣದ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ಅದು ಸತ್ಯವಾಗಿಲ್ಲ. ನಮ್ಮ ಸಮುದಾಯದವರು ವೋಟ್ ಮಾಡಿದ್ದಾರೆ. ಒಕ್ಕಲಿಗರು ಬುದ್ದಿ ಕಲಿತಿದ್ದಾರೆ. ದೇವೇಗೌಡರು ಕುಟುಂಬಕ್ಕೋಸ್ಕರ ರಾಜಕಾರಣ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಅನೈತಿಕ ಸಂಬಂಧ ಇಟ್ಟುಕೊಂಡಿದೆ. ಇದಕ್ಕೆ ರಾಜ್ಯಕ್ಕೆ ಜನರು ಮೂರು ಚುನಾವಣೆಯ ಫಲಿತಾಂಶದಲ್ಲಿ ಉತ್ತರ ನೀಡಿದ್ದಾರೆ. ವಾಲ್ಮೀಕಿ, ವಕ್ಫ್ ಹಾಗೂ ಮುಡಾ ವಿಚಾರಕ್ಕೆ ಜನರು ಮನ್ನಣೆ ಕೊಟ್ಟಿಲ್ಲ. ಮುಡಾ ವಿಚಾರಕ್ಕೆ ಪಾದಯಾತ್ರೆ ಸಹ ಮಾಡಿದ್ರು. ಇದಕ್ಕೆಲ್ಲಾ ಚುನಾವಣೆಯ ಫಲಿತಾಂಶ ಉತ್ತರ ಕೊಟ್ಟಿದೆ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದ್ದಾರೆ.
ಉಪಚುನಾವಣೆಯ ಫಲಿತಾಂಶ ಇದು. ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಸಿಕ್ಕ ನೈತಿಕ ಬೆಂಬಲವಾಗಿದೆ.ಈ ಸರ್ಕಾರದ ಪರವಾಗಿ ಜನರು ತೀರ್ಪು ಕೊಟ್ಟಿದ್ದಾರೆ. ಹಗರಣವೇ ಅಲ್ಲದನ್ನು ಹಗರಣ ಮಾಡುವ ಪ್ರಯತ್ನ ಮಾಡಿದ್ರು. ಆದರೆ ಅದರಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ. ಕೋಮು ದ್ವೇಷದ ರಾಜಕಾರಣ ಮಾಡಲು ಪ್ರಯತ್ನ ಪಟ್ಟರು. ಅದಕ್ಕೂ ಜನರು ಮಣೆ ಹಾಕಿಲ್ಲ ಎಂದು ಕಾಂಗ್ರೆಸ್ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.