ಸಿದ್ದು, ಡಿಕೆಶಿ ಯಾವ ರೀತಿ ನಾಯಕತ್ವ ಕೊಡುತ್ತಿದ್ದಾರೆ ಎಂಬುದನ್ನು ಅರಿಯಬೇಕು: ಬಿಜೆಪಿ ಸಂಸದ ಸುಧಾಕರ್

By Girish Goudar  |  First Published Nov 23, 2024, 4:38 PM IST

ಬಿಜೆಪಿಯಲ್ಲಿ ಪಂಗಡಗಳು, ಗುಂಪುಗಳು ಎಲ್ಲವೂ ಹೋಗಬೇಕು, ಒಗ್ಗಟ್ಟಾಗಿದ್ದೇವೆ ಎಂದು ತೋರಿಸಬೇಕು. ಭಿನ್ನಾಭಿಪ್ರಾಯಗಳೆಲ್ಲವೂ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಯಡಿಯೂರಪ್ಪನವರು ಎಲ್ಲರನ್ನ ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ಪಕ್ಷವನ್ನು ಮುನ್ನಡೆಸಿಕೊಂಡು ಹೋದರೆ ನಮಗೆ ಜನ ಆಶೀರ್ವಾದ ಸಿಗಲಿದೆ. ಬಿಜೆಪಿ ಪಕ್ಷಕ್ಕೆ ಸಾಕಷ್ಟು ಜನರ ಬೆಂಬಲ ಇದೆ: ಸಂಸದ ಕೆ. ಸುಧಾಕರ್ 


ಚಿಕ್ಕಬಳ್ಳಾಪುರ(ನ.23):  ಚನ್ನಪಟ್ಟಣದ ಸೋಲು ಅನಿರೀಕ್ಷಿತವಾಗಿದೆ. ಕೊನೆ ಕ್ಷಣದಮಾಲ್ಲಿ ನಿಖಿಲ್ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಬೇಕಾದಂತ ಅನಿವಾರ್ಯತೆ ಬಂತು. ನಿಖಿಲ್ ಕುರಸ್ವಾಮಿ ಮಾನಸಿಕವಾಗಿ ಸ್ಪರ್ಧೆ ಮಾಡಕ್ಕೆ ಸಿದ್ಧರಿರಲಿಲ್ಲ ಒತ್ತಡದಿಂದಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅಂತರ್ ಯುದ್ಧ ಇದ್ದರೂ ಸಾಮೂಹಿಕವಾಗಿ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಯಾವ ರೀತಿಯ ನಾಯಕತ್ವ ಕೊಡುತ್ತಿದ್ದಾರೆ ಎಂಬುದನ್ನು ಅರಿಯಬೇಕು. ನಮ್ಮ ಪಕ್ಷದ ನಾಯಕರು ಇದನ್ನ ಅರಿತುಕೊಳ್ಳಬೇಕು ಎಂದು ಸಂಸದ ಕೆ. ಸುಧಾಕರ್ ತಿಳಿಸಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಕೆ. ಸುಧಾಕರ್ ಅವರು, ಬಿಜೆಪಿಯಲ್ಲಿ ಪಂಗಡಗಳು, ಗುಂಪುಗಳು ಎಲ್ಲವೂ ಹೋಗಬೇಕು, ಒಗ್ಗಟ್ಟಾಗಿದ್ದೇವೆ ಎಂದು ತೋರಿಸಬೇಕು. ಭಿನ್ನಾಭಿಪ್ರಾಯಗಳೆಲ್ಲವೂ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ. 

Tap to resize

Latest Videos

ಬಳ್ಳಾರಿ ರೆಡ್ಡಿ ಪಡೆಗೆ ಮತ್ತೆ ಗುಮ್ಮಿದ ಟಗರು; ಕಾಂಗ್ರೆಸ್ ಕೋಟೆಯಲ್ಲಿ ಸೋತರೂ ತೊಡೆ ತಟ್ಟಿದ ಬಂಗಾರು!

ಯಡಿಯೂರಪ್ಪನವರು ಎಲ್ಲರನ್ನ ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ಪಕ್ಷವನ್ನು ಮುನ್ನಡೆಸಿಕೊಂಡು ಹೋದರೆ ನಮಗೆ ಜನ ಆಶೀರ್ವಾದ ಸಿಗಲಿದೆ. ಬಿಜೆಪಿ ಪಕ್ಷಕ್ಕೆ ಸಾಕಷ್ಟು ಜನರ ಬೆಂಬಲ ಇದೆ ಎಂದು ತಿಳಿಸಿದ್ದಾರೆ. 

ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!

ಹಾಸನದಿಂದ ಬಂದು ರಾಮನಗರದಲ್ಲಿ ಕೋಟೆಯನ್ನು ಕಟ್ಟಿಕೊಂಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜೆಡಿಎಸ್ ಪಕ್ಷದ ಆಳ್ವಿಕೆ ಮೂರನೇ ತಲೆಮಾರಿಗೆ ಅಂತ್ಯಗೊಂಡಂತಾಗಿದೆ.   ಕಳೆದ 36 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಸಂಪೂರ್ಣವಾಗಿ ರಾಮನಗರದಿಂದ ವಾಶ್‌ಔಟ್ ಆಗಿದೆ. ದೇವೇಗೌಡರ ನಂತರ ಅವರ ಪುತ್ರ ಕುಮಾರಸ್ವಾಮಿ ಅವರು ಗೆದ್ದು ಮುಖ್ಯಮಂತ್ರಿ ಆಗಿದ್ದರು. ಆದರೆ, ಇದೀಗ ನಿಖಿಲ್ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್ ಸೋಲು ಅನುಭವಿಸಿ ರಾಮನರದಲ್ಲಿ ಜೆಡಿಎಸ್ ಪ್ರಾಬಲ್ಯ ಕಳೆದುಕೊಂಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹಾಸನದಿಂದ ಬಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಮನಗರದಲ್ಲಿ ಬಂದು ರಾಜಕೀಯ ಅಧಿಪತ್ಯವನ್ನು ಸ್ಥಾಪಿಸಿದ್ದರು. 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಡಿ.ಕೆ. ಶಿವಕುಮಾರ್ ಅವರನ್ನು ಸೋಲಿಸಿದ್ದರು. ನಂತರ 1994ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದರು. ಇದಾದ ನಂತರ 2002ರಲ್ಲಿ ಕನಕಪುರ ಲೋಕಸಭೆ ಉಪ ಚುನಾವಣೆಯಲ್ಲಿ ಪುನಃ ಡಿ.ಕೆ. ಶಿವಕುಮಾರ್ ವಿರುದ್ಧ ಗೆದ್ದು ಸಂಸದರಾಗಿದ್ದರು. ಆದರೆ, 2004ರಲ್ಲಿ ಕನಕಪುರ ಲೋಕಸಭೆಯಿಂದ ತೇಜಸ್ವಿನಿಗೌಡ ಅವರ ವಿರುದ್ಧ ಸೋಲು ಅನುಭವಿಸಿದ್ದರು.

ದೇವೇಗೌಡರ ಕುಟುಂಬದಲ್ಲಿ ಎರಡನೇ ತಲೆಮಾರಿನಲ್ಲಿ ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು 1996ರಿಂದ ರಾಮನಗರದಲ್ಲಿ ರಾಜಕೀಯಕ್ಕೆ ಬಂದು ಕನಕಪುರ ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದರು. ಇದಾದ ನಂತರ ಮೂರು ಕನಕಪುರ ಲೋಕಸಭೆ, ಸಾತನೂರು ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಸೋಲು ಅನುಭವಿಸಿದರು. ನಂತರ, 2004ರಿಂದ ಸತತವಾಗಿ ಗೆಲ್ಲುತ್ತಾ ಬಂದರು. 2004ರಿಂದ ರಾಮನರ ವಿಧಾನಸಭಾ ಕ್ಷೇತ್ರದ ಮೇಲೆ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಾಭಲ್ಯ ಹೊಂದಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ದೇವೇಗೌಡರ 3ನೇ ತಲೆಮಾರು ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟು ಚನ್ನಪಟ್ಟಣಕ್ಕೆ ಆಗಮಿಸಿದರು. ಆದರೆ, ಇಲ್ಲಿ ನಿಖಿಲ್ ಕುಮಾರಸ್ವಾಮಿ ಸೋತು ಕ್ಷೇತ್ರವನ್ನು ಕಳೆದುಕೊಂಡರು.

ಕಾಂಗ್ರೆಸ್ ಸರ್ಕಾರ ಬೀಳಿಸೋದಾಗಿದ್ರೆ ನಾನೇ ನೇತೃತ್ವ ವಹಿಸ್ತಿದ್ದೆ: ರಮೇಶ ಜಾರಕಿಹೊಳಿ

ಇದೀಗ ಪುನಃ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿ ರಾಮನಗರದಲ್ಲಿ ಜೆಡಿಎಸ್ ಪ್ರಾಭಲ್ಯವನ್ನು ಕುಮಾರಸ್ವಾಮಿ ಉಳಿಸಿಕೊಂಡಿದ್ದರು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ ಕುಮಾರಸ್ವಾಮಿ ಕೇಂದ್ರ ಸಚಿವರಾದರು. ಇಲ್ಲಿ ಚನ್ನಪಟ್ಟಣದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದರು. ಇದೀಗ ನಿಖಿಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ಅವರ ವಿರುದ್ಧ 25 ಸಾವಿರ ಮತಗಳ ಅಂತರದಿಂದ (ಮತ ಎಣಿಕೆಯ ಅವಧಿ ಮಧ್ಯಾಹ್ನ 12.45ರವೇಳೆಗೆ) ಹಿನ್ನಡೆ ಉಂಟಾಗಿ ಸೋಲಿನ ಹಾದಿಯಲ್ಲಿದ್ದಾರೆ. ಬಾಕಿ ಇನ್ನೆರಡು ಸುತ್ತಿನ ಮತ ಎಣಿಕೆ ನಡೆದರೂ ನಿಖಿಲ್ ಗೆಲ್ಲಲು ಸಾಧ್ಯವಿಲ್ಲ. ಚನ್ನಪಟ್ಟಣದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಸೋಲಿನ ಮೂಲಕ ರಾಮನಗರ ಜಿಲ್ಲೆಯಲ್ಲಿ ಮೂರನೇ ತಲೆಮಾರಿಗೆ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಂತಾಗಿದೆ. ಇನ್ನು ಬೆಂಗಳೂರು ಗ್ರಾಮೀಣ ಲೋಕಸಭೆಯಲ್ಲಿ ದೇವೇಗೌಡರ ಅಳಿಯ ಡಾ.ಸಿ.ಎನ್. ಮಂಜುನಾಥ್ ಅವರು ಗೆಲುವು ಸಾಧಿಸಿದ್ದರೂ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ನಿಖಿಲ್‌ಗೆ ಹ್ಯಾಟ್ರಿಕ್ ಸೋಲು: 

ಚನ್ನಪಟ್ಟಣ ಉಪಚುನಾವಣೆ ಎರಡು ಪಕ್ಷಗಳಿಗೆ (ಕಾಂಗ್ರೆಸ್-ಜೆಡಿಎಸ್) ಹಾಗೂ ಎರಡು ಕುಟುಂಬಕ್ಕೆ (ಡಿ.ಕೆ. ಶಿವಕುಮಾರ್ - ಹೆಚ್.ಡಿ. ದೇವೇಗೌಡ) ಪ್ರತಿಷ್ಠೆಯ ಕಣವಾಗಿತ್ತು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಸಿ.ಪಿ. ಯೋಗೇಶ್ವರ್ ಅವರೇ ಗೆಲ್ಲುತ್ತಾರೆ ಎಂಬ ಅಲೆಯಿತ್ತು. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಭಾಗವಾಗಿದ್ದ ಸಿ.ಪಿ. ಯೋಗೇಶ್ವರ್ ಟಿಕೆಟ್ ಸಿಗದ ಕಾರಣ ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ಗೆ ಸೇರ್ಪೆಯಾದರು. ಇದರಿಂದ ಡಿ.ಕೆ. ಶಿವಕುಮಾರ್ ಅವರಿಗೆ ನೂರಾನೆ ಬಲ ಬಂದಂತಾಗಿತ್ತು. ಇನ್ನು ಯೋಗೇಶ್ವರ ಅವರ ವಿರುದ್ಧ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನೇ ಕಣಕ್ಕಿಳಿಸಿದ್ದರು. ಈ ಮೂಲಕ ಜೆಡಿಎಸ್ ಪಕ್ಷವನ್ನೇ ಪಣಕ್ಕಿಟ್ಟು ಸೋತಿದ್ದಾರೆ. ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ 2019ರಲ್ಲಿ ಮಂಡ್ಯ ಲೋಕಸಭೆಯಲ್ಲಿ ಸೋಲು ಅನುಭವಿಸಿದ್ದರು. ಇದಾದ ನಂತರ 2023ರಲ್ಲಿ ರಾಮನಗರ ವಿಧಾನಸಭೆಯಲ್ಲಿ (ಅಜ್ಜ ದೇವೇಗೌಡರು ಹಾಗೂ ಅಪ್ಪ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಕ್ಷೇತ್ರದ) ಸೋತಿದ್ದರು. ಇದೀಗ ರಾಮನಗರದಲ್ಲಿ ಜೆಡಿಎಸ್ ಉಳಿದುಕೊಂಡಿದ್ದ ಒಂದು ಕ್ಷೇತ್ರ ಚನ್ನಪಟ್ಟಣದಲ್ಲಿಯೂ 2024ರ ಉಪಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಹ್ಯಾಟ್ರಿಕ್ ಸೋಲಾಗಿದೆ. 

click me!