ಬಿಜೆಪಿ, ಜೆಡಿಎಸ್‌ನವರು ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ರಾಜಕೀಯ ಕುತಂತ್ರಕ್ಕೆ ಜನರ ತಕ್ಕ ಉತ್ತರ: ಮಹದೇವಪ್ಪ

By Girish Goudar  |  First Published Nov 23, 2024, 5:25 PM IST

ಮುಡಾ ಹಗರಣವೇ ಅಲ್ಲ. ಅಲ್ಲಿ  ಏನು ನಡೆದಿದೆ, ಹಗರಣ ಅನ್ನುವುದಕ್ಕೆ, ಬಿಜೆಪಿ ಸುಳ್ಳು ಸೃಷ್ಟಿ ಮಾಡಿತ್ತು. ಹೀಗಾಗಿ ಜನ ಇದಕ್ಕೆ ಕಿವಿ ಕೊಟ್ಟಿಲ್ಲ ಎಂದು ಮುಡಾ ಹಗರಣ ಬಗ್ಗೆ ಸಚಿವ ಶಾಕಿಂಗ್ ಹೇಳಿಕೆ ಕೊಟ್ಟ ಡಾ.ಎಚ್‌.ಸಿ. ಮಹದೇವಪ್ಪ


ಮೈಸೂರು(ನ.23):  ರಾಜ್ಯದ ಮೂರು ಕ್ಷೇತ್ರದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಜನರ ಸರಿಯಾದ ತೀರ್ಪನ್ನ ಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ಅದು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಸದಾ ಜ‌ನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಡಾ.ಎಚ್.ಸಿ ಮಹದೇವಪ್ಪ ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಎಚ್‌.ಸಿ.ಮಹದೇವಪ್ಪ ಅವರು, ಮುಡಾ ಹಗರಣ ಬಗ್ಗೆ ಸಚಿವ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮುಡಾ ಹಗರಣವೇ ಅಲ್ಲ. ಅಲ್ಲಿ  ಏನು ನಡೆದಿದೆ, ಹಗರಣ ಅನ್ನುವುದಕ್ಕೆ, ಬಿಜೆಪಿ ಸುಳ್ಳು ಸೃಷ್ಟಿ ಮಾಡಿತ್ತು. ಹೀಗಾಗಿ ಜನ ಇದಕ್ಕೆ ಕಿವಿ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. 

Latest Videos

undefined

ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!

ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ, ಜನರು ಯಾರು ಸಹ ಹಗರಣದ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ಅದು ಸತ್ಯವಾಗಿಲ್ಲ. ನಮ್ಮ ಸಮುದಾಯದವರು ವೋಟ್ ಮಾಡಿದ್ದಾರೆ. ಒಕ್ಕಲಿಗರು ಬುದ್ದಿ ಕಲಿತಿದ್ದಾರೆ. ದೇವೇಗೌಡರು ಕುಟುಂಬಕ್ಕೋಸ್ಕರ ರಾಜಕಾರಣ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ ಎಂದು ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಅನೈತಿಕ ಸಂಬಂಧ ಇಟ್ಟುಕೊಂಡಿದೆ. ಇದಕ್ಕೆ ರಾಜ್ಯಕ್ಕೆ ಜನರು ಮೂರು ಚುನಾವಣೆಯ ಫಲಿತಾಂಶದಲ್ಲಿ ಉತ್ತರ ನೀಡಿದ್ದಾರೆ‌. ವಾಲ್ಮೀಕಿ, ವಕ್ಫ್ ಹಾಗೂ ಮುಡಾ ವಿಚಾರಕ್ಕೆ ಜನರು ಮನ್ನಣೆ ಕೊಟ್ಟಿಲ್ಲ. ಮುಡಾ ವಿಚಾರಕ್ಕೆ ಪಾದಯಾತ್ರೆ ಸಹ ಮಾಡಿದ್ರು. ಇದಕ್ಕೆಲ್ಲಾ ಚುನಾವಣೆಯ ಫಲಿತಾಂಶ ಉತ್ತರ ಕೊಟ್ಟಿದೆ ಎಂದು  ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದ್ದಾರೆ. 

ಉಪಚುನಾವಣೆಯ ಫಲಿತಾಂಶ ಇದು. ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಸಿಕ್ಕ ನೈತಿಕ ಬೆಂಬಲವಾಗಿದೆ.ಈ ಸರ್ಕಾರದ ಪರವಾಗಿ ಜನರು ತೀರ್ಪು ಕೊಟ್ಟಿದ್ದಾರೆ. ಹಗರಣವೇ ಅಲ್ಲದನ್ನು ಹಗರಣ ಮಾಡುವ ಪ್ರಯತ್ನ ಮಾಡಿದ್ರು. ಆದರೆ ಅದರಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ. ಕೋಮು ದ್ವೇಷದ ರಾಜಕಾರಣ ಮಾಡಲು ಪ್ರಯತ್ನ ಪಟ್ಟರು. ಅದಕ್ಕೂ ಜನರು ಮಣೆ ಹಾಕಿಲ್ಲ ಎಂದು ಕಾಂಗ್ರೆಸ್‌ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!

ಕರ್ನಾಟಕದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪ ಚುನಾವಣೆ ಫಲಿತಾಂಶದಲ್ಲಿ ಮೂರೂ ಕ್ಷೇತ್ರಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್‌ನಲ್ಲಿ ಭವಿಷ್ಯ ನುಡಿಯಲಾಗಿತ್ತು. ಆದರೆ, ಇದೀಗ ಎಕ್ಸಿಟ್ ಪೋಲ್ ಅನ್ನು ಸುಳ್ಳಾಗಿಸಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗ್ಯಾರಂಟಿಯ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಇದಕ್ಕೆ ಬಿಜೆಪಿ ಮಾಡಿಕೊಂಡ ಎಡವಟ್ಟುಗಳು ಕೂಡ ಇಲ್ಲಿ ಮುನ್ನೆಲೆಗೆ ಬರುತ್ತಿವೆ.

ಬಳ್ಳಾರಿ ರೆಡ್ಡಿ ಪಡೆಗೆ ಮತ್ತೆ ಗುಮ್ಮಿದ ಟಗರು; ಕಾಂಗ್ರೆಸ್ ಕೋಟೆಯಲ್ಲಿ ಸೋತರೂ ತೊಡೆ ತಟ್ಟಿದ ಬಂಗಾರು!

ಉಪ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಡೀ ರಾಜ್ಯದ ಜನತೆಯನ್ನೇ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಇಲ್ಲಿ ಮುಖ್ಯವಾಗಿ ಚುನಾವಣೆಯ ಮತದಾನದ ನಂತರ ಮತದಾನಕ್ಕೂ ಒಂದೆರಡು ದಿನ ಮುಂಚಿತವಾಗಿ ವಿವಿಧ ವಾರ್ತಾ ಸಂಸ್ಥೆಗಳು, ಖಾಸಗಿ ರಾಜಕೀಯ ಸಂಸ್ಥೆಗಳು ಹಾಗೂ ಸಮಿತಿಗಳು ಮತದಾನೋತ್ತರ ಫಲಿತಾಂಶ (ಎಕ್ಸಿಟ್ ಪೋಲ್) ನುಡಿಯುತ್ತವೆ. ಹೀಗೆ, ರಾಜ್ಯದ ಎಕ್ಸಿಟ್ ಪೋಲ್‌ನಲ್ಲಿ ಶಿಗ್ಗಾವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುತ್ತಾರೆ. ಈ ಮೂಲಕ ಮೂರೂ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದರು.

ಎಕ್ಸಿಟ್ ಪೋಲ್ ಏನೇ ಭವಿಷ್ಯ ನುಡಿದರೂ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಮಾತ್ರ ನಮ್ಮದೇ ಗೆಲುವು ಎಂದು ಹೇಳಿದ್ದರು. ಇನ್ನು ಬಿಜೆಪಿಯವರೂ ತಮ್ಮದೇ ಗೆಲವು ಎಂದು ಬೀಗುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲ್ಲುವ ಮೂಲಕ ರಾಜ್ಯ ಸರ್ಕಾರದ ಬಲವನ್ನು ಮತ್ತಷ್ಟು ಹೆಚ್ಚಳ ಮಾಡಿದ್ದಾರೆ. ಇಲ್ಲಿ ರಾಜ್ಯ ಸರ್ಕಾರದಿಂದ ಕೊಡಲಾದ ಪಂಚ ಗ್ಯಾರಂಟಿಗಳಿಗೆ ಮತದಾರರು ತಮ್ಮ ಮತದ ಮುದ್ರೆಗಳನ್ನು ಒತ್ತಿ ವಿಧಾನಸಭೆಗೆ ಕಳುಹಿಸಿದ್ದಾರೆ.

click me!