ಆಕಾಶದಲ್ಲಿರುವ ಕುಮಾರಸ್ವಾಮಿ ಕೈಗೆ ಸಿಗೋಲ್ಲ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Nov 10, 2024, 1:22 PM IST

ದೇವೇಗೌಡರಿಗೆ ಅವರದ್ದೇ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಸರ್ಕಾರ ಎಷ್ಟು ದಿನ ಇರಲಿದೆಯೋ ಎಂದು ಅನುಮಾನ ಹೊಂದಿದ್ದರು. ಅವರ ಸರ್ಕಾರದಲ್ಲಿ ಎಂಎಲ್‌ಎಗಳು ಮನೆ ಬಳಿ ಹೋದಾಗ ಈ ಸರ್ಕಾರ ಜಾಸ್ತಿ ದಿನ ಇರಲ್ಲ ಅಂತಿದ್ದರು. ಎರಡು ವರ್ಷದ ಮೇಲೆ ಸರ್ಕಾರ ಇರಲ್ಲ ಅಂತಿದ್ರು ಎಂದು ಆರೋಪಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ


ಚನ್ನಪಟ್ಟಣ(ನ.10): ದೇವೇಗೌಡರು ಕುಮಾರಸ್ವಾಮಿ ಅವರು ಆಕಾಶ, ಡಿ.ಕೆ. ಶಿವಕುಮಾರ್‌ಭೂಮಿ ಎಂದಿದ್ದಾರೆ. ಆಕಾಶ ಆದ್ರೆ ಅವರನ್ನ ಮುಟ್ಟಲು ಆಗುತ್ತಾ, ಅವರು ಜನರ ಕೈಗೆ ಸಿಗ್ತಾರಾ.? ಡಿ.ಕೆ. ಶಿವಕುಮಾರ್‌ ಭೂಮಿ ಮೇಲೆ ಇದ್ದಾರೆ, ಅದಕ್ಕೆ ಜನರ ಕೈಗೆ ಸಿಗುತ್ತಾರೆ ಜನರ ಸಮಸ್ಯೆ ಕೇಳುತ್ತಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದರು. 

ತಾಲೂಕಿನ ಬಳ್ಳಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಅವರದ್ದೇ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಸರ್ಕಾರ ಎಷ್ಟು ದಿನ ಇರಲಿದೆಯೋ ಎಂದು ಅನುಮಾನ ಹೊಂದಿದ್ದರು. ಅವರ ಸರ್ಕಾರದಲ್ಲಿ ಎಂಎಲ್‌ಎಗಳು ಮನೆ ಬಳಿ ಹೋದಾಗ ಈ ಸರ್ಕಾರ ಜಾಸ್ತಿ ದಿನ ಇರಲ್ಲ ಅಂತಿದ್ದರು. ಎರಡು ವರ್ಷದ ಮೇಲೆ ಸರ್ಕಾರ ಇರಲ್ಲ ಅಂತಿದ್ರು ಎಂದು ಆರೋಪಿಸಿದರು. 

Latest Videos

undefined

ಕುಟುಂಬದ ಕುಡಿ ಪಟ್ಟಾಭಿಷೇಕಕ್ಕೆ ಕುಮಾರಸ್ವಾಮಿ ಹೋರಾಟ: ಯೋಗೇಶ್ವರ್‌

ಅವರು ಮುಖ್ಯಮಂತ್ರಿ ಆಗಿ ಐದು ವರ್ಷ ಇದ್ದರಾ? ಪ್ರಧಾನ ಮಂತ್ರಿಯಾಗಿ ಐದು ವರ್ಷ ಅಧಿಕಾರ ಮಾಡಿದ್ರಾ.? ಅವರ ನೇತೃತ್ವದ ಸರ್ಕಾರ ಇದ್ದಾಗಲೇ ಐದು ವರ್ಷ ಆಡಳಿತ ಮಾಡಿಲ್ಲ. ಇನ್ನೂ ಬೇರೆಯವರು ಸರ್ಕಾರ ಮಾಡಿದ್ರೆ ಸುಮ್ಮನೆ ಇರ್ತಾರಾ. ಅದಕ್ಕೆ ಈ ಸರ್ಕಾರ ಕಿತ್ತು ಹಾಕ್ತವೆ ಅಂತಾರೆ. ಅವರು ದೊಡ್ಡವರು, ಅವರ ಬಗ್ಗೆ ಜಾಸ್ತಿ ಮಾತನಾಡೊದು ಬೇಡ ಎಂದು ಟಾಂಗ್ ನೀಡಿದರು. 

ನಿದ್ದೆ ಮಾಡಲ್ಲ ಎಂದಿದ್ದರು: 

ಅವರು ಜೆಡಿಎಸ್ 120 ಸೀಟ್ ಗೆಲ್ಲವುವರೆಗೂ ನಿದ್ದೆ ಮಾಡಲ್ಲ ಅಂದಿದ್ರು ಜೆಡಿಎಸ್‌ ಬಹುಮತ ಪಡೆದು ಕುಮಾರಸ್ವಾಮಿ ಪ್ರಮಾಣ ವಚನ ನೋಡೊವರೆಗೂ ನಿದ್ದೆ ಮಾಡಲ್ಲ ಅಂದ್ರು. 120 ಸೀಟ್ ಬರಲಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ,ನಾನು ರಾಜಕಾರಣದಲ್ಲಿ ಇರಲ್ಲ ಅಂದ್ರು, ಆದ್ರೆ ಮಾಡಿದ್ರಾ? ಎಂದು ಪ್ರಶ್ನಿಸಿದರು. 

2018, 2023ರಲ್ಲಿ ಕುಮಾರಸ್ವಾಮಿ ಎಷ್ಟು ಸೀಟ್ ಗೆದ್ರು? ಯಾವುದೋ ಕಾರಣಕ್ಕೆ ಸಿಎಂ ಆದರು, ಆದರೆ ಐದು ವರ್ಷ ಅಧಿಕಾರ ಮಾಡಿದ್ರಾ? ಹಾಗಾಗಿ ಅವರು ರಾಜಕೀಯವಾಗಿ ಏನೇನೋ ಮಾತನಾಡ್ತಾರೆ ಎಂದರು. 

25 ಎಕರೆ ದಾನ ಮಾಡಲು ಡಿಕೆಶಿ ಮಹಾರಾಜರ ವಂಶಸ್ಥರಾ?: ಕುಮಾರಸ್ವಾಮಿ ವಾಗ್ದಾಳಿ

ಎಚ್‌ಡಿಕೆ ಕೈಗೆ ಸಿಗಲಿಲ್ಲ: 

ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣದಲ್ಲಿಗೆದ್ದು ಅಭಿವೃದ್ಧಿ ಮಾಡಿಲ್ಲ, ಇಲ್ಲಿನ ಜನರ ಕೈಗೆ ಸಿಗೋದಿಲ್ಲ, ಗೆದ್ದು ಜನ ಸಂಪರ್ಕ ಮಾಡಿಲ್ಲ, ಚುನಾವಣೆಯಲ್ಲಿ ಮಾತ್ರ ಸಿಗ್ತಾರೆ, ವಿಧಾನಸಭೆಯಲ್ಲಿ ಅವರು ಮಾತನಾಡಿದ್ದು ಅವರನ್ನು ಬಿಂಬಿಸುತ್ತೆ. ಆ ರೀತಿಯ ಮಾತು ರಾಜಕಾರಣಿಗಳಿಗೆ ಅವಮರ್ಯಾದೆ ಎಂದು ಟೀಕಿಸಿದರು. 

ಎಚ್ಚಿಕೆ ಚುನಾವಣೆಯ ಕೊನೆಯಲ್ಲಿ ಬರೋದನ್ನ ಕಲಿತಿದ್ದಾರೆ, ಚುನಾವಣೆಗೆ ಹಣ, ಆಮಿಷ, ಕಣ್ಣೀರು ಕೆಲಸ ಮಾಡಲ್ಲ, ಮಾಡಿರುವ ಕೆಲಸಗಳನ್ನ ಜನ ನೋಡಿದ್ದಾರೆ. ಜನಸಂಪರ್ಕ ಚುನಾವಣೆಯಲ್ಲಿ ಶಕ್ತಿ ತೋರಲಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್‌ ಚನ್ನಪಟ್ಟಣ ಕ್ಷೇತ್ರಕ್ಕೆ, ಜಲ ಸಂಪನ್ಮೂಲಕ್ಕೆ ತಮ್ಮದೇ ಆದ ಕೊಡುಗೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಚನ್ನಪಟ್ಟಣ ಅಭಿವೃದ್ಧಿಗೆ ಶ್ರಮ ವಹಿಸಲಿದ್ದಾರೆ. ಅಭಿವೃದ್ಧಿ ಕಡೆ ಗಮನಕೊಟ್ಟು ಜನ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

click me!