Karnataka BJP Politics: ಸಿಎಂ ಆಗುವ ಬಗ್ಗೆ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಿಷ್ಟು

By Suvarna News  |  First Published Dec 4, 2021, 2:45 PM IST

*  ನನ್ನ ಪಕ್ಷ, ಸಂಘ ಪರಿವಾರ ತಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ
*  ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ ಅಂದ್ರೆ ಅದಕ್ಕೂ ಬದ್ಧ
*  ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ
 


ಕಲಬುರಗಿ(ಡಿ.04):  ನನಗೆ ಸಿಎಂ(Chief Minister of Karnataka) ಆಗುವ ಆಸೆ ಇಲ್ಲ. ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ನೇಹಿತರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನ ಎದುರಿಸಲಾಗುವುದು ಅಂತ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ(Murugesh Nirani) ತಿಳಿಸಿದ್ದಾರೆ. ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪಕ್ಷ, ಸಂಘ ಪರಿವಾರ ತಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ(Election) ಸ್ಪರ್ಧೆ ಬೇಡ ಅಂದ್ರೆ ನಾನು ಅದಕ್ಕೂ ಬದ್ಧನಾಗಿರುತ್ತೇನೆ ಅಂತ ಸ್ಪಷ್ಟಪಡಿಸಿದ್ದಾರೆ. 

ಬಿಜೆಪಿಗೆ(BJP) ಜೆಡಿಎಸ್(JDS) ಸಪೋರ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ನಿರಾಣಿ ಅವರು, ಅದು ನನ್ನ ಗಮನಕ್ಕೆ ಬಂದಿಲ್ಲ. ಅದೆಲ್ಲ ದೊಡ್ಡವರ ಹಂತದಲ್ಲಿ ನಡೆದಿದೆ. ವಿಧಾನ ಪರಿಷತ್‌(Vidhan Parishat Election) 20 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದೇವೆ. ಈ ಪೈಕಿ ಕನಿಷ್ಠ 15 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos

undefined

120 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಹೆಗ್ಗುರಿ : ಈಶ್ವರಪ್ಪನವರಿಗೆ ಋಣಿ ಎಂದ ನಿರಾಣಿ

ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ಜೇವರ್ಗಿ(Jevargi): ಕಳೆದ 60 ವರ್ಷಗಳ ಕಾಂಗ್ರೆಸ್‌ ಸರ್ಕಾರದ(Congress Government) ಆಡಳಿತ ವೈಖರಿ ನೋಡಿ ಜನ ಬೇಸತ್ತು ಬಿಜೆಪಿಗೆ ಬೆಂಬಲಿಸಿದೆ. ಈ ದೇಶದ ಜನರ ಋುಣ ತೀರಿಸಲು ಪ್ರಧಾನಿ ನರೇಂದ್ರ ಮೋದಿ(Narendra Modi) ಕಳೆದ 7 ವರ್ಷಗಳಿಂದ ವಿಶ್ರಾಂತಿ ಪಡೆಯದೇ ಇಡೀ ವಿಶ್ವವೇ ಬೆರಗಾಗುವಂತ ಕಾರ್ಯ ಮಾಡುತ್ತಿದ್ದಾರೆ, ಆದ್ದರಿಂದ ಬರುವ ಡಿ.10ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ(BG Patil) ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಚಿವ ಸಚಿವ ಮುರುಗೇಶ ನಿರಾಣಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಮಹಿಬೂಬ್‌ ಫಂಕ್ಷನ್‌ ಹಾಲ್‌ನಲ್ಲಿ ತಾಲೂಕ ಬಿಜೆಪಿ ಮಂಡಲ ವತಿಯಿಂದ ವಿಧಾನ ಪರಿಷತ್‌ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರಚಾರ(Campaign) ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಕಲ್ಯಾಣ ಕರ್ನಾಟಕ(Kalyana Karnataka) ಎಂದು ನಾಮಕರಣ ಮಾಡುವುದರ ಜತೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು(BS Yediyurappa) 500 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ಕ-ಕ ಅಭಿವೃದ್ಧಿ ಮಂಡಳಿಗೆ 3000 ಕೋಟಿ ರು. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ನಂ.1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಶಿಕ್ಷಣ(Education), ಉದ್ಯೋಗ(Job), ತೋಟಗಾರಿಕೆ ಸುಧಾರಣೆ, ಕೃಷಿಗೆ ಹೆಚ್ಚಿನ ಒತ್ತು, ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 10 ಸಾವಿರ ಪದವಿದರರಿಗೆ ಸರ್ಕಾರದ ಸೌಲಭ್ಯ ಕೊಡಿಸಿ ತರಬೇತಿ ನೀಡುವ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.

ಸಂಸದ ಡಾ.ಉಮೇಶ ಜಾಧವ, ಎಂಎಲ್‌ಸಿಗಳಾದ ಸುನೀಲ ವಲ್ಯಾಪೂರೆ, ಶಶಿಲ್‌ ನಮೋಶಿ, ಅಮರನಾಥ ಪಾಟೀಲ,ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶರಣಪ್ಪ ತಳವಾರ, ಧರ್ಮಣ್ಣ ದೊಡ್ಡಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ತಾಲೂಕು ಅಧ್ಯಕ್ಷ ಭೀಮರಾವ ಗುಜಗೊಂಡ, ಮುಖಂಡರಾದ ರಮೇಶಬಾಬು ವಕೀಲ, ಮಲ್ಲಿನಾಥಗೌಡ ಯಲಗೋಡ, ಎಂ.ಬಿ.ಪಾಟೀಲ ಹರವಾಳ, ಶೋಬಾ ಬಾಣಿ, ಹಳ್ಳೆಪ್ಪಚಾರ್ಯ ಜೋಶಿ, ಅಶೋಕ ಸಾಹು ಗೋಗಿ, ಷಣ್ಮುಖಪ್ಪ ಸಾಹು ಗೋಗಿ, ವಿಶ್ವನಾಥ ಇಮ್ಮಣ್ಣಿ, ನಿಂಗಣ್ಣ ಭಂಡಾರಿ, ಧರ್ಮಣ್ಣ ಇಟಗಾ, ಭಾಗೇಶ ಹೋತಿನಮಡು, ಆದಪ್ಪ ಸಾಹು ಸಿಕ್ಕೆದ್‌, ಸಿದ್ಧಾಜಿ ಪಾಟೀಲ, ಭಗವಂತ್ರಾಯ ಬೆಣ್ಣೂರ, ಸಂಗನಗೌಡ ಪಾಟೀಲ ರದ್ದೇವಾಡಗಿ ಇದ್ದರು.
 

click me!