ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದ್ದು ನಿಜ, ಆದರೆ ಮುಡಾದಲ್ಲಿ ನಡೆದಿಲ್ಲ: ಎಂಬಿ ಪಾಟೀಲ್

By Ravi Janekal  |  First Published Jul 20, 2024, 11:36 AM IST

ಮುಡಾ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ. ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.


ವಿಜಯಪುರ (ಜು.20): ಮುಡಾ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ. ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.

ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ವಿಚಾರವಾಗಿ ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಾಲ್ಮೀಕಿ ನಿಗಮದ ಹಗರಣ(Valmiki corporation scam)ದ ಬಗ್ಗೆ ತನಿಖೆ ಆಗ್ತಿದೆ. ಈ ಪ್ರಕರಣದಲ್ಲಿ ಎಸ್‌ಐಟಿ ಹಾಗೂ ಇಡಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ರಿಕವರಿ ಆಗ್ತಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳ ತಪ್ಪು ಇದೆ. ನಾವೇ ಸಾಲ ಕೇಳಿದ್ರೆ ಬೇಗ ಕೊಡೊಲ್ಲ. ಕೇಂದ್ರ ವಿತ್ತ ಸಚಿವರು ಎಚ್ಚರಿಕೆ ವಹಿಸಬೇಕಿತ್ತು. ಅವರ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.

Tap to resize

Latest Videos

undefined

ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು

ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಹಗರಣ ನಡೆದಿದೆ. ಬಿಜೆಪಿಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆ ನಡೆಸುತ್ತೇವೆ. ನಾವು ಲಿಸ್ಟ್ ಕೊಡ್ತೇವೆ ಸಿಬಿಐ ತನಿಖೆ ಆಗಲಿ. ವಾಲ್ಮೀಕಿ ನಿಗಮ ಹಗರಣದಲ್ಲಿ ಸರ್ಕಾರದ ಪಾತ್ರವಿಲ್ಲ. ಹಗರಣ ಕೇಳಿಬಂದಾಗ ನಾವೇ ಸುಮ್ಮನೆ ಕೂತಿಲ್ಲ. ನಾಗೇಂದ್ರ ಮೇಲೆ ಸಹ ನೇರ ಆರೋಪ ಇಲ್ಲ. ವಿಚಾರಣೆ ನಡೆಯುತ್ತಿದೆ ಬಳಿಕ ಇದರಲ್ಲಿ ಅವರ ಪಾತ್ರ ಇದೆಯೋ ಇಲ್ವೋ ಗೊತ್ತಾಗುತ್ತೆ. ಮೌಕಿಕ ಆದೇಶ ಅಂತ ಯಾರೂ ಬೇಕಾದ್ರು ಆರೋಪ ಮಾಡಬಹುದು. ನಿಗಮಗಳಲ್ಲಿ ಮೌಖಿಕ ಆದೇಶ ಅಲ್ಲ, ರೈಟಿಂಗ್‌ನಲ್ಲಿ ಕೊಟ್ಟರೂ ಅದು ಕಾನೂನು ಬಾಹಿರ ಇದ್ರೆ ಎಂಡಿ ಮಾಡಬಾರದು. ಇದರಲ್ಲಿ ಎಂಡಿ ಪಾತ್ರವೂ ಇದೆ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿದ್ದು ಸತ್ಯ ಆದರೆ ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ನಮ್ಮ ಸರ್ಕಾರದಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ ಶಿಕ್ಷೆ ಆಗಲಿದೆ ಎಂದರು.

click me!