ತೆಲಂಗಾಣ ಎಲೆಕ್ಷನ್‌ಗೆ ವಾಲ್ಮೀಕಿ ದುಡ್ಡು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ

Published : Jul 20, 2024, 09:45 AM ISTUpdated : Jul 20, 2024, 10:58 AM IST
ತೆಲಂಗಾಣ ಎಲೆಕ್ಷನ್‌ಗೆ ವಾಲ್ಮೀಕಿ ದುಡ್ಡು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ

ಸಾರಾಂಶ

ವಾಲ್ಮೀಕಿ ನಿಗಮದ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎನ್ನುವ ಬಿಜೆಪಿ ಸದಸ್ಯರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.  

ವಿಧಾನ ಪರಿಷತ್ತು (ಜು.20): ವಾಲ್ಮೀಕಿ ನಿಗಮದ ಹಣ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಎನ್ನುವ ಬಿಜೆಪಿ ಸದಸ್ಯರ ಆರೋಪ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣವನ್ನು ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಯಲ್ಲಿ ಬಳಕೆಮಾಡಲಾಗಿದೆ ಎಂಬ ಪ್ರತಿಪಕ್ಷ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಆರೋಪಿಸಿದರು. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ಈ ಆರೋಪದ ಬಗ್ಗೆ ಯಾವುದೇ ಸಾಕ್ಷಾ ಧಾರಗಳು ಇದ್ದರೆ ಪ್ರಸ್ತುತಿ ಪಡಿಸಬೇಕು. ಇಲ್ಲದಿದ್ದರೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು. ಸದಸ್ಯರಾದ ನಸೀರ್ ಅಹ್ಮದ್‌, ಪುಟ್ಟಣ್ಣ, ಐವನ್ ಡಿಸೋಜಾ, ನಾಗರಾಜ್ ಯಾದವ್ ಸೇರಿದಂತೆ ಇತರರು ಧ್ವನಿಗೂಡಿಸಿದರು. ಇದಕ್ಕೆ ಕಿಡಿಕಾರಿದ ವಿರೋಧ ಪಕ್ಷದ ಉಪ ನಾಯಕ ಸುನೀಲ್ ವಲ್ಯಾಪುರೆ, ಭ್ರಷ್ಟಾಚಾರ ಮಾಡುವವರು ನೀವು, ನಾವು ಕ್ಷಮೆ ಕೇಳಬೇಕಾ? ಏನು ವ್ಯವಸ್ಥೆ ಇದು ಎಂದು ಕಿಡಿಕಾರಿದರು. ಸದಸ್ಯ ಸಿ.ಟಿ.ರವಿ ಮಾತನಾಡಿ, ಕ್ಷಮೆ ಯಾಕೆ, ಹಣ ಚುನಾವಣೆಗೆ ಹೋಗದಿದ್ದರೆ ಯಾವುದಕ್ಕೆ ಹೋಗಿದೆ ಹೇಳಲಿ.

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದೌರ್ಭಾಗ್ಯ ತಂದಿದೆ: ಸಂಸದ ಡಾ.ಕೆ.ಸುಧಾಕರ್

ಹೆಚ್ಚಿನ ಮಾಹಿತಿ ಆಡಳಿತ ಪಕ್ಷಕ್ಕೆ ಇರಬೇಕು, ಇದ್ದರೆ ಬೆಳಕು ಚೆಲ್ಲಲಿ. ನಿಮ್ಮ ಈ ವರ್ತನೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಗೌರವ ತರುವುದಿಲ್ಲ ವ್ಯಕ್ತಪಡಿಸಿದರು. ಎಂದು ಅಸಮಾಧಾನ ಇದೇ ವೇಳೆ ತೆಲಂಗಾಣ ಚುನಾವಣೆಗೆ ಹಣ ಹೋಗಿದೆ ಎನ್ನುವ ಪ್ರಸ್ತಾಪವನ್ನು ಕಡತದಿಂದ ತೆಗೆಯುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಅದಕ್ಕೆ ಸಿ.ಟಿ.ರವಿ ಮತ್ತು ಎನ್. ರವಿಕುಮಾರ್ ಅವರು ಎಲ್ಲಿ ಬೇಕಾದರೂ ಆಣೆ ಪ್ರಮಾಣ ಮಾಡುತ್ತೇವೆ. ತೆಲಂಗಾಣ ಚುನಾವಣೆಗೆ 20 ಕೋಟಿ ರು.ಹಣ ಖರ್ಚು ಮಾಡಿರುವುದು ನಿಜ ಎಂದರು. ಇದರಿಂದಾಗಿ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಸಭಾಪತಿಯಿಂದ ಶಿಸ್ತಿನ ಪಾಠ: ಸರ್ಕಾರದ ಬಗ್ಗೆ ಟೀಕಿಸಲು ಎಲ್ಲ ಸದಸ್ಯರಿಗೂ ಹಕ್ಕಿದೆ, ಟೀಕೆ ಮಾಡಿದ ಸಂದರ್ಭದಲ್ಲಿ ಸರ್ಕಾರ ಟೀಕೆಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು. ಅದಕ್ಕಾಗಿಯೇ ಸರ್ಕಾರದ ಉತ್ತರಕ್ಕೆ ಕೊನೆಗೆ ಅವಕಾಶ ಕೊಡುವುದು ಎಂದರು. ಸಭಾನಾಯಕ ಬೋಸರಾಜ್ ಇದನ್ನು ಒಪ್ಪದೆ, ಸರ್ಕಾರ ಉತ್ತರ ಕೊಡಲು ಅವಕಾಶ ಕೊಡಬಾರದು ಆದರೆ ಎಂದು ಪ್ಲಾನ್ ಮಾಡಿ ಹೀಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅದೆಲ್ಲವನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ಯುಬಿಐ ಯಾರ ಅಂಡರ್‌ ಬರಲಿದೆ,.

ಚಿತ್ರರಂಗದವರ ಕ್ಷೇಮಾಭಿವೃದ್ಧಿಗೆ ಮಂಡಳಿ ರಚನೆ: ಸಚಿವ ಎಚ್.ಕೆ.ಪಾಟೀಲ್

ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಲಿ ಎಂದಿದ್ದೇವಾ? ಕೇಂದ್ರದ ತುತ್ತೂರಿಯಂತೆ ಇಲ್ಲಿ ಸಿಎಂ, ರಾಜೀನಾಮೆ, ತೆಲಂಗಾಣ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಕಿಡಿಕಾರಿದ ಬಿಜೆಪಿ ಸದಸ್ಯರು ಪುಟ್ಟಣ್ಣ ಸರ್ಕಾರದ ಪರ ಉತ್ತರ ನೀಡುವ ಸ್ಥಾನದಲ್ಲಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಏರಿದ ದನಿಯಲ್ಲಿ ತಿರುಗೇಟು ನೀಡಿದ ಪುಟ್ಟಣ್ಣ ವರ್ತನೆಗೆ ಕೆರಳಿದ ಸಿಟಿ ರವಿ, ಗುಂಡಾಗಿರಿ ಮಾಡುತ್ತೀರಾ? ಎಂದು ಟೀಕಿಸಿದರು. ಸದನದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!