ಚಿತ್ರರಂಗದವರ ಕ್ಷೇಮಾಭಿವೃದ್ಧಿಗೆ ಮಂಡಳಿ ರಚನೆ: ಸಚಿವ ಎಚ್.ಕೆ.ಪಾಟೀಲ್

By Kannadaprabha News  |  First Published Jul 20, 2024, 8:46 AM IST

ಚಲನಚಿತ್ರ ಕಲಾವಿದರು, ಸಂಗೀತಗಾರರು, ನೃತ್ಯಪಟುಗಳು ಸೇರಿದವರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕವನ್ನು ರೂಪಿಸಿದೆ.


ವಿಧಾನಸಭೆ (ಜು.20): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಗದ್ದಲದ ನಡುವೆಯೇ ಕಲಾಪದಲ್ಲಿ ಶುಕ್ರವಾರ ಮೂರು ವಿಧೇಯಕಗಳನ್ನು ಮಂಡಿಸಲಾಯಿತು. ಚಲನಚಿತ್ರ ಕಲಾವಿದರು, ಸಂಗೀತಗಾರರು, ನೃತ್ಯಪಟುಗಳು ಸೇರಿದವರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಅದಕ್ಕಾಗಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕವನ್ನು ರೂಪಿಸಿದೆ. ಈ ವಿಧೇಯಕವನ್ನು ಶುಕ್ರವಾರ ಸಂಸದೀಯ ವ್ಯವಹಾರಗಳು ಮತ್ತು ಕಾನೂನು ರಚನೆ ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದರು.

ಅದೇ ರೀತಿ ಸಿಎಂರ ರಾಜಕೀಯ ಕಾರ್ಯದರ್ಶಿ 1 ಮತ್ತು 2, ಆರ್ಥಿಕ ಸಲಹೆಗಾರ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗಳಿಗೆ ಶಾಸಕರನ್ನು ನೇಮಿಸುವ ಸಂಬಂಧ ಇದ್ದಂತಹ ನಿರ್ಬಂಧವನ್ನು ತೆಗೆಯಲು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕಕ್ಕೆ 2ನೇತಿದ್ದುಪಡಿ ತರಲಾಗುತ್ತಿದ್ದು, ಆ ವಿಧೇಯಕವನ್ನೂ ಮಂಡಿಸಲಾ ಯಿತು. ಜತೆಗೆ ತಂಬಾಕು ಉತ್ಪನ್ನ ಮತ್ತು ಪಾನ್ ಉತ್ಪಾದನೆಯಲ್ಲಿ ಬಳಸುವ ಯಂತ್ರಗಳಿಗೆ ನೋಂದಣಿ ಹಾಗೂ ನೋಂದಣಿ ಮಾಡದಿರುವವರಿಗೆ ದಂಡ ವಿಧಿಸಲು ಕರ್ನಾಟಕ ಸರಕು ಮತ್ತು ಸೇವೆಗಳ ವಿಧೇಯಕಕ್ಕೆ ಹೊಸ ಕಲಂ ಸೇರಿಸಿ ತಿದ್ದುಪಡಿ ವಿದೇಯವನ್ನು ಪಾಟೀಲ್ ಮಂಡಿಸಿದರು. ಈ 3 ವಿಧೇಯಕ ಮಂಡನೆಗೆ ಧ್ವನಿ ಮತದ ಮೂಲಕ ಒಪ್ಪಿಗೆ ದೊರೆಯಿತು.

Latest Videos

undefined

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಇ.ಡಿ. ಯತ್ನ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆ ಹೆಸರಿನಲ್ಲಿ ಇ.ಡಿ. ಅಧಿಕಾರಿಗಳು ಬಿಜೆಪಿ ನಾಯಕರೊಂದಿಗೆ ಸೇರಿಕೊಂಡು ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೊಡಗಿನ ವಿರಾಜಪೇಟೆಯ ಕಾಂಗ್ರೆಸ್‌ ಶಾಸಕ ಎ.ಎಸ್‌. ಪೊನ್ನಣ್ಣ ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದ ತನಿಖೆ ವಿಚಾರದಲ್ಲಿ ಇ.ಡಿ. ಅಧಿಕಾರಿಗಳು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಹಣ ಚುನಾವಣೆಗೆ ಬಳಕೆಯಾಗಿದೆ ಎಂಬುದಾಗಿ ಸುಳ್ಳು ಹರಡುತ್ತಿದ್ದಾರೆ. ಇ.ಡಿ. ತನಿಖೆ ನಡೆಸುತ್ತಿರುವ ವಿಚಾರಗಳನ್ನು ಬಿಜೆಪಿ ನಾಯಕರು ಸದನದಲ್ಲಿ ಚರ್ಚಿಸುತ್ತಿದ್ದಾರೆ. ಇ.ಡಿ. ತನಿಖೆ ವಿಚಾರ ಬಿಜೆಪಿ ನಾಯಕರಿಗೆ ಹೇಗೆ ತಿಳಿಯುತ್ತಿವೆ?’ ಎಂದು ಪ್ರಶ್ನಿಸಿದರು.

click me!