ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರವಾಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನೂ ವಿರೋಧವಿಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಮೇ.08): ಪೆನ್ಡ್ರೈವ್ ವಿಚಾರ ನನಗೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡುತ್ತಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗೆ ನಾವು ಸುದೀರ್ಘ ಅವಧಿ ಇರಲು ಮೈತ್ರಿ ಮಾಡಿಕೊಂಡಿದ್ದೇವೆ. ಈ ಪ್ರಕರಣದಿಂದ ಬಿಜೆಪಿಯವರಿಗೆ ಮುಜುಗರವಾಗುವುದಾದರೆ ಅವರೇ ತೀರ್ಮಾನ ಮಾಡಲಿ. ನಮ್ಮದೇನೂ ವಿರೋಧವಿಲ್ಲ ಎಂದರು.
ಪ್ರಜ್ವಲ್ ರೇವಣ್ಣನ ಬಿಟ್ಟುಬಿಡ್ತಾರೆ, ನಮ್ಮಂಥವರನ್ನು ಮಾತ್ರ ಬಂಧಿಸ್ತಾರೆ: ಕೆಸಿಆರ್ ಪುತ್ರಿ ಕವಿತಾ
ಬಿಜೆಪಿಯವರದ್ದು ರಾಷ್ಟ್ರೀಯ ಪಕ್ಷ. ಅವರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಇರುತ್ತದೆಯೋ, ಇರುವುದಿಲ್ಲವೋ ಮುಂದೆ ನೋಡೋಣ ಎಂದು ಹೇಳಿದರು.