ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕುಸಿತ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Aug 16, 2023, 7:43 AM IST

ಇತ್ತೀಚೆಗೆ ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ. ಅದರಿಂದಾಗಿ ಸಮಾಜದಲ್ಲಿ ಸುಧಾರಣೆ ತರಲು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ಬೆಂಗಳೂರು (ಆ.16): ಇತ್ತೀಚೆಗೆ ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ. ಅದರಿಂದಾಗಿ ಸಮಾಜದಲ್ಲಿ ಸುಧಾರಣೆ ತರಲು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಚಂದ್ರ ಲೇಔಟ್‌ನಲ್ಲಿರುವ ಕನಕ ಭವನದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರು ಹುಟ್ಟುತ್ತಾ ವಿಶ್ವ ಮಾನವರಾಗಿರುತ್ತಾರೆ. ಅದೇ ಬೆಳೆಯುತ್ತಾ ಅಲ್ಪ ಮಾನವರಾಗಿ ಪರಿವರ್ತನೆಯಾಗುತ್ತಾರೆ. 

ಪ್ರತಿಯೊಬ್ಬರೂ ಆಸ್ತಿ, ಅಧಿಕಾರಗಳಿಸುವುದಕ್ಕಿಂತ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಸೇವಾ ಮನೋಭಾವದಿಂದ ವಿಮುಖರಾಗುತ್ತಿದ್ದಾರೆ. ಅವರಲ್ಲಿ ಸೇವಾ ಮನೋಭಾವ ಬೆಳೆದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಯುವಕರು ರಾಜಕೀಯಕ್ಕೆ ಬರುವಾಗ ಅಧಿಕಾರದ ಲಾಲಸೆ ಹೊಂದದೆ ಸೇವಾ ಮನೋಭಾವದಿಂದ ಬರಬೇಕು ಎಂದು ಕಿವಿಮಾತು ಹೇಳಿದರು. 

Tap to resize

Latest Videos

ದ್ವೇಷದಿಂದ ಅಭಿವೃದ್ಧಿ ಅಸಾಧ್ಯ, ದುಷ್ಟರ ಆಟ ಇನ್ನು ನಡೆಯಲ್ಲ: ಸಿದ್ದರಾಮಯ್ಯ ಭವಿಷ್ಯ

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ 623 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ನಿರಂನಾನಂದಪುರ ಸ್ವಾಮೀಜಿ, ಶಾಖಾ ಮಠದ ಸ್ವಾಮೀಜಿಗಳಾದ ಶ್ರೀ ಶಿವಾನಂದಪುರ ಸ್ವಾಮೀಜಿ, ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಮಣಿ ಇತರರಿದ್ದರು.

ಮಠಕ್ಕೆ ಜಾಗ ನೀಡಿ: ಚಂದ್ರ ಲೇಔಟ್‌ನಲ್ಲಿನ ಕನಕ ಭವನದ ಜಾಗವು ಗುತ್ತಿಗೆ ಆಧಾರದಲ್ಲಿ ಬಿಡಿಎಯಿಂದ ಪಡೆಯಲಾಗಿದೆ. ಹೀಗಾಗಿ ಆ ಜಾಗವನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಬೆಂಗಳೂರು ಶಾಖಾ ಮಠಕ್ಕೆ ಶಾಶ್ವತವಾಗಿ ನೀಡಬೇಕು ಎಂದು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಅದಕ್ಕುತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನಕ ಭವನ ಇರುವ ಜಾಗವನ್ನು ಶಾಖಾ ಮಠಕ್ಕೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದರ ಜತೆಗೆ ಸ್ಪಾರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದರು.

‘ಆಗದೆ ಇರೋದನ್ನ ಮಾತನಾಡಬೇಡಿ’: ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಮೊದಲ ಅವಧಿಯಲ್ಲಿ ಸಂಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದೆ. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದರು. ಅದಕ್ಕೆ ಜನರು, ಈ ಬಾರಿಯೂ 5 ವರ್ಷ ಪೂರೈಸಬೇಕು. ಇಲ್ಲದಿದ್ದರೆ ಮುಂದೆ ಪ್ರಧಾನಮಂತ್ರಿ ಆಗಬೇಕು ಎಂದು ಘೋಷಣೆ ಕೂಗಿದರು. ಆಗ ಸಿದ್ದರಾಮಯ್ಯ, ಆಗದೇ ಇರುವುದನ್ನೆಲ್ಲ ಮಾತನಾಡಬೇಡಿ. ಈಗ ಆಗುವುದನ್ನಷ್ಟೇ ಮಾತನಾಡಿ ಎಂದು ಗದರಿದರು.

77ನೇ ಸ್ವಾತಂತ್ರ್ಯೋತ್ಸವ: ವಿಧುರಾಶ್ವತ್ಥ, ಕಾರ್ಗಿಲ್‌ ತ್ಯಾಗ ಕತೆ ಹೇಳಿದ ಮಕ್ಕಳು

‘ನೀನೆಷ್ಟು ಹಣ ಕೊಡ್ತೀಯ?’: ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ಕಾಗಿನೆಲೆ ಮಹಾಸಂಸ್ಥಾನದಿಂದ ಮೆಡಿಕಲ್‌ ಕಾಲೇಜು ಮಾಡಬೇಕು ಎಂದು ಕೂಗಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಸುಮ್ಮನೇ ಕೂಗುವುದಲ್ಲ. ಮೆಡಿಕಲ್‌ ಕಾಲೇಜು ಮಾಡಲು ಮಠಕ್ಕೆ ನೀನೆಷ್ಟು ದೇಣಿಗೆ ಕೊಡುತ್ತೀಯ ಹೇಳು ಎಂದು ನಗುತ್ತಲೇ ಪ್ರಶ್ನಿಸಿದರು.

click me!