* ರಾಜ್ಯದಲ್ಲಿ ಒಟ್ಟು 97 ಲಕ್ಷ ಮನೆಗಳಿಗೆ ನೀರು ನೀಡುವ ಗುರಿ
* ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನೀರು ನೀಡಲಾಗಿದೆ
* ಕೇಂದ್ರ ಸರ್ಕಾರದ ನೆರವಿನ ಮಹತ್ವದ ಯೋಜನೆ
ರಾಯಚೂರು(ಮಾ.13): ಒಂದು ಕಾಲದಲ್ಲಿ ಕಾಂಗ್ರೆಸ್(Congress) ಎಂದರೆ ಯುವಕರು ರೋಮಾಂಚನಗೊಳ್ಳುತ್ತಿದ್ದರು. ಅಂತಹ ಪಕ್ಷ ಇಂದು ಸದಸ್ಯತ್ವ ಪಡೆಯುವುದಕ್ಕಾಗಿ ಆಸೆ-ಆಮಿಷ ತೋರಿಸುವ ದುಸ್ಥಿತಿಗೆ ತಲುಪಿರುವುದು ನೋಡಿದರೆ ನೋವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಲೇವಡಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಸಂಜೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆಯುವುದಕ್ಕಾಗಿ ಗಿಫ್ಟ್‌ಗಳನ್ನು ನೀಡುತ್ತಿದೆ. ಇಂತಹ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂತಲ್ಲಾ ಎನ್ನುವ ನೋವು ಕಾಡುತ್ತಿದೆ ಎಂದರು.
undefined
ಶಿಕಾರಿಪುರ ಜನರ ಋಣದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಬೆಂಕಿಯ ಚೆಂಡು ಎಂದ ಈಶ್ವರಪ್ಪ
ಪ್ರತಿ ಮನೆಗೆ ನೀರು ತಲುಪಿಸುವ ಕಾರ್ಯ:
ಯಾದಗಿರಿ: ಜಲಜೀವನ್ ಮಿಷನ್(Jal Jeevan Mission) ಯೋಜನೆಯಡಿ ಒಂದು ವರ್ಷದಲ್ಲಿ ರಾಜ್ಯದಲ್ಲಿ ಪ್ರತಿ ಮನೆಗಳಿಗೆ ನಲ್ಲಿ (ನಳ)ಗಳಲ್ಲಿ ನೀರು ಬಿಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಎರಡು ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಲೂಕು ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ(Karnataka) ಒಟ್ಟು 97 ಲಕ್ಷ ಮನೆಗಳಿಗೆ ನೀರು(Water) ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನೀರು ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 37,813 ಮನೆಗಳಿಗ ನೀರು ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ(Central Government) ನೆರವಿನ ಮಹತ್ವದ ಯೋಜನೆ ಇದಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ಈ ಯೋಜನೆ ಸಫಲವಾದಲ್ಲಿ ಸಂತೃಪ್ತರಾಗಲಿದ್ದಾರೆ ಎಂದು ಹೇಳಿದರು.
ಕೊರೋನಾ(Coronavirus) ಸಂದರ್ಭದಲ್ಲಿ ಯಾರೂ ಉಪವಾಸದಿಂದ ಇರಬಾರದೆಂದು ಬಡ ಜನರು ಹಾಗೂ ಕೂಲಿ ಕಾರ್ಮಿಕರಿಗಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೊಸದಾಗಿ ಆದೇಶ ಮಾಡಿರುವ 1 ಕೋಟಿ 60 ಲಕ್ಷ ಮಾನವ ದಿನಗಳು ಸೇರಿ ಒಟ್ಟು 16 ಕೋಟಿ ಮಾನವ ದಿನಗಳ ಉದ್ಯೋಗ ನೀಡಿದೆ ಎಂದರು.
ನೂತನವಾಗಿ ನಿರ್ಮಿಸಲಾಗಿರುವ ತಾಲೂಕು ಪಂಚಾಯತ್ ಕಾರ್ಯಾಲಯವು ಸಾರ್ವಜನಿಕರಿಗೆ ಅನುಕೂಲವಾಗುವಂತಹ ದೇವಸ್ಥಾನದಂತಿರಬೇಕು. ಕಚೇರಿಗೆ ಅಗತ್ಯವಿರುವ ಕಂಪೌಂಡ್ ಹಾಗೂ ಪೀಠೋಪಕರಣಗಳ ಅನುದಾನ ಕೋರಿ ಕಾರ್ಯಯೋಜನೆ ರೂಪಿಸಿ, ಪ್ರಸ್ತಾಪನೆ ಸಲ್ಲಿಸಿದಲ್ಲಿ ಅಗತ್ಯವಿರುವಷ್ಟುಹಣ ಮಂಜೂರು ಮಾಡಲಾಗುವುದು. ಯಾದಗಿರಿ ತಾಲೂಕು ಪಂಚಾಯತ್ ಕಾರ್ಯಾಲಯದ ಕಟ್ಟಡವು ಪಂಚಾಯತ್ ರಾಜ್ ಆಯುಕ್ತರಾದ ಶಿಲ್ಪಾಶರ್ಮಾ ಅವರ ಕನಸಿನ ಕೂಸು ಎಂದು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
Mekedatu Politics: ಕಾಂಗ್ರೆಸ್ ಪಾದಯಾತ್ರೆ Baahubali-2 ಸಿನಿಮಾ: ಈಶ್ವರಪ್ಪ
ಇದೇ ವೇಳೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್ ಅವರು, ಕಾರ್ಯಾಲಯಕ್ಕೆ ಕಂಪೌಂಡ್ ಗೋಡೆ ಹಾಗೂ ಪೀಠೋಪಕರಣಗಳಿಗೆ ಅನುದಾನ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚಿನಸೂರ, ಭೀಮರಾಯನಗುಡಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಪಂಚಾಯತ್ ರಾಜ್ ಆಯುಕ್ತರಾದ ಶಿಲ್ಪಾಶರ್ಮಾ, ಜಿಪಂ ಸಿಇಓ ಅಮರೇಶ್ ಆರ್. ನಾಯಕ, ತಾಪಂ ಇಓ ಬಸವರಾಜ ಶರಭೈ ಸೇರಿದಂತೆ ಇತರರಿದ್ದರು.
ಕೆಲವು ಗೂಂಡಾ ಮುಸ್ಲಿಂರ ವಿಕೃತಿ ಕಡಿಮೆಯಾಗಿಲ್ಲ: ಈಶ್ವರಪ್ಪ
ಶಿವಮೊಗ್ಗ: ಶಾಂತ ಸ್ಥಿತಿಯನ್ನು ಮತ್ತಷ್ಟು ಕದಡುವ ರೀತಿಯಲ್ಲಿ ಮುಸ್ಲಿಂ ಗೂಂಡಾಗಳು(Muslim Goons) ವರ್ತಿಸುತ್ತಿದ್ದಾರೆ. ಅವರಿಗೆ ಆ ಸಮುದಾಯದ ಹಿರಿಯರು ಪಾಠ ಕಲಿಸಬೇಕು. ಇಲ್ಲದಿದ್ದರೆ, ನಾವೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದರು.
ಮಾ.05 ರಂದು ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೆಂಕಟೇಶ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಬಳಿಕ ನಗರದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿದೆ. ಹಿಂದೂ(Hindu) ಸಮಾಜ ಕೂಡ ಘಟನೆಯಿಂದ ಆಕ್ರೋಶ ಗೊಂಡಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.