ಇಬ್ರಾಹಿಂ ನಂತರ ಸಿದ್ದು ಕಾಂಗ್ರೆಸ್‌ ಬಿಟ್ಟರೂ ಆಶ್ಚರ್ಯವಿಲ್ಲ: ಸಿ.ಟಿ.ರವಿ

By Girish Goudar  |  First Published Mar 13, 2022, 8:06 AM IST

*  ಕಾಂಗ್ರೆಸ್‌ ನೀತಿಹೀನ, ನೇತೃತ್ವಹೀನ ಪಕ್ಷ
*  ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ ಬಿಡುತ್ತಿದ್ದಾರೆ, ಸಿದ್ದರಾಮಯ್ಯ ಸಹ ಬಿಟ್ರೂ ಆಶ್ಚರ್ಯವಿಲ್ಲ
*  ದೇಹದಲ್ಲಿ ಕ್ಯಾನ್ಸರ್‌ ಹರಡುವಂತೆ ಕಾಂಗ್ರೆಸ್‌ ಪಕ್ಷಕ್ಕೆ ಕ್ಯಾನ್ಸರ್‌ ಬಂದಿದೆ
 


ಚಿಕ್ಕಮಗಳೂರು(ಮಾ.13):  ಕಾಂಗ್ರೆಸ್‌(Congress), ನೀತಿಹೀನ, ನೇತೃತ್ವಹೀನ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಆರೋಪಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬೆಳವಣಿಗೆಗೆ ನೇತೃತ್ವ ಮತ್ತು ನೀತಿ ಕಾರಣವಾಗಿರುತ್ತದೆ. ಕಾಂಗ್ರೆಸ್‌ ಪಕ್ಷದಲ್ಲಿ ನೇತೃತ್ವವೂ ಇಲ್ಲ, ನೀತಿಯೂ ಇಲ್ಲ. ಹಾಗಾಗಿ ಜನ ವಿಶ್ವಾಸ ಇಡಲು ಸಾಧ್ಯ ಇಲ್ಲ ಎಂದರು.

ಕ್ಯಾನ್ಸರ್‌, ದೇಹದಲ್ಲಿ ಹೇಗೆ ಹರಡುತ್ತದೆಯೋ ಹಾಗೆ, ಕಾಂಗ್ರೆಸ್‌ ಪಕ್ಷಕ್ಕೆ ಕ್ಯಾನ್ಸರ್‌ ಬಂದಿದೆ. ಅದಕ್ಕೆ ಚಿಕಿತ್ಸೆ ಇಲ್ಲ. ಅದು, ಜಾತಿವಾದ, ಪರಿವಾರವಾದ, ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಅದಕ್ಕೆ ಚಿಕಿತ್ಸೆ ಇಲ್ಲ. ಹಾಗಾಗಿ ಅದು ಬದುಕುತ್ತೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

Tap to resize

Latest Videos

Karnataka Politics: ಸಿದ್ದು ಮತೀಯವಾದಿ, ಕೇಸರಿ ಕಂಡ್ರೆ ಉರಿದುಬೀಳ್ತಾರೆ: ಸಿ.ಟಿ.ರವಿ

ಕರ್ನಾಟಕದಲ್ಲಿ(Karnataka) ಕಾಂಗ್ರೆಸ್‌ ಗುಟುಕು ಜೀವ ಇಟ್ಟುಕೊಂಡಿದೆ. ನಮ್ಮ ರಾಜ್ಯದ ಪರಿಸ್ಥಿತಿ, ಉತ್ತರ ಪ್ರದೇಶದ(Uttar Pradesh) ಪರಿಸ್ಥಿತಿ ಒಂದೇ ಇಲ್ಲ. ಆದರೆ, ಕಾಂಗ್ರೆಸ್‌ ಪಕ್ಷದ ನಾಯಕರು ಪ್ರತಿನಿಧಿಸುವಂತಹ ರಾಜ್ಯ ಉತ್ತರಪ್ರದೇಶ. ಅಲ್ಲಿ ಆ ಪರಿಸ್ಥಿತಿ ಬಂದಿದೆ ಎಂದರು.

ಸಿದ್ದರಾಮಯ್ಯ(Siddaramaiah), ಕಾಂಗ್ರೆಸ್‌ ಬಿಟ್ರೂ ಆಶ್ಚರ್ಯ ಇಲ್ಲ. ಅವರ ಆಪ್ತ ಸಿ.ಎಂ. ಇಬ್ರಾಹಿಂ(CM Ibrahim) ಕಾಂಗ್ರೆಸ್‌ ಬಿಡುತ್ತಿದ್ದಾರೆ. ಅವರಿಬ್ಬರ ದೋಸ್ತಿ ಬಗ್ಗೆ ಜನ ಬಹಳಷ್ಟು ಮಾತನಾಡುತ್ತಿದ್ದಾರೆ ಎಂದ ಸಿ.ಟಿ. ರವಿ, ಅವರನ್ನು ಮುಂದೆ ಕಳುಹಿಸಿ ಹಿಂದೆ ಸಿದ್ದರಾಮಯ್ಯ ಹೋದ್ರು ಹೋಗಬಹುದು ಎಂದು ಹೇಳಿದರು.

ಆಮಿಷ, ಆಸೆ ತೋರಿಸಿ ಸದಸ್ಯತ್ವ ಮಾಡಿಸಿದರೆ, ಪಕ್ಷದ ಬದ್ಧತೆ ಇರಲು ಸಾಧ್ಯವಿಲ್ಲ. ಪಕ್ಷದ ವಿಚಾರ ತಿಳಿದು ನಾಯಕತ್ವದ ಮೇಲೆ ನಂಬಿಕೆ ಇಟ್ಟುಕೊಂಡು ವಿಶ್ವಾಸದ ಮೇಲೆ ಸದಸ್ಯರಾಗುವವರು ಉಳಿದುಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದ ಬಗ್ಗೆ ಲೇವಡಿ ಮಾಡಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ(BJP Government) ಅವಧಿ ಪೂರ್ಣಗೊಳಿಸುತ್ತೆ. 2023 ಮಾರ್ಚ್‌ ನಂತರವೇ ರಾಜ್ಯದಲ್ಲಿ ಚುನಾವಣೆ(Election) ನಡೆಯಲಿದೆ. ಪಕ್ಷದ ನಾಯಕತ್ವ ಬದಲಾವಣೆ ಇಲ್ಲ, ಈ ಕುರಿತು ಪಕ್ಷದ ಸಂಸದೀಯ ಮಂಡಳಿ ಚರ್ಚೆಯಾಗಿಲ್ಲ. ಸಂಪುಟ ವಿಸ್ತರಣೆ(Cabinet Expansion) ಮಾಡಬೇಕು, ಆ ಮೂಲಕ ಹೊಸ ರೀತಿಯ ಚಿಕಿತ್ಸೆ ನೀಡಬೇಕು, ಸಮಗ್ರ ಬದಲಾವಣೆ ತರಬೇಕು, ಇನ್ನಷ್ಟು ಜನಸ್ನೇಹಿಯಾಗಬೇಕು ಎಂಬುದು ಕೆಲವರ ಅಪೇಕ್ಷೆ ಇದೆ ಎಂದರು.

ಸಿದ್ದರಾಮಯ್ಯನವರೇ, ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ:

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಆರಂಭವಾಗಿವೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಣ್ಣನನ್ನು(Siddaramaiah) ಮುಗಿಸಲು ಈ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ವ್ಯಂಗ್ಯವಾಡಿದ್ದರು.

Cabinet Reshuffle: ಸಂಪುಟ ಪುನಾರಚನೆ ಬಗ್ಗೆ ಮಾಹಿತಿ ಇಲ್ಲ, ಗೋವಾ ಚುನಾವಣೆಯಲ್ಲಿ ಬ್ಯುಸಿ: ಸಿ ಟಿ ರವಿ

ಮಾ.01 ರಂದು ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌(Congress), ಜೆಡಿಎಸ್‌(JDS) ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಜ್ಯದಲ್ಲಿ(Karnataka) ಇನ್ನೂ 10 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ. ಬಳಿಕ ರಾಜ್ಯವು ಕಾಂಗ್ರೆಸ್‌ ಮುಕ್ತವಾಗಲಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಮಾತನಾಡಿ, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. 2014ರಲ್ಲಿ ನರೇಂದ್ರ ಮೋದಿ(Narendra Modi) ಅವರು ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಸಿದ್ದರಾಮಯ್ಯನವರೇ, ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ. ಪಕ್ಷದ ಶಾಸಕನ ಮನೆಗೆ ಬೆಂಕಿ ಹಾಕಿದ ಕಾಂಗ್ರೆಸ್‌ ಪಕ್ಷದವರಿಗೆ ಯಾರೂ ಮತ ಕೊಡುವುದಿಲ್ಲ ಎಂದು ತಿಳಿಸಿದ್ದರು.

click me!