* ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ
* ಈ ಕುರಿತು ಸಿಎಂಗೆ ಪತ್ರ ಬರೆಯುವುದಾಗಿ ತಿಳಿಸಿದ ರೆಡ್ಡಿ
* ಬಿಜೆಪಿ ಸರ್ಕಾರದಲ್ಲಿ ತಾರತಮ್ಯ ನಿರಂತರವಾಗಿ ನಡೆಯುತ್ತಿದೆ
ಬೆಂಗಳೂರು(ಮಾ.13): ರಾಜ್ಯ ಬಿಜೆಪಿ ಸರ್ಕಾರ(BJP Government) ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಮಾಡುತ್ತಿರುವ ತಾರತಮ್ಯವನ್ನು ಮುಖ್ಯಮಂತ್ರಿಯವರು ಕೂಡಲೇ ಸರಿಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ(Ramalinga Reddy) ಆಗ್ರಹಿಸಿದ್ದಾರೆ.
ಶನಿವಾರ ಕೆಪಿಸಿಸಿ(KPCC) ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಶಾಸಕರ 15 ಕ್ಷೇತ್ರಗಳಿಗೆ ಒಟ್ಟು 9888 ಕೋಟಿ ರುಪಾಯಿಗಳಷ್ಟು ಅನುದಾನ(Grants) ನೀಡಿದೆ. ಆದರೆ, ಕಾಂಗ್ರೆಸ್ ಶಾಸಕರ 12 ಕ್ಷೇತ್ರಗಳಿಗೆ 2,186.48 ಕೋಟಿ ರು. ನೀಡಿದೆ. ಜೆಡಿಎಸ್ ಶಾಸಕರು ಇರುವ ದಾಸರಹಳ್ಳಿಗೆ 288.5 ಕೋಟಿ ರು. ಕೊಡಲಾಗಿದೆ. ಆ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗಿಂತ 5 ಪಟ್ಟು ಹೆಚ್ಚಿನ ಅನುದಾನವನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
Bengaluru: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಪ್ರತಿಭಟಿಸುತ್ತೇವೆ: ರೆಡ್ಡಿ
ಸಿದ್ದರಾಮಯ್ಯ(Siddaramaiah) ಅವರ ಸರ್ಕಾರದಲ್ಲಿ ಬೆಂಗಳೂರಿಗೆ(Bengaluru) 7,200 ಕೋಟಿ, ಸಮ್ಮಿಶ್ರ ಸರ್ಕಾರದಲ್ಲಿ .1 ಸಾವಿರ ಕೋಟಿ ಹಣವನ್ನು ವಿವಿಧ ಕ್ಷೇತ್ರಗಳಿಗೆ ಅನುದಾನವಾಗಿ ನೀಡಿತ್ತು. ಈ ಹಣವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಲಾಗಿದ್ದ ಅನುದಾನವನ್ನು ಹಿಂಪಡೆದು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಗೆ ಮರುಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಅಮೃತ್ ನಗರ ಯೋಜನೆ ಅಡಿಯಲ್ಲಿ .3600 ಕೋಟಿ ಕೊಟ್ಟಿದ್ದಾರೆ. 1500 ಕೋಟಿಯನ್ನು ಮಳೆ ನೀರುಗಾಲುವೆಗಾಗಿ ಕೊಡಲಾಗಿದೆ. ಈ ಯೋಜನೆಗಳಲ್ಲೂ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ಕೊಡಲಾಗಿದೆ. ಮಳೆನೀರುಗಾಲುವೆಗೆ ನೀಡಲಾಗಿರುವ ಅನುದಾನದಲ್ಲಿ ಬಿಟಿಎಂ ಹಾಗೂ ಜಯನಗರ ಕ್ಷೇತ್ರಗಳಿಗೆ ಶೂನ್ಯ ಅನುದಾನ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ನಗರೋತ್ಥಾನ, ಅಮೃತ್ ನಗರ ಮತ್ತು ಮಳೆನೀರು ಗಾಲುವೆ ಯೋಜನೆಗೆ ಬಿಜೆಪಿ ಶಾಸಕರ ಕ್ಷೇತ್ರಗಳಾದ ಬೆಂಗಳೂರು ದಕ್ಷಿಣ .821.75 ಕೋಟಿ, ಬಸವನಗುಡಿ .377.5 ಕೋಟಿ, ಬೊಮ್ಮನಹಳ್ಳಿ .915.83 ಕೋಟಿ, ಸಿ.ವಿ.ರಾಮನ್ ನಗರ .485.93 ಕೋಟಿ, ಚಿಕ್ಕಪೇಟೆ .380.4 ಕೋಟಿ, ಗೋವಿಂದರಾಜನಗರ .630.5 ಕೋಟಿ, ಮಹದೇವಪುರ .752.85 ಕೋಟಿ, ಮಲ್ಲೇಶ್ವರಂ .403.6 ಕೋಟಿ, ಪದ್ಮನಾಭನಗರ .415.24 ಕೋಟಿ, ರಾಜಾಜಿನಗರ .335.2 ಕೋಟಿ, ಯಲಹಂಕ .665.56 ಕೋಟಿ , ಕೆ.ಆರ್.ಪುರಂ .926.7 ಕೋಟಿ, ಮಹಾಲಕ್ಷ್ಮಿ ಬಡಾವಣೆ .527.25 ಕೋಟಿ, ರಾಜರಾಜೇಶ್ವರಿ ನಗರ .1253.35 ಕೋಟಿ, ಯಶವಂತಪುರ .1046.48 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
Karnataka Govt :ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಎಚ್ಚರಿಕೆ
ಉಳಿದಂತೆ ಕಾಂಗ್ರೆಸ್(Congress) ಶಾಸಕರ ಕ್ಷೇತ್ರಗಳಾದ ಬಿಟಿಎಂ ಬಡಾವಣೆ .232.84 ಕೋಟಿ, ಬ್ಯಾಟರಾಯನಪುರ .253.39 ಕೋಟಿ, ಚಾಮರಾಜಪೇಟೆ .136 ಕೋಟಿ, ಗಾಂಧಿನಗರ .202.41 ಕೋಟಿ, ಹೆಬ್ಬಾಳ .196.84 ಕೋಟಿ, ಜಯನಗರ .182 ಕೋಟಿ, ಪುಲಕೇಶಿನಗರ .140.95 ಕೋಟಿ, ಸರ್ವಜ್ಞನಗರ .225.52 ಕೋಟಿ, ಶಾಂತಿನಗರ .159.75 ಕೋಟಿ, ವಿಜಯನಗರ .198.26 ಕೋಟಿ, ಆನೇಕಲ್ .10 ಕೋಟಿ, ಶಿವಾಜಿ ನಗರಕ್ಕೆ .248.52 ಕೋಟಿ ನೀಡಲಾಗಿದೆ. ಇನ್ನು ಜೆಡಿಎಸ್ ಶಾಸಕರಿರುವ ದಾಸರಹಳ್ಳಿ ಕ್ಷೇತ್ರಕ್ಕೆ .288.5 ಕೋಟಿ ಅನುದಾನ ನೀಡಲಾಗಿದೆ ಎಂದರು.
ಹೀಗೆ ಬಿಜೆಪಿಯ ಇಂದಿನ ಹಾಗೂ ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಈ ರೀತಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಕ್ಷೇತ್ರದ ಜನರು ಕೂಡ ತೆರಿಗೆ ಪಾವತಿಸುತ್ತಿದ್ದು, ಬಿಜೆಪಿ ಸರ್ಕಾರದಲ್ಲಿ ಇಂತಹ ತಾರತಮ್ಯ ನಿರಂತರವಾಗಿ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.