Karnataka Politics: ಪಾದಯಾತ್ರೆಗೆ ಸಿದ್ದು, ಡಿಕೆಶಿ ಹಠ ಹಿಡಿದರೆ ನಾವೇನು ಮಾಡೋಣ: ಈಶ್ವರಪ್ಪ

Kannadaprabha News   | Asianet News
Published : Jan 09, 2022, 06:00 AM ISTUpdated : Jan 09, 2022, 08:35 AM IST
Karnataka Politics: ಪಾದಯಾತ್ರೆಗೆ ಸಿದ್ದು, ಡಿಕೆಶಿ ಹಠ ಹಿಡಿದರೆ ನಾವೇನು ಮಾಡೋಣ: ಈಶ್ವರಪ್ಪ

ಸಾರಾಂಶ

*  ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನೂ ಏಕೆ ಸಾಯಿಸುತ್ತೀರಾ? *  ದೇಶ ಹಾಗೂ ರಾಜ್ಯದಲ್ಲಿ ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ *  ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷವೇ ಇಲ್ಲ   

ಶಿವಮೊಗ್ಗ(ಜ.09):  ಕೊರೋನಾ(Coronavirus) ಸಂದರ್ಭದಲ್ಲಿ ಹೋರಾಟ ನಡೆಸಿ ಆಪತ್ತು ತಂದುಕೊಳ್ಳಬೇಡಿ, ಸಾಯಬೇಡಿ ಅಂತೀವಿ. ಇಲ್ಲ ನಾವು ಸಾಯುವವರೆ, ಹೋರಾಟ ನಡೆಸಿಯೇ ನಡೆಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹಠ ಹಿಡಿದರೆ ನಾವೇನು ಮಾಡಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದ್ದಾರೆ. 

ಇಬ್ಬರೇ ಪಾದಯಾತ್ರೆ(Padayatra) ಹೋಗುತ್ತೇವೆ ಎನ್ನುತ್ತೀರಾ. ನೀವಿಬ್ಬರೇ ಹೋಗುತ್ತೇವೆ ಅಂದರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಹತ್ತಿರದಲ್ಲೇ ತಾಪಂ, ಜಿಪಂ, ವಿಧಾನಸಭೆ ಚುನಾವಣೆ(Assembly Election)ಇದೆ. ಎದುರಿಗೆ ಶೋ ಮಾಡಬೇಕು ಅಂತಾ ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನೂ ಏಕೆ ಸಾಯಿಸುತ್ತೀರಾ? ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda), ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ(BS Yediyurappa), ಸಿದ್ದರಾಮಯ್ಯ ಇವರೆಲ್ಲರೂ ರಾಜ್ಯದ ಆಸ್ತಿ. ರಾಜ್ಯದ ಆಸ್ತಿ ಕಳೆದುಕೊಳ್ಳುವುದಕ್ಕೆ ಇಚ್ಛೆಪಡುವುದಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ಹೋರಾಟ ಬೇಡ ಎಂದರು.

Mekedatu Padayatre: ಇಂದಿನಿಂದ ಕಾಂಗ್ರೆಸ್‌ನ ಪಾದಯಾತ್ರೆ ಸಂಘರ್ಷ!

ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ. ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷ ಇಲ್ಲ. ರಾಜ್ಯದಲ್ಲೂ ನಾಳೆ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿದರೆ ನಿಯಮ ಅಡ್ಡಿಯಾಗುತ್ತಾ?: ಸುಧಾಕರ್‌

ವಿಶ್ವದಲ್ಲೇ ಯಾವ ವಿರೋಧ ಪಕ್ಷ (Opposition Party) ಕೂಡ ಕೊರೋನಾ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ. ಆದರೆ, ರಾಜ್ಯ ಕಾಂಗ್ರೆಸ್‌ (Congress) ಪಕ್ಷ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕುದುರೆ ರೇಸ್‌ ಆದರೂ ಮಾಡಲಿ, ಮ್ಯಾರಥಾನ್‌ ಆದರೂ ಮಾಡಲಿ. ರೈಲು, ಬಸ್‌ನಲ್ಲಿ ಹೋಗಲಿ ಅಥವಾ ಟ್ರಕ್ಕಿಂಗ್‌ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಮಯ ನೋಡಿ ಮಾಡಲಿ ಎಂದು ವ್ಯಂಗವಾಡಿದರು.

Mekedatu Project: ತಪ್ಪನ್ನು ಮರೆ​ಮಾ​ಚಲು ಸರ್ಕಾ​ರ​ದಿಂದ ಪಾದ​ಯಾತ್ರೆ ಹತ್ತಿ​ಕ್ಕುವ ಯತ್ನ: ಸಿದ್ದು

ನನ್ನ ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿಕೊಂಡರೆ ಮಾರ್ಗಸೂಚಿ ಅಡ್ಡಿ ಆಗುತ್ತಾ? ಡಿಕೆಶಿ ಅವರ ಅಜ್ಞಾನಕ್ಕೆ ಮರುಕ ವ್ಯಕ್ತಪಡಿಸುತ್ತೇನೆ ಎಂದರು. ಮೊದಲ ಹಾಗೂ ಎರಡನೇ ಅಲೆಯ ಸಂರ್ಭದಲ್ಲಿ ನಾನು ಈ ತನಕ 50ರಿಂದ 60 ಬಾರಿ ಕೊರೋನಾ ಮಾಡಿಸಿದ್ದೀನಿ. ರಾಜ್ಯದ ಜನರ ಆಶೀರ್ವಾದದಿಂದ ಸೋಂಕಿನಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದರು.

ಮೇಕೆದಾಟು ಪಾದಯಾತ್ರೆಗೆ ವಿರೋಧ ಮಾಡುತ್ತಿಲ್ಲ

ನಾವು ಮೇಕೆದಾಟು ಪಾದಯಾತ್ರೆಗೆ (Mekedatu Padayatre) ವಿರೋಧ ಮಾಡುತ್ತಿಲ್ಲ. ಸೋಂಕು ಇಳಿಕೆಯಾಗುವವರೆಗೂ ಮುಂದೂಡುವಂತೆ ತಿಳಿಸಿದ್ದೇವೆ. ವಿಶ್ವದೆಲ್ಲೆಡೆ ಕೊರೋನಾ ವಿಚಾರವಾಗಿ ಆಡಳಿತ ಪಕ್ಷಗಳಿಗೆ ವಿರೋಧ ಪಕ್ಷಗಳು ಸಹಕಾರ ನೀಡುತ್ತಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಸರ್ಕಾರದ ಕಾನೂನು ನಿಯಮ ಪಾಲನೆ ಮಾಡದೇ ಇರೋದು ದುರಾದೃಷ್ಟ. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತಾ ಕರೆಯುವುದಕ್ಕೆ ಆಗುತ್ತದೆಯೇ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಹೇಗೆ ಅನಿಸುತ್ತದೆ? ಇದರ ಕನಿಷ್ಠ ತಿಳುವಳಿಕೆ ಅವರಿಗೆ ಇರಬೇಕಿತ್ತು ಎಂದು ಛೇಡಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ