* ಡಿ.ಕೆ.ಶಿವಕುಮಾರ್‌ಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ
* ನಾವು ದೇವಸ್ಥಾನಗಳನ್ನು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ
* ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ
ಉಡುಪಿ(ಡಿ.31): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ(DK Shivakumar) ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ. ನಾವು ದೇವಸ್ಥಾನಗಳನ್ನು(Temples) ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ. ಡಿಕೆಶಿ ಅವರ ಅಭಿಪ್ರಾಯ ಹಿಂದೂ ದೇವಸ್ಥಾನಗಳ ವಿರುದ್ಧ ಮತ್ತು ಹಿಂದೂ ಭಕ್ತರ ವಿರುದ್ಧ ಇರೋದು ಇದರಿಂದ ಸ್ಪಷ್ಟವಾಗಿದೆ ಅಂತ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ(Kota Shrinivas Poojari) ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ(BJP), ಆರ್‌ಎಸ್‌ಎಸ್(RSS) ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನ ಹಸ್ತಾಂತರಿಸುವುದು ಬಿಜೆಪಿ ಸರ್ಕಾರದ(BJP Government) ಅಜೆಂಡಾ ಎಂಬ ಡಿಕೆಶಿ ಆರೋಪಕ್ಕೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಹಿಂದೂ ದೇವಾಲಯಗಳನ್ನ(Hindu Temples) ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ(Devotees) ಕೈಗೆ ನೀಡಬೇಕು ಎಂಬುದು ನಮ್ಮ ಚಿಂತನೆಯಾಗಿದೆ. ಭಕ್ತರು ಅಂದ್ರೆ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಆಗಿರಬಹುದು. ಡಿಕೆಶಿ ಶಿವಕುಮಾರ್ ಕೂಡ ಆಗಿರಬಹುದು. ಭಕ್ತರು ಅಂದ್ರೆ ಎಲ್ಲರೂ ಬರ್ತಾರೆ. ನಾವು ಭಕ್ತರಿಗೆ ಕೊಡಬೇಕು ಅಂತ ಆಲೋಚಿಸಿದ್ದೇವೆ. ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ ಅಂತ ಹೇಳಿದ್ದಾರೆ.
undefined
Free Hindu Temples: ಆರೆಸ್ಸೆಸ್ ಕೈಗೆ ನೀಡಲು ಸರ್ಕಾರದ ಹುನ್ನಾರ, ನಾವು ಸುಮ್ಮನಿರಲ್ಲ: ಡಿಕೆಶಿ
ಉಡುಪಿ(Udupi) ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರು(Police) ವಿನಾಕಾರಣ ಹಲ್ಲೆ(Assault) ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಪಿಎಸ್‌ಐ ಅಮಾತು ಮಾಡಲಾಗಿದ್ದು, ಆರು ಪೇದೆಗಳನ್ನ ವರ್ಗಾವಣೆ ಮಾಡಲಾಗಿದೆ. ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ, ಈ ಸಂಬಂಧ ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೆನು. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಒಬ್ಬ ಕಾನ್ಸ್‌ಟೇಬಲ್ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು, ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರನ್ನ ಭೇಟಿ ಮಾಡಿದ್ದೆ, ಅಲ್ಲಿರುವ ಪರಿಸ್ಥಿತಿಯನ್ನು ಗೃಹ ಸಚಿವರಿಗೆ ವಿವರಿಸಿದ್ದೆನು. ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಸ್‌ಪಿ ಅವರಿಗೆ ಕರೆ ಮಾಡಿ ಪ್ರಕರಣದ ವಿಚಾರ ಕಾನೂನು ಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹ ಸಚಿವರು ಸೂಚಿಸಿದ್ದಾರೆ ಅಂತ ತಿಳಿಸಿದ್ದಾರೆ.
ಕೊರಗರ, ಗಿರಿ ಜನರ, ದಲಿತ ಬಂಧುಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ. ನಾನು, ಗೃಹ ಸಚಿವರು, ಸರ್ಕಾರ ನಿಮ್ಮ ಜತೆ ಇದೆ. ಏನಾದರೂ ಇದ್ರೆ ಸಿಎಂ ಅವರಿಗೆ ಪ್ರಕರಣದ ಬಗ್ಗೆ ವಿವರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ದಾಳಿಗೊಳಗಾದ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಭಾಗಿ
ಕುಂದಾಪುರ: ಪೊಲೀಸ್ ದಾಳಿಗೊಳಗಾದ ಕೊರಗ ಕುಟುಂಬದ(Koraga Family) ಮದುವೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿ ಧೈರ್ಯ ತುಂಬಿದರು.
ಕುಮಟಾ(Kumta) ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಚಿವರು ಬರುತ್ತಲೇ ನೂರಾರು ಆದಿವಾಸಿ ಕೊರಗ ಜನಾಂಗದವರು ಡೊಳ್ಳು ಮತ್ತು ಚಂಡೆಗಳ ಮೂಲಕ ಸಚಿವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ಸ್ವಾಗತ ನೀಡಿದರು. ಸಚಿವರ ಜೊತೆ ಕುಮಟಾದ ಹಿರಿಯ ಬಿಜೆಪಿ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಚಿವ ಕೋಟ, ಕೊರಗ ಜನಾಂಗದ ಕುಟುಂಬಗಳನ್ನು ನಾನು ಹತ್ತಿರದಿಂದ ಕಂಡಿದ್ದು, ಅವರೆಲ್ಲರ ಆತ್ಮೀಯತೆಯನ್ನು ಗಳಿಸಿದ್ದೇನೆ. ನನ್ನೂರ ಭಾಗದಲ್ಲಿ ಇರುವಂತಹ ಏಕೈಕ ಕೊರಗರ ಕೇರಿ ಇದಾಗಿದ್ದು, ಈ ಮುಗ್ಧ ಜನರ ಮೇಲೆ ಹಲ್ಲೆ ನಡೆದದ್ದು ನೋವಿನ ಸಂಗತಿ. ವಿವಾಹದ ಕಾರ್ಯಕ್ರಮವೆಲ್ಲ ಮುಗಿದ ನಂತರ ತಡರಾತ್ರಿ ಆದರೂ ಸಂತ್ರಸ್ತ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದೇನೆ ಎಂದು ಹೇಳಿದರು.
ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿವಾದಗಳು ನಡೆದು ದೌರ್ಜನ್ಯವೆಸಗಿದ ಪೊಲೀಸ್ ಠಾಣೆಯ ಪಿಎಸ್‌ಐ ಅವರ ಅಮಾನತು ಸೇರಿದಂತೆ 5ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಮಾಡಿದ್ದು, ಮೇಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ನೆಹರು ಒಪ್ಪಿದ್ದ ಆರ್‌ಎಸ್‌ಎಸ್‌ನ್ನು ಕಾಂಗ್ರೆಸ್ಸಿಗರೂ ಒಪ್ಪಿಕೊಳ್ಳಲಿ: ಸಚಿವ ಪೂಜಾರಿ
ಪಿಎಸ್‌ಐ ಅಮಾನತು
ಸೋಮವಾರ ರಾತ್ರಿ ಕೋಟತಟ್ಟು ಕೊರಗ ಕಾಲನಿಯ ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಕೊರಗ ಸಮುದಾಯದವರ ಮೇಲೆ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್‌ಐ ಸಂತೋಷ್ ಬಿ.ಪಿ. ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್‌ಐ ಅವರನ್ನು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಅಮಾನತು ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿನ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಕೋಟ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದರು.