Look Back Gadag: ಚುನಾವಣೆಯಲ್ಲೇ ಕಳೆದು ಹೋದ 2021..!

By Kannadaprabha NewsFirst Published Dec 31, 2021, 11:07 AM IST
Highlights

*  ಗದಗ ಜಿಲ್ಲೆಯ ಅಭಿವೃದ್ಧಿಯಲ್ಲಿ ತೀವ್ರ ಹಿನ್ನಡೆ
*  ಚುನಾವಣೆ, ಕೋವಿಡ್‌ ನೆಪದಲ್ಲಿ ಕೆಲಸ ಮಾಡದ ಅಧಿಕಾರಿಗಳು
*  ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಮತ್ತೊಂದು ಮೈಲುಗಲ್ಲು 
 

ಶಿವಕುಮಾರ ಕುಷ್ಟಗಿ

ಗದಗ(ಡಿ.31): 2021 ಗದಗ(Gadag) ಜಿಲ್ಲೆಯ ಪಾಲಿಗೆ ಅಭಿವೃದ್ಧಿ ವಿಷಯದಲ್ಲಿ ತೀವ್ರ ಹಿನ್ನಡೆಗೆ ಕಾರಣವಾದ ವರ್ಷವಾಗಿ ದಾಖಲಾಯಿತು. ವರ್ಷಪೂರ್ತಿ ಚುನಾವಣೆಯಲ್ಲಿಯೇ(Election) ಕಳೆದ ಅಧಿಕಾರಿಗಳು, ಪ್ರಚಾರದಲ್ಲಿ ಮಗ್ನರಾಗಿ ಅಭಿವೃದ್ಧಿಯನ್ನೇ ಕಡೆಗಣಿಸಿದ ರಾಜಕೀಯ ನಾಯಕರ ಉತ್ತರದಾಯಿತ್ವವಿಲ್ಲದ ವರ್ತನೆಯಿಂದಾಗಿ ಜಿಲ್ಲೆಗೆ ದೊಡ್ಡ ಹಿನ್ನಡೆಯಾಯಿತು.

3 ಚುನಾವಣೆಗಳು:

2020ರ ಅಂತ್ಯದಲ್ಲಿ ಡಿಸೆಂಬರ್‌ನಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆದಿದ್ದು, ನೂತನ ಗ್ರಾಪಂ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದು 2021ರ ಜನವರಿಯಲ್ಲಿ. ನಂತರ ಉಂಟಾದ ಕೋವಿಡ್‌(Covid19) 2ನೇ ಅಲೆಯಿಂದಾಗಿ ಎಲ್ಲವೂ ಸ್ತಬ್ಧವಾಗಿತ್ತು. ಪಕ್ಕದ ಹಾವೇರಿ(Haveri) ಜಿಲ್ಲೆಯ ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ದಿ. ಸಿ.ಎಂ. ಉದಾಸಿ(CM Udasi) ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ರಾಜಕೀಯ ನಾಯಕರು ಬ್ಯುಜಿಯಾಗಿದ್ದರು. ನವೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ(Vidhan Parishat Election) ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮತ್ತೆ 1 ತಿಂಗಳು ಬ್ಯುಸಿಯಾಗಿದ್ದರು. ಇದಾದ ಕೆಲವೇ ಕೆಲವು ದಿನಗಳಲ್ಲಿ ಬಂದ ಗದಗ- ಬೆಟಗೇರಿ ನಗರಸಭೆ ಚುನಾವಣೆ(Local Body Election) ವರ್ಷಾಂತ್ಯಕ್ಕೆ ಕೊನೆಗೊಂಡಿದ್ದು, ಪ್ರಸಕ್ತ ಸಾಲು ಪೂರ್ಣ ಚುನಾವಣೆಗಳಲ್ಲಿಯೇ ಕಳೆದು ಹೋಗಿದೆ.

Local Body Election Result: : ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿಯಾದ ಉಷಾ..!

ಅಧಿಕಾರಿಗಳ ನಿರ್ಲಕ್ಷ್ಯ:

ಗದಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿರುವ ಅಧಿಕಾರಿಗಳು, ಹಲವಾರು ವರ್ಷಗಳಿಂದ ಇಲ್ಲಿಯೇ ಬೀಡು ಬಿಟ್ಟಿರುವ ಅಧಿಕಾರಿಗಳು ವರ್ಷದ ಪ್ರಾರಂಭದಲ್ಲಿ ಕೋವಿಡ್‌ ನೆಪದಿಂದ, ನಂತರ ಬಂದ ಸತತ ಚುನಾವಣೆಗಳ ನಪನ್ನಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡದೇ ಕೇವಲ ಕಾಲಹರಣ ಮಾಡಿದ ಹಿನ್ನೆಲೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಲೇ ಇಲ್ಲ. ಅದರಲ್ಲಿಯೂ ಗದಗ​- ಬೆಟಗೇರಿ ನಗರಸಭೆಯಲ್ಲಂತೂ ಯಾವೊಬ್ಬ ಅಧಿಕಾರಿಯೂ ಇರಲಿಲ್ಲ. ಚುನಾಯಿತ ಆಡಳಿತ ಮಂಡಳಿಯೂ ಇರಲಿಲ್ಲ. ಒಂದು ರೀತಿಯಲ್ಲಿ ನಗರಸಭೆ ವಾರಸುದಾರಿಲ್ಲದ ಮನೆಯಂತಾಗಿತ್ತು.

ಖಾತೆ ಬದಲಾವಣೆ

ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದರು. ಆದರೆ ನಂತರ ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲಿ ಇವರಿಗೆ ಲೋಕೋಪಯೋಗಿ ಖಾತೆಯನ್ನು ನೀಡಿದ್ದು, ಗದಗ ಜಿಲ್ಲೆಯ ಇತಿಹಾಸದಲ್ಲಿಯೇ ಲೋಕೋಪಯೋಗಿ ಇಲಾಖೆಯನ್ನು ಪಡೆದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಸಚಿವ ಸಿ.ಸಿ. ಪಾಟೀಲ ಪಾತ್ರರಾದರು.

Belagavi Riot: ಗಲಭೆ ಮಾಡಿದವರು ಕಾಂಗ್ರೆಸ್ ಚೇಲಾಗಳು: ಸಚಿವ ರಾಮುಲು

ಎಚ್ಕೆ ಮಹಾರಾಷ್ಟ್ರ ಉಸ್ತುವಾರಿ

ಗದಗ ಶಾಸಕ ಹಿರಿಯ ಕಾಂಗ್ರೆಸ್‌ ನಾಯಕ, ಎಐಸಿಸಿ ಕಾಯಂ ಸದಸ್ಯರಾದ ಎಚ್‌.ಕೆ. ಪಾಟೀಲ(HK Patil) ಕಾಂಗ್ರೆಸ್‌(Congress) ಮತ್ತು ಶಿವಸೇನೆಯ(Shiv Sena) ಸರ್ಕಾರವಿರುವ ಮಹಾರಾಷ್ಟ್ರದ ಉಸ್ತುವಾರಿಯನ್ನಾಗಿ ನೇಮಿಸಿತು. ಕಾಂಗ್ರೆಸ್‌ನಲ್ಲಿ ಇಷ್ಟೊಂದು ಸ್ಥಾನಮಾನವನ್ನು ಪಡೆದ ಉತ್ತರ ಕರ್ನಾಟಕದ(North Karnataka) ಪ್ರಮುಖ ನಾಯಕರಾಗಿದ್ದು, ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಇದೊಂದು ಮೈಲುಗಲ್ಲಾದ ಸಂಗತಿ.

ಒಗ್ಗಟ್ಟಿನಿಂದ ನಗರಸಭೆ ಗೆದ್ದುಕೊಂಡ ಬಿಜೆಪಿ: ಕಾಂಗ್ರೆಸ್‌ಗೆ ನಿರ್ಲಕ್ಷ್ಯಕ್ಕೆ ಪಾಠ

‘ಜೋರ್‌ ಸೆ ಜಟ್ಕಾ.. ಧೀರೇಸೆ ಲಗಿ’ ಈ ಹಿಂದಿ ಗಾದೆ ಮಾತು ಗದಗ- ಬೆಟಗೇರಿ ನಗರಸಭೆ(Gadag-Betageri City Municipal Council) ಫಲಿತಾಂಶ ಗಮನಿಸಿದಾಗ ಕಾಂಗ್ರೆಸ್‌ಗೆ(Congress) ಹೊಂದುತ್ತಿದೆ. ಆ ಪಕ್ಷದ ನಾಯಕರ ನಿರ್ಲಕ್ಷ್ಯದ ವರ್ತನೆಯಿಂದ ಕಾಂಗ್ರೆಸ್‌ ನಗರಸಭೆ ಅಧಿಕಾರದಿಂದ ದೂರ ಉಳಿಯುವಂತಾಯಿತು. ಬಿಜೆಪಿಯ(BJP) ‘ಮನೆಯೊಂದು ಮೂರು ಬಾಗಿಲು’ ಇದ್ದರೂ ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಹಿನ್ನೆಲೆ ಸ್ಪಷ್ಟ ಬಹುತಮದೊಂದಿಗೆ ನಗರಸಭೆ ಗದ್ದುಗೆ ಏರಿದೆ.
 

click me!