Local Body Election: ಬಿಜೆಪಿ ಸೋಲಿಗೆ ನಾನೇ ಕಾರಣ: ಶಾಸಕ ರಾಜೂಗೌಡ

By Kannadaprabha NewsFirst Published Dec 31, 2021, 10:25 AM IST
Highlights

*   ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ ಫಲಿತಾಂಶ
*   ಕಕ್ಕೇರಾ ಜನರ ವಿಶ್ವಾಸಕ್ಕೆ ಅಭಾರಿ: ರಾಜಾ ವೆಂಕಟಪ್ಪ ನಾಯಕ
*   ಕಾರ್ಯಕರ್ತರ ಕೇಕೆ, ಶಿಳ್ಳೆ, ಹರ್ಷೋದ್ಗಾರ, ಗುಲಾಲು ಎರಚಿ ಬೆಂಬಲಿಗರ ಸಂಭ್ರಮ
 

ಸುರಪುರ(ಡಿ.31): ತಾಲೂಕಿನ ಕೆಂಭಾವಿ(Kembhavi) ಹಾಗೂ ಕಕ್ಕೇರಾ(Kekkera) ಪುರಸಭೆಗಳ 23 ಸ್ಥಾನಗಳಿಗಾಗಿ ಡಿ.27ರಂದು ನಡೆದ ಚುನಾವಣೆಯ(Election) ಮತ ಎಣಿಕೆ ಕಾರ್ಯ ಗುರುವಾರ ನಡೆದು, ಫಲಿತಾಂಶ(Result) ಪ್ರಕಟಗೊಂಡಿದೆ.

ಕಕ್ಕೇರಾ ಪುರಸಭೆ ಕಾಂಗ್ರೆಸ್‌ಗೆ(Congress) ಒಲಿದರೆ, ಕೆಂಭಾವಿ ಬಿಜೆಪಿ(BJP) ಮಡಿಲಿಗೆ ಬಿದ್ದಿದೆ. ಈ ಎರಡೂ ಕ್ಷೇತ್ರಗಳು ಭಾರಿ ಜಿದ್ದಾಜಿದ್ದು ಕಂಡಿದ್ದವು. ಹಾಲಿ ಶಾಸಕ ರಾಜೂಗೌಡ(Rajugouda) ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ(Raja Venkatappa Naik) ನಡುವಿನ ಪ್ರತಿಷ್ಠೆಯ ಪ್ರಶ್ನೆ ಇದಾಗಿತ್ತು. ಸುರಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಕಕ್ಕೇರಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿರುವುದು ಶಾಸಕ ರಾಜೂಗೌಡರಿಗೆ ಮಜುಗರ ಮೂಡಿಸಿದ್ದರೆ, ಶಹಾಪುರ ಮತಕ್ಷೇತ್ರ ವ್ಯಾಪ್ತಿಯ ಕೆಂಭಾವಿಯಲ್ಲಿ ಬಿಜೆಪಿ ಗದ್ದುಗೆ ಹಿಡಿಯುವ ಮೂಲಕ, ಹಾಲಿ ಶಾಸಕ, ಕಾಂಗ್ರೆಸ್‌ನ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಹಿಂದೇಟು ಎನ್ನಲಾಗಿದೆ.

Birthday Politics: ಬರ್ತ್ ಡೇ ಹೆಸರಿನಲ್ಲಿ ಸುರಪುರ ನಾಯಕರ ಬಲ ಪ್ರದರ್ಶನ

ಫಲಿತಾಂಶ ಪ್ರಕಟಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುರಪುರ ಶಾಸಕ ನರಸಿಂಹ ನಾಯಕ್(ರಾಜೂಗೌಡ), ಇದು ನನ್ನ ನಾಯಕತ್ವದಲ್ಲಿ ನಡೆದ ಚುನಾವಣೆ, ಸೋಲಿಗೆ ನಾನೇ ಕಾರಣ. ಹೀಗಾಗಿ ಈ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೀನಿ ಎಂದಿದ್ದಾರೆ. ಇದು ನನಗೆ ಎಚ್ಚರಿಕೆ ಗಂಟೆ, ಜನರು ನನ್ನ ಮೇಲೆ ಸಿಟ್ಟಾಗಿದ್ದಾರೆ. ಇದನ್ನು ಅರಿತು ಇನ್ಮುಂದೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀನಿ ಎಂದ ಅವರು, ನಾನು ಸೋಲಿಗೆ ಯಾವುದೇ ಕಾರಣ ಹೇಳಲ್ಲ. ಜನಾದೇಶ ಒಪ್ಪುತ್ತೇನೆ, ಸೋಲು ಸೋಲೇ. ಮುಂದೆ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇನೆ. ಎಷ್ಟು ಕೆಲಸ ಮಾಡಿದರೂ ಜನರು ನಮ್ಮ ಬಗ್ಗೆ ಒಲವು ಹೊಂದಿಲ್ಲ, ಒಂದಲ್ಲಾ ಒಂದು ಕಾರಣಕ್ಕಾಗಿ ಸಿಟ್ಟಾಗಿದ್ದಾರೆ. ಜನರ ಅಸಮಾಧಾನಕ್ಕೆ ಕಾರಣ ಹುಡುಕಲು ಯತ್ನಿಸುವೆ ಬಳಿಕ ಅವರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದರು.

ಇತ್ತ, ಕಕ್ಕೇರಾದಲ್ಲಿ ಕಾಂಗ್ರೆಸ್ಜಯಭೇರಿ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್, ಸುರಪುರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕಕ್ಕೇರಾ ಪುರಸಭೆಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಅಭ್ಯರ್ಥಿಗಳ ಮೇಲೆ ಭರವಸೆಯನ್ನಿಟ್ಟು ತಮ್ಮ ಅಮೂಲ್ಯ ಮತಗಳನ್ನು ನೀಡಿದ್ದಾರೆ. ಕಾಂಗ್ರೆಸ್ಪಕ್ಷಕ್ಕೆ ಬೆಂಬಲಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ಅಭ್ಯರ್ಥಿಗಳ ಜಯಕ್ಕೆ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಭ್ಯರ್ಥಿಗಳ ಗೆಲುವಿಗೆ ಕಾರಣೀಭೂತರಾಗಿದ್ದೀರಿ. ಚುನಾವಣೆಗಳಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಸೋತವರು ಕುಗ್ಗದೆ ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸಿ ಮುಂಬರುವ ಚುನಾವಣೆಗಳಲ್ಲಿ ಅ​ಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಭ್ಯರ್ಥಿಗಳ, ಬೆಂಬಲಿಗರ ವಿಜಯೋತ್ಸವ

ಸುರಪುರ(Shorapur) ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಗುರುವಾರ ನಡೆದ ಕಕ್ಕೇರಾ ಮತ್ತು ಕೆಂಭಾವಿ ಪುರಸಭೆಯ ಮತ ಎಣಿಕೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಗೆಲುವು ಪಡೆದ ಅಭ್ಯರ್ಥಿಗಳ ಬೆಂಬಲಿಗರು ಮುಗಿಲು ಮುಟ್ಟುವ ಹಾಗೆ ಕೇಕೆ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸುತ್ತಿದ್ದರು.

BJP Government: ಶಾಸಕರೇ 8-10 ಪರ್ಸೆಂಟ್‌ ಮುಂಗಡ ನೀಡಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ: ಕಂದಕೂರ

ಆಯಾ ಪಕ್ಷದ ಏಜೆಂಟರ್‌ಗಳು ಬಂದು ಗೆಲುವಿನ ಸುದ್ದಿ ತಲುಪಿಸುತ್ತಿದ್ದಂತೆ ಪರಸ್ಪರ ಆಲಂಗಿಸಿ ಶಿಳ್ಳೆ, ಕೇಕೆ ಹಾಕುತ್ತಿದ್ದರು. ಗೆದ್ದ ಪಕ್ಷಗಳ ಕಾರ್ಯಕರ್ತರು(Activists), ಬೆಂಬಲಿಗರು ತಮ್ಮ ಪಕ್ಷದ ಬಾವುಟಗಳನ್ನು ಗಾಳಿಯಲ್ಲಿ ತೇಲಿಸುತ್ತಿದ್ದರು. ಸೋತವರು ಸೊಪ್ಪೆ ಮುಖಮಾಡಿಕೊಂಡು ಹೋಗುತ್ತಿದ್ದವರ ಗೆದ್ದವರ ಸಂಭ್ರಮ ಅತಿರೇಖಕ್ಕೆ ಹೋಗುತ್ತಿತ್ತು.

ಗೆಲ್ಲುತ್ತಿದ್ದಂತೆ ವಾರ್ಡ್‌ಗಳ ಗೆದ್ದವೀರರು, ತಮ್ಮ ತಮ್ಮ ಶಾಸಕರ ಮನೆಯತ್ತ ಬೆಂಬಲಿಗರೊಂದಿಗೆ ಹೊರಟರು. ಈ ಸಂದರ್ಭದಲ್ಲಿ ಗೆದ್ದಂತರ ವಿಜೇತರನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಮೆರವಣಿಗೆಯಲ್ಲಿ ಹೊರಟರು. ಕಕ್ಕೇರಾ ಪುರಸಭೆಯಲ್ಲಿ ಬಹುಪಾಲು ವಾರ್ಡ್‌ಗಳಲ್ಲಿ ವಿಜಯ ಸಾಧಿಸಿದ್ದರಿಂದ ದೊಡ್ಡಮಟ್ಟದಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಹೋಗಿ ಮಾಜಿ ಶಾಸಕ ವೆಂಕಟಪ್ಪ ನಾಯಕ ಅವರಿಗೆ ಅಭಿನಂದಿಸಿದರು. ಬಳಿಕ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
 

click me!