ಈ ಬಾರಿ ಅದ್ದೂರಿಯಾಗಿ ನಡೆಯುತ್ತಾ ಮಹಿಷಾ ದಸರಾ?: ಸುಳಿವು ನೀಡಿದ ಸಚಿವ ಮಹದೇವಪ್ಪ

By Govindaraj S  |  First Published Jul 10, 2023, 8:49 AM IST

ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಬದ್ಧವಾದ ಹಕ್ಕು. ಯಾರು ಯಾವ ಆಚರಣೆ ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು. ಯಾವುದನ್ನು ಮಾಡಬಾರದು ಎಂದು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಮಹಿಷ ದಸರಾಕ್ಕೆ ಅವಕಾಶ ನೀಡುವುದಾಗಿ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಳಿವು ನೀಡಿದ್ದಾರೆ. 


ಮೈಸೂರು (ಜು.10): ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನ ಬದ್ಧವಾದ ಹಕ್ಕು. ಯಾರು ಯಾವ ಆಚರಣೆ ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು. ಯಾವುದನ್ನು ಮಾಡಬಾರದು ಎಂದು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಮಹಿಷ ದಸರಾಕ್ಕೆ ಅವಕಾಶ ನೀಡುವುದಾಗಿ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಳಿವು ನೀಡಿದ್ದಾರೆ. 

ಹೌದು! ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಷಾ ದಸರಾ ಆಚರಣೆ ಮಂಕಾಗಿದ್ದು, ಚಾಮುಂಡಿ ತಾಯಿಯನ್ನ ನಿಂದಿಸುತ್ತಾರೆ ಎಂಬ ಕಾರಣಕ್ಕೆ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಬ್ರೇಕ್ ಹಾಕಿತ್ತು. ಈ ಹಿಂದೆ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ನಡೆಯದಂತೆ  ಸಂಸದ ಪ್ರತಾಪ ಸಿಂಹ ನೋಡಿಕೊಂಡಿದ್ದರು. ಒಂದೊಮ್ಮೆ ಚಾಮುಂಡಿ ಬೆಟ್ಟದಲ್ಲಿ ಆಚರಣೆಗೆ ಅನುಮತಿ ನೀಡಿದ್ರೆ ಸಂಸದ ಪ್ರತಾಪ ಸಿಂಹ ಹಾಗೂ ಮಹಿಷಾ ದಸರಾ ಆಚರಣೆ ಸಮಿತಿ ನಡುವೆ ಜಟಾಪಟಿ ಗ್ಯಾರೆಂಟಿಯಾಗಿದ್ದು, ಸದ್ಯ ಮೈಸೂರು ಜಿಲ್ಲಾಡಳಿತದ ನಡೆ ಕೂತುಹಲ ಕೆರೆಳಿಸಿದೆ.

Tap to resize

Latest Videos

ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಬಿಜೆಪಿ ಹೋರಾಟ: ಬೊಮ್ಮಾಯಿ ಘೋಷಣೆ

ತಲಕಾಡು ಸಮಗ್ರ ಅಭಿವೃದ್ಧಿಗಾಗಿ ಶೀಘ್ರದಲ್ಲೇ ಸಭೆ: ತಲಕಾಡು ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಉನ್ನತ ಅಧಿಕಾರಿಗಳ ಜೊತೆ ತಲಕಾಡು ಕೇಂದ್ರ ಸ್ಥಾನದಲ್ಲಿ ಶೀಘ್ರದಲ್ಲೇ ಸಭೆ ನಡೆಸುತ್ತೇನೆ ಎಂದು ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ತಾಲೂಕಿನ ತಲಕಾಡು ಗ್ರಾಮದಲ್ಲಿ 65 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಜೀವ್‌ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಲಕಾಡು ಹೋಬಳಿ ಎಸ್‌ಸಿ, ಎಸ್‌ಟಿ ಸೇರಿದಂತೆ ಹಿಂದುಳಿದ ವರ್ಗದ ಬಡವರ್ಗದ ಜನರೆ ಹೆಚ್ಚಿರುವುದರಿಂದ ತಲಕಾಡು ಹೋಬಳಿಯನ್ನ ಹೆಚ್ಚಿನ ಅಭಿವೃದ್ಧಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಅದಕ್ಕಾಗಿ ವಿಧಾನಸಭಾ ಕಲಾಪ ಮುಗಿದ ತಕ್ಷಣ ಅಧಿಕಾರಿಗಳ ಸಭೆ ನೆಡಸುತ್ತೇನೆ ಎಂದರು.

ಚೋಳರು, ಹೊಯ್ಸಳರು ಗಂಗರಸರು ಆಳಿದ ತಲಕಾಡು ಐತಿಹಾಸಿಕ ಪುಣ್ಯ ಪ್ರಸಿದ್ದ ಸ್ಥಳವಾಗಿದೆ. ಐದು ವರ್ಷಗಳಿಗೊಮ್ಮೆ ಜರುಗುವ ಪಂಚಲಿಂಗ ದರ್ಶನ ಧಾರ್ಮಿಕ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಹೊಯ್ಸಳ ರಾಜರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿರುವ ದೇವಾಲಯಗಳು, ತಲಕಾಡಿನ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರು ದಿನ ನಿತ್ಯ ಬರುವುದರಿಂದ ತಲಕಾಡನ್ನು ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಮಾಡಲು ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು

ತಲಕಾಡು ಹಿಂದೆ ತಾಲೂಕು ಕೇಂದ್ರ ಸ್ಥಾನವಾಗಿತ್ತು. ನಂತರ ಪುರಸಭೆಯಾಗಿತ್ತು. ತದ ನಂತರ ಹಿಂಬಡ್ತಿಯಾಗಿ ಗ್ರಾಮ ಪಂಚಾಯತಿಯಾಗಿದೆ. ಮುಂದೆ ಇಲ್ಲಿನ ಜನರು ಹಾಗೂ ರಾಜಕೀಯ ಮುಖಂಡರ ಆಶಯದಂತೆ ಸಾಧಕ ಬಾದಕಗಳನ್ನು ಪರಿಶೀಲಿಸಿ ತಲಕಾಡನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆ ಗೇರಿಸಲು ಕ್ರಮ ವಹಿಸುತ್ತೇನೆ ಎಂದರು.

ಶಿವಮೊಗ್ಗದಲ್ಲಿ ವಿಶ್ವದ ಎತ್ತರದ ಸುಬ್ರಹ್ಮಣ್ಯ ಮೂರ್ತಿ ಸ್ಥಾಪನೆ: 151 ಅಡಿ ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ

ತಲಕಾಡು ಹಳೆ ಬಿದಿ ರಸ್ತೆ ಅಭಿವೃದ್ಧಿಗಾಗಿ ಮನೆ ಸೇರಿದಂತೆ ಜಾಗ ಕಳೆದುಕೊಂಡಿರುವ 25 ಮನೆಗಳ ಕುಟುಂಬಕ್ಕೆ ಖಾಲಿ ನಿವೇಶನದ ಜೊತೆಗೆ ಪರಿಹಾರ ಕೊಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅತಿ ಶೀಘ್ರದಲ್ಲೇ ರಸ್ತೆ ಕಾಮಗಾರಿ ಮುಗಿಸಿ ಸ್ಥಳೀಯರು ಮತ್ತು ಪ್ರವಾಸಿಗರ ಸಂಚಾರಕ್ಕೆ ಅನುವು ಮಾಡಿಕೂಡಲಾಗುವುದು ಎಂದು ಅವರು ತಿಳಿಸಿದರು.

click me!