ಕೇಂದ್ರ ಸಚಿವ ಭಗವಂತ ಖೂಬಾಗೆ ಟಿಕೆಟ್‌ ಸಿಗಲ್ಲವೆಂಬ ಬಯ: ಈಶ್ವರ ಖಂಡ್ರೆ ವ್ಯಂಗ್ಯ

By Kannadaprabha NewsFirst Published Nov 2, 2023, 11:21 PM IST
Highlights

ಭಾಲ್ಕಿಯಲ್ಲಿ ನಡೆದ ಒತ್ತುವರಿ ತೆರ‍ವು ಕಾರ್ಯಾಚರಣೆ ಕುರಿತು ನನಗೆ ಗೊತ್ತಿಲ್ಲ, ಅಧಿಕಾರಿಗಳಿಂದ ತಪ್ಪಾಗಿದ್ದರೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಬೀದರ್‌(ನ.02): ಕೇಂದ್ರ ಸಚಿವ ಭಗವಂತ ಖೂಬಾಗೆ ಟಿಕೆಟ್‌ ಸಿಗೋಲ್ಲ ಎಂಬ ಹೆದರಿಕೆ ಆರಂಭವಾಗಿದ್ದು, ಈಶ್ವರ ಖಂಡ್ರೆಗೆ ಬೈದರೇ ನನಗೆ ಬಿಜೆಪಿಯವರು ಟಿಕೆಟ್‌ ಕೊಡ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.

ಅವರು ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ರೈಲ್ವೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕೇಂದ್ರ ಯೋಜನೆಗಳ ಬಗ್ಗೆ ಹೇಳದೇ ಕೇವಲ ಈಶ್ವರ ಖಂಡ್ರೆ ಮೇಲೆಯೇ ಆರೋಪಗಳ ಸುರಿಮಳೆಗೈದು ಕಾಲಹರಣ ಮಾಡಿದ್ದಾರೆ ಎಂದರು.

ಬೀದರ್: ಹಾಸ್ಟಲ್ ವಾರ್ಡನ್‌ಗೆ ಜೈಲಿಗೆ ಕಳುಹಿಸುವ ಧಮ್ಕಿ ಹಾಕಿದ ಬಿಜೆಪಿ ಶಾಸಕ..!

ಸಿಪೆಟ್‌ ಕಾಲೇಜು ಆರಂಭ ಸುಳ್ಳು:

ಸಿಪೆಟ್‌ ಕಾಲೇಜು ಬಂತಾ, ಕಾಲೇಜಿಗೆ ಅನುದಾನ ಬಂದಿದೆಯಾ, ಕಟ್ಟಡ ಆಯ್ತಾ, ಕೇಂದ್ರ ಅನುದಾನ ಮಂಜೂರಾತಿ ಮಾಡಿದೆಯಾ ಇರಲಿ ಹುದ್ದೆಗಳನ್ನು ಮಂಜೂರು ಮಾಡಿದೆಯಾ, ಯಾವ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರಾ ತಿಳಿಸಲಿ. ಇದ್ಯಾವುದೂ ಇಲ್ಲದೆ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುವಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಯಶಸ್ವಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ 2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನಾ ಸೋಲಾರ್‌ ಪ್ಲಾಂಟ್‌ ಬಗ್ಗೆ ಈಗ ಮಾತನಾಡುತ್ತಿರುವವರು ಈ ಹಿಂದೆ ಕೊಪ್ಪಳದಲ್ಲಿ ಆಯ್ತು, ಪಾವಗಡದಲ್ಲಿ ಆಯ್ತು. ಇವರಿಗೇನು ಆಗಿತ್ತು ಎಂದು ಪ್ರಶ್ನಿಸಿದರು. ಅಲ್ಲದೇ ಸಿಪೆಟ್‌ ಉದ್ಘಾಟನೆಗೆ ಹಿಂದಿನ ದಿನವಷ್ಟೇ ನನಗೆ ಕರೆ ಮಾಡಿ ಆಹ್ವಾನಿಸಿದರು. ಶಿಷ್ಟಾಚಾರದಂತೆ ಅಧಿಕಾರಿಗಳು ನನಗೆ ತಿಳಿಸಿಲ್ಲ, ಹೀಗಾಗಿ ನನಗೆ ಬರಲು ಆಗಲಿಲ್ಲ. ದಾರಿಯಲ್ಲಿ ಹೋಗುವಾಗ ಕಾಲಿಗೆ ಕಲ್ಲು ತಟ್ಟಿದರೆ ಅದೂ ಈಶ್ವರ ಖಂಡ್ರೆ ಹಾಕಿಸಿದ್ದಾನೆ ಎಂದು ಆರೋಪಿಸುವ ಸಂಪ್ರದಾಯ ಖೂಬಾಗೆ ಬಂದು ಬಿಟ್ಟಿದೆ ಎಂದರು.

ಭಾಲ್ಕಿಯಲ್ಲಿ ನಡೆದ ಒತ್ತುವರಿ ತೆರ‍ವು ಕಾರ್ಯಾಚರಣೆ ಕುರಿತು ನನಗೆ ಗೊತ್ತಿಲ್ಲ, ಅಧಿಕಾರಿಗಳಿಂದ ತಪ್ಪಾಗಿದ್ದರೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

click me!