
ಬೀದರ್(ನ.02): ರಮೇಶ ಜಾರಕಿಹೊಳಿ ಅವರು ಹಗಲುಕನಸು, ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿಯವರೇ ಕಾಂಗ್ರೆಸ್ ಸೇರಲು ಸಾಲಾಗಿ ನಿಂತಿದ್ದಾರೆ ಪರಿಶೀಲನೆ ಮಾಡುತ್ತಿದ್ದಾರೆ, ಒಂದು ವೇಳೆ ಕಮಲಪಾಳಯದವರು ಬಂದಲ್ಲಿ ಇಡೀ ಬಿಜೆಪಿಗೆ ಬಿಜೆಪಿ ಕಿತ್ತುಕೊಂಡು ಬರುತ್ತದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿರುಗೇಟು ನೀಡಿದರು.
ಅವರು ಬುಧವಾರ ಬೀದರ್‌ನಲ್ಲಿ ಈ ಕುರಿತಾದ ಪ್ರಶ್ನೆಗೆ ಉತ್ತರಿಸಿ, ಅವರಲ್ಲಿ ನೈತಿಕತೆ ಇಲ್ಲ. ಹತಾಶ ಮನೋಭಾವದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕ್ಯಾರೆ ಎನ್ನುತ್ತಿಲ್ಲ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಇನ್ನು ಡಿಕೆ ಶಿವಕುಮಾರ ಅವರು ಪಕ್ಷದ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾಗಿದ್ದು ಎಲ್ಲರಿಗೂ ಒಳ್ಳೆಯ ಆಡಳಿತ ನೀಡುವಂತೆ ಸೂಚನೆ ಕೊಡುತ್ತಿದ್ದಾರೆ ಅತ್ಯುತ್ತಮ ಆಡಳಿತದಿಂದ ಜನರು ಕಾಂಗ್ರೆಸ್ ಮೆಚ್ಚಿಕೊಂಡಿದ್ದಾರೆ ಎಂದರು.
ಬೀದರ್: ಹಾಸ್ಟಲ್ ವಾರ್ಡನ್‌ಗೆ ಜೈಲಿಗೆ ಕಳುಹಿಸುವ ಧಮ್ಕಿ ಹಾಕಿದ ಬಿಜೆಪಿ ಶಾಸಕ..!
ಬೀದರ್‌ನಲ್ಲಿ ಜಿಂಕೆ ಧಾಮ:
ಬೀದರ್ ಜಿಲ್ಲೆಯಲ್ಲಿ ಕೃಷ್ಣಮೃಗ ಧಾಮ ನಿರ್ಮಿಸುವ ಕುರಿತಂತೆ ಅಧಿಕಾರಿಗಳು ಮೀಸಲಿಟ್ಟಿರುವ 2ಕೋಟಿ ರು.ಗಳ ಅನುದಾನಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಅದನ್ನು ಎಲ್ಲೆಲ್ಲಿ ಮಾಡಬೇಕು ಎಂಬ ಕುರಿತು ಗುರುತಿಸಿದ್ದಾರೆ ಮಾರ್ಚ್ ಒಳಗಾಗಿ ಅನುಷ್ಠಾನಕ್ಕೆ ತಂದು ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.
ಬೀದರ್‌ನಲ್ಲಿ ರಾಷ್ಟ್ರ, ರಾಜ್ಯಮಟ್ಟದ ಅಧಿಕಾರಿಗಳ ತರಬೇತಿ ಕೇಂದ್ರ:
ಬೀದರ್‌ನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತರಬೇತಿ ಕೇಂದ್ರ ಆರಂಭಿಸಲು 5ಕೋಟಿ ರು.ಗಳ ಅನುದಾನ ಮಂಜೂರಿಸಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಕೇಂದ್ರ ಆರಂಭಿಸಿ ಅರಣ್ಯೀಕರಣ ಹೆಚ್ಚಿಸುವ ಯೋಜನೆ ಇದಾಗಿದೆ, ದೇವದೇವ ವನ ಅಥವಾ ಹೊನ್ನಿಕೇರಿ ಸಮೀಪವೂ ಮಾಡಬಹುದಾಗಿದೆ ಇನ್ನೂ ಸ್ಥಳ ನಿರ್ಧಾರ ಆಗಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.