ಮೋದಿ ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳೋದು ದುರಂತ: ಸಚಿವ ಖಂಡ್ರೆ

Published : Nov 07, 2023, 09:20 AM IST
ಮೋದಿ ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳೋದು ದುರಂತ: ಸಚಿವ ಖಂಡ್ರೆ

ಸಾರಾಂಶ

ಬಿಜೆಪಿ ಪಕ್ಷ ಯಾವತ್ತಿಗೂ ಹಿಂಬಾಗಿಲಿನಿಂದ ರಚನೆಯಾಗಿದೆ. ಆಪರೇಷನ್‌ ಕಮಲದಿಂದ ಎಷ್ಟೊಂದು ಅನಾಹುತ ಆಗಿದೆ. ಎಲ್ಲರಿಗೂ ಗೊತ್ತಿದೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲ ಅರಿತು ಕರ್ನಾಟಕದಲ್ಲಿ ಅವರನ್ನ ಧೂಳಿಪಟ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ: ಸಚಿವ ಈಶ್ವರ ಖಂಡ್ರೆ 

ಬೀದರ್‌(ನ.07):  ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯೇಕ ವಿಚಾರವಾಗಿ ಇನ್ನೊಂದು ಚಿರತೆ ಕಾರ್ಯಪಡೆ ರಚನೆಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನುಡಿದರು.

ಅವರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲಿರುವ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ನಾವು ಅರಣ್ಯದ ಕಡೆಗೆ ಹೋಗುತ್ತಿದ್ದೇವೆ, ಬಹಳಷ್ಟು ನಗರೀಕರಣ ಆಗುತ್ತಿದೆ. ಇದರಿಂದ ಅನೇಕ ರೀತಿಯ ಸಮಸ್ಯೆಗಳು ಇವೆ ಶಾಶ್ವತವಾದ ಪರಿಹಾರಕ್ಕೆ ಸರ್ಕಾರ ಎಲ್ಲಾ ರೀತಿ ಕ್ರಮ ಜರುಗಿಸುತ್ತಿದೆ. ಅರಣ್ಯ ಇಲಾಖೆ ಎಲ್ಲಾ ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದಾರೆ. ಈ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

ಪ್ರಧಾನಿ ಮೋದಿ ಹೇಳಿಕೆ ಗಮನಿಸಿದ್ರೆ ನಮ್ಮ ಸರ್ಕಾರ ಅಲುಗಾಡಿಸೋ ಪ್ಲಾನ್ ಮಾಡಿದಂತೆ ಭಾಸವಾಗ್ತಿದೆ : ಸಚಿವ ಕೃಷ್ಣ ಬೈರೇಗೌಡ

ಪ್ರಧಾನಿಯ ಆಪರೇಷನ್ ಕಮಲ ಹೇಳಿಕೆ ದುರಂತ

ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳುತ್ತಿರೋದು ಅತ್ಯಂತ ದುರಂತ. ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಹತಾಶ ಭಾವನೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ಬಿಜೆಪಿ ಪಕ್ಷ ಯಾವತ್ತಿಗೂ ಹಿಂಬಾಗಿಲಿನಿಂದ ರಚನೆಯಾಗಿದೆ. ಆಪರೇಷನ್‌ ಕಮಲದಿಂದ ಎಷ್ಟೊಂದು ಅನಾಹುತ ಆಗಿದೆ. ಎಲ್ಲರಿಗೂ ಗೊತ್ತಿದೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲ ಅರಿತು ಕರ್ನಾಟಕದಲ್ಲಿ ಅವರನ್ನ ಧೂಳಿಪಟ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್