ನನ್ನ ಕಚೇರಿ ಮುಂದೆ ನಡೆಯುವ ಅಪಘಾತವನ್ನೂ ನನ್ನ ತಲೆಗೆ ಕಟ್ಟುವ ಕೆಲಸವಾಗುತ್ತಿದೆ. ಈಗ ಪ್ರತಿಮಾ ಕೊಲೆ ತನಿಖೆ ಮುಗಿದ ಬಳಿಕ ಈ ಆರೋಪಕ್ಕೆ ಉತ್ತರ ಕೊಡುತ್ತೇನೆ. ನನ್ನ ಟಾರ್ಗೆಟ್ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆ ಆಗುವ ತನಕ ಮುನಿರತ್ನ ಹೊರಗಡೆ ಇರಬಾರದು ಎಂದು ತಿಹಾರ್ ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ
ಬೆಂಗಳೂರು(ನ.07): ಲೋಕಸಭಾ ಚುನಾವಣೆ ಒಳಗೆ ನನ್ನನ್ನು ತಿಹಾರ್ ಜೈಲಿಗೆ ಹಾಕಲು ಪ್ಲಾನ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ.
ಗಣಿ ಅಧಿಕಾರಿ ಪ್ರತಿಮಾ ಕೊಲೆ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ನಡೆಸುವಂತೆ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಕಾರಣಕ್ಕೆ ಈ ಆರೋಪ ಮಾಡಿದ್ದಾರೆ. ಅಧಿಕಾರಿ ಪ್ರತಿಮಾ ಕೊಲೆ ಸಂಬಂಧ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾನು ಮಾತನಾಡುವುದು ಸರಿಯಲ್ಲ. ಅದು ಸೂಕ್ತವೂ ಅಲ್ಲ ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮೊದಲೇ ಹ್ಯಾರಿಸ್ ಅವರನ್ನು ಸಿಎಂ, ಅವರ ಮಗನನ್ನು ಡಿಸಿಎಂ ಮಾಡಿ!
ನನ್ನ ಕಚೇರಿ ಮುಂದೆ ನಡೆಯುವ ಅಪಘಾತವನ್ನೂ ನನ್ನ ತಲೆಗೆ ಕಟ್ಟುವ ಕೆಲಸವಾಗುತ್ತಿದೆ. ಈಗ ಪ್ರತಿಮಾ ಕೊಲೆ ತನಿಖೆ ಮುಗಿದ ಬಳಿಕ ಈ ಆರೋಪಕ್ಕೆ ಉತ್ತರ ಕೊಡುತ್ತೇನೆ. ನನ್ನ ಟಾರ್ಗೆಟ್ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆ ಆಗುವ ತನಕ ಮುನಿರತ್ನ ಹೊರಗಡೆ ಇರಬಾರದು ಎಂದು ತಿಹಾರ್ ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎನ್ನುವವರಿಗೆ ಪ್ರಕರಣದ ತನಿಖೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದು ತೀಕ್ಷ್ಣವಾಗಿ ಹೇಳಿದರು.