ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಅವರು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದ ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ(ನ.07): ಅಧಿಕಾರಕ್ಕಾಗಿ ಸರ್ಕಾರ ಬೀಳಿಸುವುದು ಬಿಜೆಪಿಯವರ ಪ್ರವೃತ್ತಿ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಅವರು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿ ಖಾಲಿಯಿಲ್ಲ:
undefined
ಬಿಜೆಪಿಯವರು ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದರು. ಕಳೆದ ಬಾರಿ 16 ಶಾಸಕರನ್ನು ಆಪರೇಷನ್ ಕಮಲ ಮಾಡಿ ನಮ್ಮ ಸರ್ಕಾರ ಬೀಳಿಸಿದರು. ಸರ್ಕಾರ ಬೀಳಿಸುವ ಪ್ರವೃತ್ತಿ ಇರುವವರು ಅಧಿಕಾರಕ್ಕೆ ಕಚ್ಚಾಡುತ್ತಾರೆ ಎಂದು ನಮಗೆ ತಿಳಿ ಹೇಳಲು ಬರುತ್ತಿದ್ದಾರೆ. ಈವರೆಗೂ ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ ಎಂಬ ಅರಿವು ಬಿಜೆಪಿಯವರಿಗೆ ಇರಲಿ ಎಂದರು.
ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನಿಸುತ್ತೆ: ಸಚಿವ ಸಂತೋಷ್ ಲಾಡ್
ಹಗರಣದ ಬಗ್ಗೆ ಮಾತನಾಡುವುದಿಲ್ಲ:
ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ, ಪ್ರಧಾನಮಂತ್ರಿ ಆರೋಗ್ಯ ವಿಮಾ ಅನುಷ್ಠಾನ ಹಗರಣ ಹಾಗೂ ರಾಮ ಮಂದಿರ ಅವ್ಯವಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುವುದಿಲ್ಲ. ವ್ಯಾಪಂ ಹಗರಣದಲ್ಲಿ 48 ಅಪರಾಧಿಗಳ ಹತ್ಯೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಸಂಖ್ಯೆಯ ಅಡಿ 7 ಲಕ್ಷ ಜನರಿಗೆ ಆರೋಗ್ಯ ಯೋಜನೆ ತಲುಪಿಸಲಾಗಿದೆ. ₹25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿ ₹200 ಕೋಟಿ ವೆಚ್ಚ ಎಂದು ವರದಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿದರು.
ಬರೀ ಸುಳ್ಳು ಆರೋಪ
ಪ್ರಧಾನಿ ಮೋದಿ ಅವರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ?. ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಎಲ್ಲಿಯೂ ಯಾವತ್ತೂ ಹೇಳುವುದಿಲ್ಲ. ಇಂತಹ ಹಲವಾರು ವಿಷಯ ಬಿಟ್ಟು ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಖುಷಿ ತಂದಿದೆ:
ಜಿಲ್ಲೆಯ 6 ಭಾಗಗಳಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಟುಕೊಳ್ಳಲಾಗಿತ್ತು. ಆದರೆ, ಕಳೆದ ಅರ್ಧಗಂಟೆಗೂ ಹೆಚ್ಚುಕಾಲ ಮಳೆ ಬಂದ ಹಿನ್ನೆಲೆಯಲ್ಲಿ ವೀಕ್ಷಣೆಯನ್ನು ಮೊಟಕುಗೊಳಿಸಲಾಗಿದೆ. ಇನ್ನೂ 2-3 ದಿನ ಹೀಗೆ ಮಳೆ ಮುಂದುವರಿಯಲಿದೆ. ಆಕಸ್ಮಿಕವಾಗಿ ಬಂದ ಮಳೆಯಿಂದಾಗಿ ಬರ ವೀಕ್ಷಣೆ ಮುಂದುವರಿಸಲು ಆಗುವುದಿಲ್ಲ. ಇಲ್ಲಿ ಬಂದ ಸಾರ್ವಜನಿಕರು, ರೈತರೊಂದಿಗೆ ಸಮಸ್ಯೆಯ ಕುರಿತು ಚರ್ಚೆ ಮಾಡಲಾಗುವುದು. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದರು.
ತಪ್ಪಿತಸ್ಥರ ಮೇಲೆ ಕ್ರಮ:
ಕೇಶ್ವಾಪುರದ ಯುವಕನ ಆತ್ಮಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಠಾಣಾಧಿಕಾರಿ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ತನಿಖೆಯಿಂದ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ಅಧಿಕಾರಕ್ಕಾಗಿ ಸರ್ಕಾರ ಬೀಳಿಸುವುದು ಬಿಜೆಪಿಯವರ ಪ್ರವೃತ್ತಿ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಅವರು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ? ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿ ಖಾಲಿಯಿಲ್ಲ:
ಬಿಜೆಪಿಯವರು ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದರು. ಕಳೆದ ಬಾರಿ 16 ಶಾಸಕರನ್ನು ಆಪರೇಷನ್ ಕಮಲ ಮಾಡಿ ನಮ್ಮ ಸರ್ಕಾರ ಬೀಳಿಸಿದರು. ಸರ್ಕಾರ ಬೀಳಿಸುವ ಪ್ರವೃತ್ತಿ ಇರುವವರು ಅಧಿಕಾರಕ್ಕೆ ಕಚ್ಚಾಡುತ್ತಾರೆ ಎಂದು ನಮಗೆ ತಿಳಿ ಹೇಳಲು ಬರುತ್ತಿದ್ದಾರೆ. ಈವರೆಗೂ ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗುತ್ತಿಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ ಎಂಬ ಅರಿವು ಬಿಜೆಪಿಯವರಿಗೆ ಇರಲಿ ಎಂದರು.
ಹಗರಣದ ಬಗ್ಗೆ ಮಾತನಾಡುವುದಿಲ್ಲ:
ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣ, ಪ್ರಧಾನಮಂತ್ರಿ ಆರೋಗ್ಯ ವಿಮಾ ಅನುಷ್ಠಾನ ಹಗರಣ ಹಾಗೂ ರಾಮ ಮಂದಿರ ಅವ್ಯವಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುವುದಿಲ್ಲ. ವ್ಯಾಪಂ ಹಗರಣದಲ್ಲಿ 48 ಅಪರಾಧಿಗಳ ಹತ್ಯೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಒಂದೇ ಸಂಖ್ಯೆಯ ಅಡಿ 7 ಲಕ್ಷ ಜನರಿಗೆ ಆರೋಗ್ಯ ಯೋಜನೆ ತಲುಪಿಸಲಾಗಿದೆ. ₹25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿ ₹200 ಕೋಟಿ ವೆಚ್ಚ ಎಂದು ವರದಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿದರು.
ಬರೀ ಸುಳ್ಳು ಆರೋಪ:
ಪ್ರಧಾನಿ ಮೋದಿ ಅವರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ?. ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಎಲ್ಲಿಯೂ ಯಾವತ್ತೂ ಹೇಳುವುದಿಲ್ಲ. ಇಂತಹ ಹಲವಾರು ವಿಷಯ ಬಿಟ್ಟು ನಮ್ಮ ಮೇಲೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಿಎಂ ಮನೆಯಲ್ಲಿ ಬ್ರೇಕ್‌ಫಾಸ್ಟ್ ನಂತರ ಸೈಲೆಂಟಾದ ಕಾಂಗ್ರೆಸ್ ಸಚಿವ, ಶಾಸಕರು! ಸಚಿವ ಲಾಡ್ ಹೇಳಿದ್ದೇನು?
ಖುಷಿ ತಂದಿದೆ:
ಜಿಲ್ಲೆಯ 6 ಭಾಗಗಳಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಟುಕೊಳ್ಳಲಾಗಿತ್ತು. ಆದರೆ, ಕಳೆದ ಅರ್ಧಗಂಟೆಗೂ ಹೆಚ್ಚುಕಾಲ ಮಳೆ ಬಂದ ಹಿನ್ನೆಲೆಯಲ್ಲಿ ವೀಕ್ಷಣೆಯನ್ನು ಮೊಟಕುಗೊಳಿಸಲಾಗಿದೆ. ಇನ್ನೂ 2-3 ದಿನ ಹೀಗೆ ಮಳೆ ಮುಂದುವರಿಯಲಿದೆ. ಆಕಸ್ಮಿಕವಾಗಿ ಬಂದ ಮಳೆಯಿಂದಾಗಿ ಬರ ವೀಕ್ಷಣೆ ಮುಂದುವರಿಸಲು ಆಗುವುದಿಲ್ಲ. ಇಲ್ಲಿ ಬಂದ ಸಾರ್ವಜನಿಕರು, ರೈತರೊಂದಿಗೆ ಸಮಸ್ಯೆಯ ಕುರಿತು ಚರ್ಚೆ ಮಾಡಲಾಗುವುದು. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದರು.
ತಪ್ಪಿತಸ್ಥರ ಮೇಲೆ ಕ್ರಮ