ಕರ್ನಾಟಕದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಕ್ಸಿಟ್ ಪೋಲ್ ಭವಿಷ್ಯಗಳು ಸುಳ್ಳಾಗಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಗೆಲುವಿನ ಪ್ರಮುಖ ರೂವಾರಿ ಆಗಿದ್ದು, ಬಿಜೆಪಿ ನಾಯಕರ ತಪ್ಪುಗಳು ಮುನ್ನೆಲೆಗೆ ಬಂದಿವೆ.
ಬೆಂಗಳೂರು (ನ.23): ಕರ್ನಾಟಕದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪ ಚುನಾವಣೆ ಫಲಿತಾಂಶದಲ್ಲಿ ಮೂರೂ ಕ್ಷೇತ್ರಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್‌ನಲ್ಲಿ ಭವಿಷ್ಯ ನುಡಿಯಲಾಗಿತ್ತು. ಆದರೆ, ಇದೀಗ ಎಕ್ಸಿಟ್ ಪೋಲ್ ಅನ್ನು ಸುಳ್ಳಾಗಿಸಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗ್ಯಾರಂಟಿಯ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಇದಕ್ಕೆ ಬಿಜೆಪಿ ಮಾಡಿಕೊಂಡ ಎಡವಟ್ಟುಗಳು ಕೂಡ ಇಲ್ಲಿ ಮುನ್ನೆಲೆಗೆ ಬರುತ್ತಿವೆ...
ಉಪ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಡೀ ರಾಜ್ಯದ ಜನತೆಯನ್ನೇ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಇಲ್ಲಿ ಮುಖ್ಯವಾಗಿ ಚುನಾವಣೆಯ ಮತದಾನದ ನಂತರ ಮತದಾನಕ್ಕೂ ಒಂದೆರಡು ದಿನ ಮುಂಚಿತವಾಗಿ ವಿವಿಧ ವಾರ್ತಾ ಸಂಸ್ಥೆಗಳು, ಖಾಸಗಿ ರಾಜಕೀಯ ಸಂಸ್ಥೆಗಳು ಹಾಗೂ ಸಮಿತಿಗಳು ಮತದಾನೋತ್ತರ ಫಲಿತಾಂಶ (ಎಕ್ಸಿಟ್ ಪೋಲ್) ನುಡಿಯುತ್ತವೆ. ಹೀಗೆ, ರಾಜ್ಯದ ಎಕ್ಸಿಟ್ ಪೋಲ್‌ನಲ್ಲಿ ಶಿಗ್ಗಾವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಅವರು ಗೆಲ್ಲುತ್ತಾರೆ. ಈ ಮೂಲಕ ಮೂರೂ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿವೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದರು.
undefined
ಎಕ್ಸಿಟ್ ಪೋಲ್ ಏನೇ ಭವಿಷ್ಯ ನುಡಿದರೂ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಮಾತ್ರ ನಮ್ಮದೇ ಗೆಲುವು ಎಂದು ಹೇಳಿದ್ದರು. ಇನ್ನು ಬಿಜೆಪಿಯವರೂ ತಮ್ಮದೇ ಗೆಲವು ಎಂದು ಬೀಗುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲ್ಲುವ ಮೂಲಕ ರಾಜ್ಯ ಸರ್ಕಾರದ ಬಲವನ್ನು ಮತ್ತಷ್ಟು ಹೆಚ್ಚಳ ಮಾಡಿದ್ದಾರೆ. ಇಲ್ಲಿ ರಾಜ್ಯ ಸರ್ಕಾರದಿಂದ ಕೊಡಲಾದ ಪಂಚ ಗ್ಯಾರಂಟಿಗಳಿಗೆ ಮತದಾರರು ತಮ್ಮ ಮತದ ಮುದ್ರೆಗಳನ್ನು ಒತ್ತಿ ವಿಧಾನಸಭೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!
ಗೆದ್ದವರಾರು, ಸೋತವರಾರು?
ಚನ್ನಪಟ್ಟಣ
ಕಾಂಗ್ರೆಸ್ ಗೆಲುವು - ಸಿ.ಪಿ. ಯೋಗೇಶ್ವರ - 1,12,642
ಜೆಡಿಎಸ್ ಸೋಲು - ನಿಖಿಲ್ ಕುಮಾರಸ್ವಾಮಿ - 87,229
ಮತಗಳ ಅಂತರ - 25,413
ಶಿಗ್ಗಾಂವಿ
ಕಾಂಗ್ರೆಸ್ ಗೆಲುವು - ಯಾಸಿರ್ ಖಾನ್ ಫ2ಠಾಣ್ - 1,00,756
ಬಿಜೆಪಿ ಸೋಲು - ಭರತ್ ಬೊಮ್ಮಾಯಿ -87,308
ಮತಗಳ ಅಂತರ - 13,448
ಸಂಡೂರು
ಕಾಂಗ್ರೆಸ್ ಗೆಲುವು - ಅನ್ನಪೂರ್ಣ ತುಕಾರಾಂ - 93,606
ಬಿಜೆಪಿ ಸೋಲು - ಬಂಗಾರು ಹನುಮಂತು - 83,967
ಮತಗಳ ಅಂತರ - 9,639
ರಾಜ್ಯದಲ್ಲಿ ಮೂರೂ ಪಕ್ಷಗಳ ಬಲಾಬಲ
ಪಕ್ಷಗಳು | 2018 | 2023 | 2024 ಉಪ ಚುನಾವಣೆ |
ಕಾಂಗ್ರೆಸ್ | 80 | 135 | 137 |
ಬಿಜೆಪಿ | 104 | 66 | 65 |
ಜೆಡಿಎಸ್ | 37 | 19 | 18 |
ಕೆಆರ್‌ಪಿಪಿ | 00 | 01 | 01 |
ಸರ್ವೋದಯ | 00 | 01 | 01 |
ಇತರೆ | 01 | 02 | 02 |
ಬಿಜೆಪಿ ಸೋಲಿಗೆ ಕಾರಣಗಳೇನು?
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಬಿಜೆಪಿ ನಾಯಕರ ಹೇಳಿಕೆಗಳು ಫಲಿಸಲಿಲ್ಲ.
ಕಾಂಗ್ರೆಸ್ ಗ್ಯಾರಂಟಿಗಳಿಂದ ಉಂಟಾದ ಸಮಸ್ಯೆಗಳನ್ನು ಜನರ ಮುಂದಿಡುವಲ್ಲಿ ವಿಫಲ.
ವಕ್ಫ್ ಮಂಡಳಿಯಿಂದ ರೈತರ ಭೂಮಿ ಕಿತ್ತುಕೊಂಡರೂ ರೈತರ ಪರ ನಿಲ್ಲುವಲ್ಲಿ ತಡಮಾಡಿದ ಬಿಜೆಪಿ ನಾಯಕರು.
ವಕ್ಫ್ ವಿರುದ್ಧದ ಹೋರಾಟದಲ್ಲಿ ಹಾಗೂ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಲಿಲ್ಲ.
ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳುವಲ್ಲಿ ವಿಫಲರಾದುದು.
ಬಿಜೆಪಿ ಅಭ್ಯರ್ಥಿಗಳು ಮಾತನಾಡಿದ್ದಕ್ಕಿಂತ ಪ್ರಚಾರಕ್ಕೆ ಬಂದವರೇ ಹೆಚ್ಚಾಗಿ ಮಾತನಾಡಿದರು.
ಕಾಂಗ್ರೆಸ್ ಗ್ಯಾರಂಟಿಗೆ ಪೈಪೋಟಿಯಾಗಿ ಯಾವುದೇ ಅಭಿವೃದ್ಧಿ ಭರವಸೆ ನೀಡದ ಬಿಜೆಪಿ ನಾಯಕರು.
ಕಳೆದ ಸರ್ಕಾರದಲ್ಲಿ ಅಭಿವೃದ್ಧಿ ಮಾಡಿದ ಅಂಶಗಳನ್ನು ಬಳಕೆ ಮಾಡಿಕೊಳ್ಳಲಿಲ್ಲ.
ಸಂಡೂರಿನಲ್ಲಿ ನನ್ನ ಮಗನಿಗೆ ಟಿಕೆಟ್ ಕೇಳಿಲ್ಲವೆಂದ ಬೊಮ್ಮಾಯಿ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು.
ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಎಂದು ಬಿಂಬಿತವಾಗುತ್ತಿದ್ದ ಬಿಜೆಪಿಯ ಸಿ.ಪಿ.ಯೋಗೇಶ್ವರ್‌ಗೆ ಮೈತ್ರಿ ಟಿಕೆಟ್ ನಿರಾಕರಣೆ.
ವಿಜಯೇಂದ್ರ ನಾಯಕತ್ವ ಒಪ್ಪಿ ಕಾರ್ಯಕರ್ತರು ಕೆಲಸ ಮಾಡಲಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಸಂಡೂರಿನಲ್ಲಿ ರೆಡ್ಡಿ ಬಣ, ಶ್ರೀರಾಮುಲು ಬಣದ ನಡುವೆ ಒಳ ವೈಷಮ್ಯ.
ಮುಸ್ಲಿಂ ಮತದಾರರನ್ನು ಸೆಳೆಯಲು ಒಂದೇ ಒಂದು ಕನಿಷ್ಠ ಪ್ರಯತ್ನವನ್ನೂ ಮಾಡದಿರುವುದು.
ಕುಮಾರಸ್ವಾಮಿ ಕುಟುಂಬವನ್ನು ಬೆಳೆಸಿಕೊಳ್ಳುವುದಕ್ಕೆ, ಇದಕ್ಕೆ ಬಿಜೆಪಿಯ ಯಡಿಯೂರಪ್ಪ ಸಾಥ್ ನೀಡಿದ್ದಾರೆ ಎಂಬ ಆರೋಪ.
ಸಂಡೂರಿನಲ್ಲಿ ಬಿಜೆಪಿ ಗೆಲ್ಲುವ ಕ್ಷೇತ್ರವಾಗಿದ್ದರೂ ಬಿಜೆಪಿ ನಾಯಕರು ಬಣಗಳಾಗಿ ಒಡೆದು ಹಂಚಿಕೆಯಾದರು.
ಇದನ್ನೂ ಓದಿ: ಬಳ್ಳಾರಿ ರೆಡ್ಡಿ ಪಡೆಗೆ ಮತ್ತೆ ಗುಮ್ಮಿದ ಟಗರು; ಕಾಂಗ್ರೆಸ್ ಕೋಟೆಯಲ್ಲಿ ಸೋತರೂ ತೊಡೆ ತಟ್ಟಿದ ಬಂಗಾರು!
ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳು:
ಕನಕಪುರದ ಬಂಡೆ ಖ್ಯಾತಿಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಲ್ಲಿ ತಾನೇ ಅಭ್ಯರ್ಥಿ ಎಂದು ಘೋಷಣೆ.
ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿಗಳು
ಮುಸ್ಲಿಂ ಓಲೈಕೆ ಮಾಡುವುದಲ್ಲಿ ಹಿಂದೆ ಬೀಳದ ನಾಯಕರು
ಮುಸ್ಲಂ ಮತಗಳನ್ನು ಒಗ್ಗೂಡಿಸಿ ಮತಗಳನ್ನಾಗಿ ಮಾಡಿಕೊಂಡ ನಾಯಕರು
ಕಾಂಗ್ರೆಸ್ ಸರ್ಕಾರದ ಘಟನಾನುಘಟಿ ನಾಯಕರಿಂದ ಪ್ರಚಾರ ಮತ್ತು ದೊಡ್ಡ ಸಮಾವೇಶಗಳ ಆಯೋಜನೆಯಲ್ಲಿ ಭರಪೂರ ಭರವಸೆ.
ಸಿ.ಪಿ. ಯೋಗೇಶ್ವರ್‌ಗೆ ಬಿಜೆಪಿ, ಜೆಡಿಎಸ್ ಅನ್ಯಾಯ ಮಾಡಿವೆ ಎಂದ ಅನುಕಂಪದ ಅಲೆಯೂ ಕೆಲಸ ಮಾಡಿದೆ.
ಸಂಡೂರಿಗೆ ಹೋಗಿ ತಳಮಟ್ಟದಲ್ಲಿ ಪ್ರಚಾರ ಮಾಡಿ ಮತ ಹಾಕಿಸಿದ ಕೈ ಕಾರ್ಯಕರ್ತರು
ಮುಸ್ಲಿಂ ಸಮುದಾಯದ ನಾಯಕ ಜಮೀರ್ ಅಹಮದ್ ಖಾನ್ ಯಶಸ್ವಿ ಪ್ರಚಾರ