ಸಿದ್ದ​ರಾ​ಮಯ್ಯ ಕಣ್ಣು ಮಂಕಾ​ಗಿ​ದ್ಯಾ: ಸಿದ್ದ​ರಾ​ಮ​ಯ್ಯ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ

By Kannadaprabha NewsFirst Published Sep 29, 2022, 11:00 PM IST
Highlights

ಪಿಎಫ್‌ಐನಂತೆ ಆರ್‌ಎಸ್‌ಎಸ್‌ ಬ್ಯಾನ್‌ ಮಾಡು​ವಂತೆ ಹೇಳಿ​ರುವ ಮಾಜಿ ಸಿಎಂ ಸಿದ್ದ​ರಾ​ಮ​ಯ್ಯವಿರುದ್ಧ ಕಿಡಿ

ರಾಮ​ನ​ಗರ(ಸೆ.29):  ದೇಶ ವಿರೋಧಿ ಕೆಲಸ ಹಾಗೂ ದೇಶ ರಕ್ಷಣೆ ಮಾಡುವ ಸಂಘ​ಟ​ನೆ​ಗಳ ಬಗ್ಗೆ ವ್ಯತ್ಯಾಸ ಇರು​ತ್ತದೆ. ಪಿಎಫ್‌ಐನಂತೆ ಆರ್‌ಎಸ್‌ಎಸ್‌ ಅನ್ನು ಬ್ಯಾನ್‌ ಮಾಡು​ವಂತೆ ಹೇಳಿ​ರುವ ಮಾಜಿ ಸಿಎಂ ಸಿದ್ದ​ರಾ​ಮ​ಯ್ಯ ಅವ​ರಿಗೆ ರಾಜ​ಕೀಯ ಮಾಡುತ್ತಾ ಕಣ್ಣು ಮುಚ್ಚೋ​ಗಿ​ದ್ಯಾ ಅಥವಾ ಮಂಕಾ​ಗಿ​ದ್ಯಾ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಲೇವಡಿ ಮಾಡಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ದೇಶ ವಿರೋಧಿ, ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡು​ತ್ತಿ​ದ್ದಾರೆ. ಆದರೆ, ನಾವು​ ಕಾಂಗ್ರೆಸ್‌ನವರು ಏನನ್ನು ಮಾಡೋದಿಕ್ಕೆ ಆಗಿರದ ಕೆಲಸವನ್ನು ಮಾಡಿದ್ದೇವೆ. ಕಾಂಗ್ರೆಸ್ಸಿಗರು ಸತ್ಯತೆ ಮತ್ತು ಅಸತ್ಯತೆಯನ್ನು ಗಮನಿಸಿ ಮಾತ​ನಾ​ಡ​ಬೇಕು. ಈ ದೇಶದಲ್ಲಿ ಭಯೋತ್ಪಾದನೆ, ದೇಶದ್ರೋಹ ಮಾಡುತ್ತಿ​ರುವ ಸಂಘಟನೆಗನ್ನು ಮಟ್ಟಹಾಕಲಿಲ್ಲ. ಅಧಿಕಾರದಲ್ಲಿದ್ದ ವೇಳೆ ಪಿಎಫ್‌ಐ ಮೇಲಿನ ಕೇಸ್‌ಗಳನ್ನು ವಿತ್‌ಡ್ರಾ ಮಾಡಿದರು. ಇವರಿಗೆ ಯಾವ ನೈತಿಕತೆ ಇದೆ. ರಾಜಕೀಯವಾಗಿ ಅಧಿಕಾರದ ದಾಹ ಇಟ್ಟಕೊಂಡು ದೇಶದ ಸಾಮರಸ್ಯವನ್ನು ಹಾಳು ಮಾಡು​ತ್ತಿ​ದ್ದಾರೆ ಎಂದು ಕಿಡಿ​ಕಾ​ರಿ​ದ​ರು.

ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‌ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿರುವ ಕೇಂದ್ರ ಸರ್ಕಾ​ರದ ಕ್ರಮವನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ. ಈ ಸಂಘಟನೆಯು ಬೇರೆ ಯಾವುದೇ ರೂಪದಲ್ಲಿ ತಲೆ ಎತ್ತದಂತೆ ತೀವ್ರ ನಿಗಾ ವಹಿಸಲಾಗುವುದು ಎಂದರು.

ಭಾರತ್‌ ಜೋಡೋ ಯಾತ್ರೆ ವೇಳೆ ಡಿಕೆಶಿಗೆ ಸಿಬಿಐ ಶಾಕ್‌..!

ದೇಶದ ಅಖಂಡತೆ ಐಕ್ಯತೆ ವಿರುದ್ಧ ವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ, ಸಂಘಟನೆ ವಿರುದ್ಧ ಕ್ರಮ ವಹಿಸುವುದು ಆಗಬೇಕಿತ್ತು. ಪಿಎಫ್‌ ಐ ಸಂಘಟನೆ ಬ್ಯಾನ್‌ ಮಾಡುವಂತದ್ದು ಬಹುಕಾಲದ ಬೇಡಿಕೆ ಆಗಿತ್ತು. ಕೇಂದ್ರ ಸರ್ಕಾರ ಆ ಸಂಘ​ಟ​ನೆ ಬ್ಯಾನ್‌ ಮಾಡಿ​ರು​ವು​ದನ್ನು ಪ್ರತಿ​ಯೊ​ಬ್ಬರೂ ಸ್ವಾಗ​ತಿ​ಸ​ಬೇಕು. ಪ್ರತಿ​ಯೊಂದು ರಾಜ್ಯವೂ ಆದೇ​ಶ​ವನ್ನು ಅನುಷ್ಠಾನ ಮಾಡ​ಬೇಕು ಎಂದು ತಿಳಿ​ಸಿ​ದ​ರು. ಪಿಎಫ್‌ ಐ ಸಂಘಟನೆಯು ವಿದೇಶಿ ಜಾಲಗಳ ಮೂಲಕ ಅಕ್ರಮ ನೆರವು ಪಡೆದುಕೊಳ್ಳುತ್ತಿತ್ತು. ಈ ಮೂಲಕ ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟುಮಾಡಲು ಅದು ಸಂಚು ರೂಪಿಸುತ್ತಿತ್ತು. ಅವ​ರನ್ನು ಮಟ್ಟಹಾಕುವ ಕೆಲಸ ಆಗಿ​ರು​ವುದು ಒಳ್ಳೆ​ಯದು ಎಂದು ಹೇಳಿ​ದ​ರು.

ಕೇಂದ್ರ ಸರ್ಕಾರವು ಪಿಎಫ್‌ ಐ ಸಂಘಟನೆಯ ವಿಧ್ವಂಸಕ ಚಟುವಟಿಕೆಗಳು ಹಾಗೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಇದರ ಬೆನ್ನಲ್ಲೇ ಎರಡು ದಿವಸಗಳ ಹಿಂದೆ ದೇಶಾದ್ಯಂತ ಆ ಸಂಘಟನೆಯ ಕಚೇರಿಗಳು ಮತ್ತು ನಾಯಕರ ಮೇಲೆ ಎನ್‌ಐಎ ದಾಳಿ ನಡೆಸಲಾಗಿತ್ತು.

ಸಮಾಜ ಮತ್ತು ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಯಾವ ಸಂಘಟನೆಗಳನ್ನು ಕೂಡ ಬಿಡುವುದಿಲ್ಲ. ಈ ಜಮಾ​ನ​ದಲ್ಲಿ ತಂತ್ರ​ಜ್ಞಾನ ದೊಡ್ಡ​ಮ​ಟ್ಟ​ದಲ್ಲಿ ಬೆಳೆ​ದಿದೆ. ದುಷ್ಟಶಕ್ತಿ​ಗಳು ದೇಶ​ದಲ್ಲಿ ಯಾವುದೇ ಕಾರ​ಣಕ್ಕೂ ಬೆಳೆ​ಯಲು ಸಾಧ್ಯ​ವಿಲ್ಲ ಎಂದು ಅಶ್ವತ್ಥ ನಾರಾ​ಯಣ ತಿಳಿ​ಸಿ​ದರು.

ಕುಟುಂಬ ರಾಜ​ಕಾ​ರಣ, ಗುಂಪು​ಗಾ​ರಿಕೆಯಿಂದ ಬೇಸತ್ತು ಜೆಡಿ​ಎಸ್‌ ತೊರೆ​ದೆ: ಸಿಂಗ​ರಾಜ​ಪುರ ರಾಜಣ್ಣ

ಆಗ ಭಾರತ್‌ ತೋಡೋ, ಈಗ ಭಾರತ್‌ ಜೋಡೋ

ರಾಮ​ನ​ಗ​ರ: ಅಧಿಕಾರದಲ್ಲಿ ಇದ್ದಾಗ ಭಾರತ್‌ ತೋಡೋ, ಪ್ರತಿಪಕ್ಷ ಆದ ತಕ್ಷಣ ಭಾರತ್‌ ಜೋಡೋ ಕಾಂಗ್ರೆಸ್‌ ಕಾರ್ಯ​ಕ್ರಮ. ಜನರು ಇದೆ​ಲ್ಲ​ವನ್ನು ಒಪ್ಪು​ವು​ದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾ​ಯಣ ಪ್ರತಿ​ಕ್ರಿ​ಯಿ​ಸಿದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಾಂಗ್ರೆಸ್‌ ಅಂದರೆ ಸಮಾಜ ಒಡೆ​ಯುವ ಕೆಲಸ. ಈ ರೀತಿ ಓಲೈಸುವ ರಾಜಕಾರಣ ಮಾಡಿ ದೇಶಕ್ಕೆ ಭ್ರಷ್ಟಾಚಾರ ಸಂಸ್ಕೃತಿ ಕೊಟ್ಟವರು ಯಾರಾದರೂ ಇದ್ದರೆ ಕಾಂಗ್ರೆಸ್‌ ನವರು. ಅವರ ಆರಾಧ್ಯ ದೈವ ಭ್ರಷ್ಟಾಚಾರ. ಕಾಂಗ್ರೆಸ್‌ನ ಈ ನಾಟಕವನ್ನು ಕೇಳಲು ಯಾರು ಸಾಧ್ಯವಿಲ್ಲ. ಜನಪರಕ್ಕಾಗಿ ಬಂದಿಲ್ಲ, ಅವರ ಅಸ್ತಿತ್ವಕ್ಕೆ ಬಂದವರು. ಜನರು ಮರೆತು ಹೋದರೆ ಹೇಗೆ ಎಂದು ಏನೇನೋ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವ್ಯಂಗ್ಯ​ವಾ​ಡಿ​ದರು.

ನಾನೇನೂ ಟಾರ್ಗೆಟ್‌ ಆಗು​ತ್ತಿಲ್ಲ

ಬಿಎಂಎಸ್‌ ಟ್ರಸ್ಟ್‌ ವಿಚಾರವಾಗಿ ಸದನದಲ್ಲಿಯೇ ಸ್ಪಷ್ಟ​ವಾಗಿ ಉತ್ತರ ಕೊಟ್ಟಿದ್ದೇನೆ. ಹೊರಗೆ ಬಂದು ಮತ್ತೆ ಮತ್ತೆ ಮಾತನಾಡುವುದು ಒಳ್ಳೆಯದಲ್ಲ. ನಾನು ಸಂಬಂಧ​ಪಟ್ಟ ಇಲಾಖೆ ಸಚಿ​ವ. ಹಾಗಾಗಿ ನಾನೇ ಉತ್ತರ ನೀಡಿ​ದ್ದೇನೆ. ಸಂಪುಟ ಸಚಿ​ವರು ನಿಲ್ಲಲಿಲ್ಲ ಎಂಬು​ದ​ರಲ್ಲಿ ಅರ್ಥ​ವಿಲ್ಲ. ಎಲ್ಲರ ಸಹ​ಕಾರ ನನಗೆ ಇದೆ. ಇದರಲ್ಲಿ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದ​ರು. ನಮ್ಮ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ಕೊಟ್ಟಿದೆ. ನಾನೇನೂ ಟಾರ್ಗೆಟ್‌ ಆಗುತ್ತಿಲ್ಲ. ಇಂತಹ ಅಗ್ನಿ ಪರೀಕ್ಷೆ ಬರಬೇಕು. ಸವಾಲು ಬಂದಿದ್ದನ್ನು ಸ್ವೀಕಾರ ಮಾಡಬೇಕು. ಆ ಕೆಲ​ಸ​ವನ್ನು ನಾನು ಸಮ​ರ್ಥ​ವಾಗಿ ನಿಭಾ​ಯಿ​ಸಿ​ದ್ದೇನೆ ಎಂದು ಅಶ್ವತ್ಥ ನಾರಾ​ಯಣ ಹೇಳಿ​ದರು.
 

click me!