ಪಿಎಫ್‌ಐ ಬ್ಯಾನ್ ಮಾಡಿದ್ರೆ ಶಾಂತಿ ನೆಲೆಸುತ್ತೆ ಅನ್ನೋ ನಂಬಿಕೆ ನನಗಿಲ್ಲ: ಕುಮಾರಸ್ವಾಮಿ

By Girish GoudarFirst Published Sep 29, 2022, 10:58 PM IST
Highlights

ಪಿಎಫ್ಐ ಬ್ಯಾನ್ ಕುರಿತು ಮಾಡಿರುವುದನ್ನು ಜನರ ಮುಂದೆ ಸರ್ಕಾರ ಸಾಕ್ಷಾದಾರಗಳನ್ನು ಇಡಬೇಕಿದೆ. ಯಾವ ಕಾರಣಕ್ಕೆ ಬ್ಯಾನ್ ಆಯ್ತು ಎಂದು ಜನರಿಗೆ ತಿಳಿಸಲಿ: ಎಚ್‌ಡಿಕೆ

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಸೆ.30):  ರಾಜ್ಯ ಸರ್ಕಾರ ಮಧ್ಯರಾತ್ರಿ ಕಾರ್ಯಾಚರಣೆ ಮಾಡುತ್ತಿದೆ. ಪಿಎಫ್ಐ ಸೇರಿ ಹಲವಾರು ಸಂಘಟನೆಗಳನ್ನು ಬ್ಯಾನ್ ಮಾಡಿದ್ದಾರೆ. ಯಾವ್ಯಾವ ನಾಯಕರು ಏನೇನು ಹೇಳಿಕೆ ಕೊಡುತ್ತಾರೆ ಅನ್ನೋದನ್ನ ಎಲ್ಲರೂ ಗಮನಿಸುತ್ತಿದ್ದಾರೆ. ಸಂಘಟನೆಗಳ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ವಾಸ್ತವಾಂಶ ಕುರಿತು ಜನರ ಮುಂದಿಡಬೇಕಿದೆ. ಬಂಧನ ಹಾಗೂ ಬ್ಯಾನ್ ಮಾಡಿದ್ರೆ ಆದಲಿ ಶಾಂತಿ ನೆಲೆಸುತ್ತೆ ಅನ್ನುವ‌ ನಂಬಿಕೆ ನನಗೆ ಇಲ್ಲ. ಸರ್ಕಾರದ ತೀರ್ಮಾನಗಳು ಸಮಾಜದಲ್ಲಿ ಎಲ್ಲರಿಗೂ ತಿಳಿಸಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಎಲ್ಲ ವಾತಾವರಣ ಮೂಡಲಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. 

ಇಂದು(ಗುರುವಾರ) ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ತಟ್ಟನಕುಂಟೆ ಗ್ರಾಮದಲ್ಲಿ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪಿಎಫ್ಐ ಬ್ಯಾನ್ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಪಿಎಫ್ಐ ಬ್ಯಾನ್ ಕುರಿತು ಮಾಡಿರುವುದನ್ನು ಜನರ ಮುಂದೆ ಸರ್ಕಾರ ಸಾಕ್ಷಾದಾರಗಳನ್ನು ಇಡಬೇಕಿದೆ. ಯಾವ ಕಾರಣಕ್ಕೆ ಬ್ಯಾನ್ ಆಯ್ತು ಎಂದು ಜನರಿಗೆ ತಿಳಿಸಲಿ. ಗುಜರಾತ್‌ನಲ್ಲಿ ರೈಡ್ ಮಾಡಿದಾಗ 2047 ನೇ ಇಸವಿಯಲ್ಲಿ ಮುಸ್ಲಿಂ ರಾಷ್ಟ್ರ ಮಾಡುತ್ತೇವೆ ಅನ್ನೋ ಸಾಕ್ಷ್ಯ ದೊರೆಕಿದೆ ಅಂತ ಹೇಳ್ತಿದ್ದಾರೆ. ಹಲವು ಕಡೆ ಕೊಲೆ ಆಗಿರುವ ಹಿನ್ನೆಲೆ ಬ್ಯಾನ್ ಮಾಡಿದ್ದೇನೆ ಅಂತ ಹೇಳ್ತಿದ್ದಾರೆ. 800 -1000 ವರ್ಷ ಹಾಳಿರುವ ಮೊಘಲರ ಕೈಯಲ್ಲೇ ಹಿಂದೂ ರಾಷ್ಟ್ರವನ್ನು ಇಸ್ಲಾಮಿಕ್ ರಾಷ್ಟ್ರ ಮಾಡೋದಕ್ಕೆ ಆಗಲಿಲ್ಲ. ಹಿಂದೂ ರಾಷ್ಟ್ರ ಅದರದೇ ಆಗಿರುವ ಬಲಾಢ್ಯ ಹೊಂದಿದೆ. ಸುಮ್ಮನೆ ಕಾರಣ ನೀಡಿ ಜನರಿಗೆ ಭಯದ ವಾತಾವರಣ ನಿರ್ಮಾಣ ಮಾಡೋ ಕೆಲಸ ಆಗಬಾರದು. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಆಗಲಿ. ಸಂಘಟನೆ ಬ್ಯಾನ್ ಮಾಡಿದ ಕೂಡಲೇ ಶಾಂತಿ ನೆಲೆಸೋದಿಲ್ಲ. ಸರ್ಕಾರ ಭಾವೈಕ್ಯತೆ ಮೂಡಿಸುವ ಕೆಲಸ ಮಾಡಿದ್ರೆ ಮಾತ್ರ ಸಾಧ್ಯ ಅಂತ ಸಲಹೆ ನೀಡಿದ್ರು.

ಪಿಎಫ್‌ಐ ಬೆಳೆಯಲು ಸಿದ್ದರಾಮಯ್ಯ ಕಾರಣ: ಸಚಿವ ಅರಗ ಜ್ಞಾನೇಂದ್ರ

ಸಮಜಘಾತುಕ ಕೆಲಸ ಮಾಡಿದ್ರೆ ಕ್ರಮ ತೆಗೆದುಕೊಳ್ಳಿ

ಏನಾದ್ರು ಸಮಜಘಾತುಕ ಕೆಲಸ ಮಾಡಿದ್ರೆ ಕ್ರಮ ತೆಗೆದುಕೊಳ್ಳಿ. ಆದ್ರೆ ಅವರ ಕಚೇರಿಗೆ ಬೀಗ ಹಾಕಿಕೊಂಡು ಕೂರೋದು ಅಂದ್ರೆ ಏನು ಅರ್ಥ. ಏನೋ ಮಾಹಿತಿ ಹಿಡ್ಕೊಂಡು ಕಚೇರಿಗೆ ಬೀಗ ಹಾಕ್ತಿರಿ. ರಾಮನಗರದಲ್ಲಿ 27 ಜನ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ರು. ಪ್ರವಾಹ ಬಂದಾಗ ಅದರಲ್ಲಿ ಪಿಎಫ್ಐ ನ ಕೆಲವರು ಜನರನ್ನು ಬದುಕಿಸುವ ಕೆಲಸ ಮಾಡಿದನ್ನು ಗಮನಿಸಿ ಬಿಟ್ಟು ಕಳುಹಿಸಿದ್ದಾರೆ. ಯಾವ ಆಧಾರದಲ್ಲಿ ಮಧ್ಯರಾತ್ರಿ ಮನೆಗಳ ಬಳಿ ಹೋಗಿ ಅರೆಸ್ಟ್ ಮಾಡಿದಿರಿ. ಹಣ ವರ್ಗಾವಣೆ ಬಗ್ಗೆ ಇದ್ರೆ ಕ್ರಮ ತೆಗೆದುಕೊಳ್ಳಿ. ಅದೇ ರೀತಿ ರಾಜ್ಯ ಸರ್ಕಾರದ ಕೆಲವರ ಬೇನಾಮಿ ಅಕೌಂಟ್ ಗೆ ಬಂದಿರುವ ಹಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ವಾ. ಬಿಎಂಎಸ್ ಟ್ರಸ್ಟ್ ಬಗ್ಗೆ ವಿಚಾರ ಎತ್ತಿ ನಾನು ಚರ್ಚೆ ಮಾಡಿದ್ದೇನೆ. ಅದರಲ್ಲಿ ಯಾರಿಂದ ಯಾರಿಗೆ ದುಡ್ಡು ಹೋಗಿದೆ ಎಂದು ತನಿಖೆ ಮಾಡಿ ಎಂದು ಸಚಿವರೊಬ್ಬರ ವಿರುದ್ಧ ವಾಗ್ದಾಳಿ ನಡೆಸಿದ್ರು.

ಇನ್ನು ಆರ್.ಎಸ್.ಎಸ್ ನ ಬ್ಯಾನ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ ಕುಮಾರಸ್ವಾಮಿ. ನೆಹರು ಪ್ರಧಾನಿ ಇದ್ದಾಗ, ಮಹಾತ್ಮಾ ಗಾಂಧೀಜಿ ಹತ್ಯೆ ಆದಾಗ RSS ಬ್ಯಾನ್ ಮಾಡಲಾಗಿತ್ತು. ಬ್ಯಾನ್ ನ ವಾಪಸ್ಸು ಪಡೆದಾಗ ಕೆಲವು ಗೈಡ್ ಲೈನ್ಸ್ ನ RSS ಗೆ ನೀಡಲಾಗಿತ್ತು. ಯಾಕೆ ಬ್ಯಾನ್ ಎಂದು ಹೇಳಬೇಕಲ್ಲ.ಈ ಹಿಂದೆ ಬ್ಯಾನ್ ಮಾಡಿದ್ದು ಇದೆ. ಆದ್ರೆ ಯಾವ ಕಾರಣಕ್ಕೆ ಬ್ಯಾನ್ ಮಾಡಬೇಕು ಅನ್ನೋದನ್ನು ಸಹ ಜನರ ಮುಂದೆ‌ ಹೇಳಬೇಕಾಗಿದೆ. ಸರ್ಕಾರ ಒಂದು ಸಂಘಟನೆಗೆ ತ್ರಿಶೂಲ,ಲಾಠಿ ಕೊಟ್ಟು  ಪ್ರೋತ್ಸಾಹ ಮಾಡುತ್ತೀರಿ. ತ್ರಿಶೂಲ ಹಿಡಿದು ಮೆರವಣಿಗೆ ಮಾಡೋದಕ್ಕೆ ಏಕೆ ಪ್ರೋತ್ಸಾಹ ನೀಡ್ತೀರಿ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಆಗುವ ವೇಳೆ 53 ಜನರ ಕೊಲೆ ಆಯ್ತಲ್ಲಾ ಆ ವೇಳೆ ಯಾರ ಮೇಲೆ ಕ್ರಮ ಕೈಗೊಂಡಿದ್ದಾರೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಯ್ತು, ಲಕ್ಷಾಂತರ ಕೋಟಿ ಆಸ್ತಿ ನಷ್ಟವಾಗಿದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಅಂತೀರಾ.ಹೊರ ದೇಶದ ಹಣ ತಂದು ಭಯೋತ್ಪಾದನೆ ಮಾಡುವವರನ್ನ ಬಲಿ ಹಾಕಲು ನಮ್ಮದು ಯಾವುದೆ ತಕರಾರು ಇಲ್ಲ.ಅದರ ಬಗ್ಗೆ ಸರ್ಕಾರಗಳ ಗಮನ ಹರಿಸಬೇಕಾಗಿದೆ. ಸರ್ಕಾರ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಂವಿಧಾನದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು.ಅವರು ಎಲ್ಲಿ ಬೇಕಾದ್ರೂ ಸ್ಪರ್ಧಿಸಲಿ. ನಾನು ಚರ್ಚೆ ಮಾಡೋದಿಲ್ಲ ಅಂತ ಹೇಳಿದ್ದಾರೆ. 

ಪಿಎಫ್‌ಐ ನಿಷೇಧ ಗುಜರಾತ್‌ ಚುನಾವಣೆಯ ಗಿಮಿಕ್‌: ಹರಿಪ್ರಸಾದ್‌

ಕರ್ನಾಟಕದ ಭೂಮಿ ನಮಗೆ ಸಾಗುವಳಿ ಚೀಟಿ ಇದ್ದಂಗೆ.ನಾವು ಅಧಿಕಾರಕ್ಕೆ ಬರೋದು ನಮ್ಮ ಗುರಿ.ಸಾಗುವಳಿ ಚೀಟಿಯಲ್ಲಿ ಕೆಲಸ ಮಾಡಿದ್ರೆ ಬಗರ್ ಹುಕ್ಕುಂ ಜಾಗ ಹುಡುಕಿಕೊಂಡು ಹೋಗೋದಕ್ಕೆ ಆಗುತ್ತಾ. ನಮ್ಮ ಜೊತೆ ಸಣ್ಣಪುಟ್ಟ ಸಂಘಗಳು ಕೈ ಜೋಡಿಸೋಕೆ ಬಂದ್ರೆ ಚರ್ಚೆ ಮಾಡ್ತೇವೆ. ಸುಮಾರು 40 ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ನಿಖಿಲ್ ಕುಮಾರಸ್ವಾಮಿಗೆ ಹೇಳಿದ್ದೇವೆ. ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಇನ್ನು ತೀರ್ಮಾನವಾಗಿಲ್ಲ. ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಆಗ್ತಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಚೇತರಿಕೆ ಸಿಕ್ಕಿದೆ. ಮುಂಬರುವ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ ಅಂತ ಸ್ಪಷ್ಟಪಡಿಸಿದ್ದಾರೆ. 

ರಾಜ್ಯದಲ್ಲಿ ಪೇ ಸಿಎಂ ಎಂದು ಚರ್ಚೆ ಆಗ್ತಿದೆ. ಇದು ನಮ್ಮ ರಾಜ್ಯದ ಜನತೆಗೆ ಅವಶ್ಯಕತೆ ಇಲ್ಲ. 17 ಸಾವಿರ ಕೋಟಿ ವೆಚ್ಚದ ಮನೆ ನಷ್ಟವಾಗಿದೆ. ರೈತರಿಗೆ ಪರಿಹಾರ, ಬೆಳೆ ನಾಶದ ಬಗ್ಗೆ ಗಮನಹರಿಸಬೇಕಾಗಿದೆ. ಪೇಸಿಎಂ ಕಟ್ಟಿಕೊಂಡು ನಮಗೆ ಆಗಬೇಕಾಗಿರೋದು ಏನು. ಇತ್ತ ಕಾಂಗ್ರೆಸ್ ನವರು ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ. ಈಗೇನು ಭಾರತ ಒಡೆದು ಹೋಗಿದಿಯಾ ಹಾಗಿದ್ರೆ. ಇದು ಕಾಂಗ್ರೆಸ್ ನ ಒಗ್ಗೂಡಿಸುವ ಕಾರ್ಯಕ್ರಮ. ಅವರದು ಭಾರತ ಜೋಡೋ ಅಲ್ಲ, ಇದು ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಅಂತ ವ್ಯಂಗ್ಯವಾಡಿದರು.
 

click me!