ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ. ಪರದೇಶಿಗಳಂತೆ ದಿನಕೊಂದು ಊರು ಅಡ್ಡಾಡುತ್ತಿರುವ ಗಿರಾಕಿಗಳಿಗೆ ಉತ್ತರ ಕೊಡಲ್ಲ ಎಂದ ರಾಮುಲು
ಗದಗ(ನ.04): ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಬಿ ಶ್ರೀರಾಮುಲು ಸವಾಲ್ ಜವಾಬ್ ಮತ್ತೆ ಮುಂದುವರೆದಿದೆ. ಇಂದು(ಶುಕ್ರವಾರ) ಗದಗನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೇ ಏಕ ವಚನದಲ್ಲೇ ರಾಮುಲು ಟಾಂಗ್ ನೀಡಿದ್ದಾರೆ.
ಮಾತ್ನಾಡುವವರನ್ನ ಬೈದು ಸುಮ್ಮನಾಗಿಸೋದು ಸಿದ್ದು ಮನಸ್ಥಿತಿ. ಹೀಗಾಗಿ ಕಥೆ ಸೃಷ್ಟಿ ಮಾಡಿಕೊಂಡು ಮಾಧ್ಯಮದ ಮುಂದೆ ಬಂದು ಬೈಯುತ್ತಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ. ಬಿ. ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಉತ್ತರಿಸಿ. ನಿನ್ನ ಕ್ಷೇತ್ರ ಯಾವುದು ಅಂತಾ ಸ್ಪಷ್ಟಮಾಡು ಅಂತಾ ಏಕ ವಚನದಲ್ಲೇ ಮರುಪ್ರಶ್ನಿಸಿ, ಆಮೇಲೆ ನನ್ನ ಬಗ್ಗೆ ಮಾತ್ನಾಡು ಎಂದು ಮರುಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ. ಪರದೇಶಿಗಳಂತೆ ದಿನಕೊಂದು ಊರು ಅಡ್ಡಾಡುತ್ತಿರುವ ಗಿರಾಕಿಗಳಿಗೆ ಉತ್ತರ ಕೊಡಲ್ಲ ಎಂದ್ರು..
undefined
ಸಿದ್ದರಾಮಯ್ಯಗೆ ನಮ್ಮ ಸಮುದಾಯದ ಬಗ್ಗೆ ಭಯ ಶುರುವಾಗಿದೆ: ಶ್ರೀರಾಮುಲು
ಅವರು ಸಿಎಂ ಆಗಿದ್ದಾಗಲೇ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ರು. ಕಾಂಗ್ರೆಸ್ ಎಷ್ಟು ಕ್ಷೇತ್ರದಲ್ಲಿ ಗೆದ್ದಿತು.. ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆದ್ದರು. ಬಾದಾಮಿಗೆ ಬಂದು ಬಿಬಿ ಚಿಮ್ಮನಕಟ್ಟಿಯವರನ್ನ ಮುಗಿಸಿದ. ಕಾಂಗ್ರೆಸ್ ಪಕ್ಷದಲ್ಲಿ ಎಸ್. ಆರ್. ಪಾಟೀಲ, ಜಿ. ಪರಮೇಶ್ವರ ಅವರನ್ನ ಮುಗಿಸಿದ. ಡಿಕೆ ಶಿವಕುಮಾರ್ ಅವರನ್ನ ಮುಗಿಸಬೇಕೆಂದು ಹೊರಟಿದ್ದಾನೆ ಎಂದು ಕಾಲೆಳೆದರು..
ಸಿದ್ದರಾಮಯ್ಯ ಕಾಂಗ್ರೆಸ್ ಗಿರಾಕಿನಾ..?
ರಾಮುಲು ಆರ್‌ಎಸ್‌ಎಸ್ ಗಿರಾಕಿನಾ ಎಂದಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವರು, ನನ್ನ ಬಗ್ಗೆ ಮಾತ್ನಾಡುವ ಸಿದ್ದರಾಮಯ್ಯ ಕಾಂಗ್ರೆಸ್ ಗಿರಾಕಿನಾ..? ಎಂದು ಪ್ರಶ್ನಿಸಿದ್ರು.. ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇದ್ದು ಬಂದವರು. ಕಾಂಗ್ರೆಸ್ ವಿರುದ್ಧ ಕೆಟ್ಟದಾಗಿ ಮಾತ್ನಾಡಿದವರು. ನಂತ್ರ ಕಾಂಗ್ರೆಸ್ ಸೇರಿ ಬ್ಲ್ಯಾಕ್ ಮೇಲ್ ಮಾಡ್ತಾ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಆದ್ರು ಅಂತ ಹೇಳಿದ್ದಾರೆ.
ಅಹಿಂದ ನಾಯಕನ ಅರ್ಹತೆ ಸಿದ್ದರಾಮಯ್ಯಗೆ ಇಲ್ಲ: ಸಚಿವ ಶ್ರೀರಾಮುಲು
ಈ ಹಿಂದೆ ರಾಮುಲು ಕಾಂಗ್ರೆಸ್ ನಲ್ಲಿದ್ದವರು ಎಂಬ ಸಿದ್ದು ಮಾತಿಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರಿಗೆ ಹಿಂದೆ ಏನಾಗಿತ್ತು ಅನ್ನೋ ಬಗ್ಗೆ ಗೊತ್ತಿಲ್ಲ. ಪುರಸಭೆಯಿಂದ ಆಗ ಐವರು ಗೆದ್ದಿದ್ದೆವು. ಆಗ ಕಾಂಗ್ರೆಸ್ ಟಿಕೆಟ್ ಕೇಳುವವರಿರಲಿಲ್ಲ. ನಂತ್ರ 1999ರಲ್ಲಿ ಸುಷ್ಮಾ ಸ್ವರಾಜ್ ಅವರು ನನ್ನ ಬಳ್ಳಾರಿ ನಗರ ಅಭ್ಯರ್ಥಿ ಮಾಡಿದ್ರು.. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರಿದಹಾಗೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾರೆ. ನಾನು ಹೋರಾಟದ ಹಿನ್ನೆಲೆಯಿಂದ ಬೆಳೆದವನು ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಂಡೇ, ಮಂಡೇ ವಕೀಲಿ ಮಾಡಿಕೊಂಡವ. ಕೋರ್ಟ್‌ಗೆ ಹೋದವರಲ್ಲ. ರಾಜಿ ಸಂದಾನ ಮಾಡುವ ವಕೀಲ. ನಾನು ಅವನ ಪ್ರಶ್ನೆಗೆ ಉತ್ತರ ಕೊಡಲ್ಲ ಅಂತಾ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.