ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ: ಸಂಸದ ಶ್ರೀನಿವಾಸ್ ಪ್ರಸಾದ್‌

By Kannadaprabha News  |  First Published Oct 3, 2023, 4:23 AM IST

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯವರು ನಗರದ ಪುರಭವನದ ಬಳಿ ಸೋಮವಾರ ಸಹ ಪ್ರತಿಭಟಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾವೇರಿ ನಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಮೈಸೂರು (ಅ.03): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯವರು ನಗರದ ಪುರಭವನದ ಬಳಿ ಸೋಮವಾರ ಸಹ ಪ್ರತಿಭಟಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾವೇರಿ ನಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಕಾವೇರಿ ಹೋರಾಟವು ಇಂದಿನಿಂದಲ್ಲ. ಬ್ರಿಟಿಷರ ಕಾಲದಿಂದಲೂ ಸಹ ಈ ಹೋರಾಟ ನಡೆಯುತ್ತಿದೆ. ನಾನು ಸಂಸದ ಆದಾಗಿದ್ದನಿಂದಲೂ ಸಂಸತ್ತು ಭವನದಲ್ಲಿ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನನ್ನ 50 ವರ್ಷ ರಾಜಕಾರಣದಲ್ಲಿ ಅನೇಕ ಪ್ರಧಾನಮಂತ್ರಿಗಳನ್ನು ನೋಡಿದ್ದೇನೆ ಎಂದು ಹೇಳಿದರು.

ನಾನು ಮತ್ತು ದೇವೇಗೌಡರು ಸಹಪಾಠಿಗಳು. ಕಾವೇರಿ ಪ್ರಾಧಿಕಾರ ಬೇಡವೆಂದು ಹೋರಾಟ ಸಹ ಮಾಡಿದ್ದೇವೆ. ಆದರೆ, ಅಂದಿನ ಕೇಂದ್ರ ಸರ್ಕಾರವು ತಮಿಳುನಾಡು ಬೆಂಬಲ ಬೇಕಾಗಿರುವುದರಿಂದ ಈ ಪ್ರಾಧಿಕಾರವನ್ನು ರಚನೆ ಮಾಡಿದರು. ನಾವು ಇದಕ್ಕೆ ವಿರೋಧ ಮಾಡಿ, ಇದರಿಂದ ನಮಗೆ ಯಾವುದೇ ರೀತಿ ಪ್ರಯೋಜನ ಆಗಲ್ಲ. ಕಾವೇರಿ ಪ್ರಾಧಿಕಾರದ ನಮಗೆ ಬೇಡವೆಂದು ಸಹ ಕೇಳಿದರೂ ಮಾಡಿಬಿಟ್ಟರು. ಈಗ ಕರ್ನಾಟಕಕ್ಕೆ ತೊಂದರೆಯಾಗಿದೆ ಎಂದರು. ಸುಪ್ರೀಂ ಕೋರ್ಟ್ ತಮಿಳುನಾಡು ಪರವಿದೆ. ಆದರೆ ನಾವು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಯಾವ ಪಕ್ಷ ಬಂದರೂ ದಕ್ಷಿಣ ಭಾರತದಲ್ಲಿ ಮತ ಬೇಕು ಎಂದು ತಮಿಳುನಾಡಿಗೆ ಉಪಯೋಗ ಮಾಡಿಕೊಡುತ್ತಾರೆ. 

Latest Videos

undefined

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಹೀಗಾಗಿ, ಮೇಕೆದಾಟು ಯೋಜನೆ ಬಹಳ ಅವಶ್ಯಕತೆ ಇದೆ. ಈಗಿನ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಟ್ಟು, ಈ ಯೋಜನೆ ಪ್ರಾರಂಭ ಮಾಡಬೇಕು. ನಾವು ಸಹ ಪ್ರಧಾನಮಂತ್ರಿಯವರಿಗೆ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು. ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಮೋಹನ್ ಕುಮಾರ್ ಗೌಡ, ಸುರೇಶ್ ಗೌಡ, ಎಸ್. ಬಾಲಕೃಷ್ಣ, ತೇಜಸ್ ಲೋಕೇಶ್ ಗೌಡ, ಸುಷ್ಮಾ, ಮಂಜುಳಾ, ಗೋವಿಂದರಾಜು, ಮಹದೇವಸ್ವಾಮಿ, ಸಿದ್ದಪ್ಪ, ಸುನಿಲ್, ರವಿ ಮೊದಲಾದವರು ಇದ್ದರು.

click me!