Meghalaya Politics : ಕಾಂಗ್ರೆಸ್‌ಗೆ ಬಿಗ್ ಶಾಕ್‌ - ರಾತ್ರೊ ರಾತ್ರಿ ಪಕ್ಷ ತೊರೆದ 12 ಶಾಸಕರು

By Kannadaprabha NewsFirst Published Nov 25, 2021, 10:26 AM IST
Highlights
  • ಕಾಂಗ್ರೆಸ್ ರಾಜಕೀಯದಲ್ಲೊಂದು  ಮಹತ್ವದ ಬೆಳವಣಿಗೆ 
  • ಮೇಘಾಲಯದ 17 ಕಾಂಗ್ರೆಸ್‌ ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಸೇರಿ 12 ಶಾಸಕರು ಟಿಎಂಸಿಗೆ

ಶಿಲ್ಲಾಂಗ್‌ (ನ.25): ಮಹತ್ವದ ಬೆಳವಣಿಗೆಯೊಂದರಲ್ಲಿ ಮೇಘಾಲಯದ (Meghalaya) 17 ಕಾಂಗ್ರೆಸ್‌ (congress) ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ (Mukhul Sangma) ಸೇರಿ 12 ಶಾಸಕರು ಬುಧವಾರ ರಾತ್ರೋ-ರಾತ್ರಿ ಮಮತಾ ಬ್ಯಾನರ್ಜಿ (Mamatha Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ (TMC) ಸೇರ್ಪಡೆಯಾಗಿದ್ದಾರೆ. ಇದರಿಂದ, ಮೇಘಾಲಯ ವಿಧಾನ ಸಭೆಯಲ್ಲಿ (Assembly)  ಒಂದೂ ಸ್ಥಾನ ಹೊಂದಿರದಿದ್ದ ಟಿಎಂಸಿ (TMC) ದಿಢೀರನೆ ಅಧಿಕೃತ ವಿಪಕ್ಷವಾಗಿ ಹೊರಹೊಮ್ಮಿದೆ.ಈ ನಾಯಕರು ಟಿಎಂಸಿ ಸೇರ್ಪಡೆ ಕುರಿತು ಗುರುವಾರ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ. 17ರ ಪೈಕಿ 12 ಶಾಸಕರು ಅಂದರೆ ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ ಇವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದು.

ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಮನಸ್ಥಿತಿಯಲ್ಲಿದ್ದ ವಿಪಕ್ಷ ನಾಯಕ ಸಂಗ್ಮಾ ಅವರಿಗೆ ಕಾಂಗ್ರೆಸ್‌ (Congress) ನಾಯಕತ್ವದ ವಿರುದ್ಧ ಅಸಮಾಧಾನವಿತ್ತು. ಹೀಗಾಗಿ ಅವರು ಪಕ್ಷ ತೊರೆದಿದ್ದಾರೆ.

ಸದ್ಯ ಮೇಘಾಲಯದಲ್ಲಿ (Meghalaya) ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (NPP), ಎನ್‌ಡಿಎ (NDA) ಮಿತ್ರಪಕ್ಷಗಳ ಜೊತೆಗೂಡಿ ಸರ್ಕಾರ ನಡೆಸುತ್ತಿದೆ. ಎನ್‌ಪಿಪಿಯ (NPP) ಕಾನ್ರಾಡ್‌ ಸಂಗ್ಮಾ ಮುಖ್ಯ ಮಂತ್ರಿಯಾಗಿದ್ದಾರೆ. 2023ರಲ್ಲಿ 60 ಸ್ಥಾನಬಲ ಹೊಂದಿರುವ ರಾಜ್ಯ ವಿಧಾನಸಭೆಗೆ ಮುಂದಿನ ಚುನಾವಣೆ (Election) ನಡೆಯಬೇಕಿದೆ.

ಟಿಎಂಸಿ ಸೇರಿದ ಕಾಂಗ್ರೆಸ್ ನಾಯಕ :  ಪಶ್ಚಿಮ ಬಂಗಾಳ  ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮೂಲಕ ಮತ್ತೆ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್(Trinamool Congress) ಪಕ್ಷದತ್ತ ಇತರ ಪಕ್ಷದ ನಾಯಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್(Congress) ನಾಯಕರು ಒಬ್ಬರ ಹಿಂದೊಬ್ಬರು ಟಿಎಂಸಿ ಸೇರಿಕೊಳ್ಳುತ್ತಿದ್ದಾರೆ. ಇದೀಗ ಕೀರ್ತಿ ಅಜಾದ್ ಸರದಿ. ಕಳೆದ ಹಲವು ತಿಂಗಳಿನಿಂದ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ಕೀರ್ತಿ ಅಜಾದ್ ಇಂದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ನವದೆಹಲಿಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಕೀರ್ತಿ ಅಜಾದ್(Kirti Azad) ಟಿಎಂಸಿ ಸೇರಿಕೊಂಡಿದ್ದಾರೆ. ಕೀರ್ತಿ ಅಜಾದ್ ಜೊತೆ ಜೆಡಿಯು ಪಕ್ಷದಿಂದ ಉಚ್ಚಾಟಿತ ನಾಯಕ ಪವನ್ ವರ್ಮಾ(Pavan Varma) ಕೂಡ ಟಿಎಂಸಿ ಸೇರಿಕೊಂಡಿದ್ದಾರೆ. 2019ರಲ್ಲಿ ಕಾಂಗ್ರೆಸ್ ತೊರೆದಿದ್ದ ಅಶೋಕ್ ತನ್ವರ್ ಕೂಜ ಇವರೊಂದಿಗೆ ಟಿಎಂಸಿ(TMC) ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ತೀವ್ರ ಸವಾಲೊಡ್ಡಲು ತಯಾರಿ ನಡೆಸುತ್ತಿದ್ದಾರೆ. 

ಅಸ್ಸಾಂ ಕಾಂಗ್ರೆಸ್ ನಾಯಕ ಸುಶ್ಮಿತಾ ದೇವ್ ಇತ್ತೀಚಿಗೆ ಟಿಎಂಸಿ ಸೇರಿಕೊಂಡಿದ್ದರು. ಗೋವಾದ ಕಾಂಗ್ರೆಸ್ ಮಾಡಿ ನಾಯಕ ಲಯಿಝ್ಹಿನೋ ಫಲೈರೋ ಟಿಎಂಸಿ ಸೇರಿಕೊಂಡಿದ್ದರು. ಇದೀಗ ಕೀರ್ತಿ ಅಜಾದ್ ಕೂಡ ಟಿಎಂಸಿ ಸೇರಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಟಿಎಂಸಿ ಸೇರಿಕೊಳ್ಳುತ್ತಿದ್ದಾರೆ.  

ಪಶ್ಚಿಮ ಬಂಗಾಳ(West Bengal) ಸೇರಿದಂತೆ ಅಂತಾರಾಷ್ಟ್ರೀಯ ಗಡಿ ಹಾದುಹೋಗುವ ರಾಜ್ಯಗಳಲ್ಲಿ BSF ಪಡೆಯನ್ನು ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಈ ನಿರ್ಧಾರ ಹಾಗೂ ತ್ರಿಪುರಾ ಹಿಂಸಾಚಾರ ಕುರಿತು ಕೆಲ ಮಹತ್ವದ ಮಾತುಕತೆಗಾಗಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಚಳಿಗಾಲದ ಅಧಿವೇಶನಕ್ಕೂ ಮುನ್ನ  ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi) ಭೇಟಿಯಾಗಿ ಮಹತ್ವದ ಮಾತುಕತೆ ನಡಡೆಸಲಿದ್ದಾರೆ. ಹೀಗಾಗಿ ದೆಹಲಿಯಲ್ಲಿರುವ ಮಮತಾ ಬ್ಯಾನರ್ಜಿ ಕೀರ್ತಿ ಅಜಾದ್ ಸೇರಿದಂತೆ ಮೂವರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಬಿಹಾರ(Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ ಸಲಹೆಗಾರಾಗಿದ್ದ ಪವನ್ ಪರ್ಮಾರನ್ನು ಜೆಡಿಯು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ಉಚ್ಚಾಟನೆ ಮಾಡಿತ್ತು. ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ದೇಶದಲ್ಲಿ ಮಮತಾ ಬ್ಯಾನರ್ಜಿ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮಮತಾ ಬ್ಯಾನರ್ಜಿ ನಾಯಕತ್ವ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ. 2024ರ ಲೋಕಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದು ಪವನ್ ವರ್ಮಾ ಹೇಳಿದ್ದಾರೆ.

ಪವನ್ ವರ್ಮಾರನ್ನು ಪಕ್ಷಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಪವನ್ ವರ್ಮಾ ಅನುಭವ, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನೆರವಾಗಲಿದೆ ಎಂದು ಟಿಎಂಸಿ ಹೇಳಿದೆ. ಇತ್ತ ಬಿಹಾರದಿಂದ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಕೀರ್ತಿ ಅಜಾದ್ ಇದೀಗ ಟಿಎಂಸಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ.ನಾನು ಕ್ರೀಡಾಪಟು, ನನಗೆ ಧರ್ಮ ಮುಖ್ಯವಲ್ಲ. ಉತ್ತಮ ಸಮಾಜಕ್ಕಾಗಿ ಹೋರಾಟುತ್ತೇನೆ ಎಂದು  ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಹೇಳಿದ್ದಾರೆ.

click me!