Karnataka Council Election : ಬಿಜೆಪಿ ಜೊತೆ ಜೆಡಿಎಸ್‌ ಮ್ಯಾಚ್‌ ಫಿಕ್ಸಿಂಗ್‌

By Kannadaprabha News  |  First Published Nov 25, 2021, 7:38 AM IST
  • ಜೆಡಿಎಸ್‌ ಬಿಜೆಪಿ ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಸಾಧ್ಯತೆ ಇದೆ 
  • ಬೆಂಗಳೂರು ಚಾಮರಾಜ ಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಆರೋಪ

 ಮೈಸೂರು (ನ.25):  ಜೆಡಿಎಸ್‌ (JDS)  ಬಿಜೆಪಿ (BJP) ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ, ಬೆಂಗಳೂರು (Bengaluru) ಚಾಮರಾಜ ಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಆರೋಪಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ 25 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಬೇಕಿತ್ತು. ಕೇವಲ 7 ಸ್ಥಾನಕ್ಕೆ ಹಾಕಿರುವುದು ಅನುಮಾನಾಸ್ಪದವಾಗಿ ಕಾಣುತ್ತಿದೆ. ಅವರಿಗೆ ಅಭ್ಯರ್ಥಿಗಳು ಇಲ್ಲವಾ? ಅಭ್ಯರ್ಥಿ ಇಲ್ಲದಿದ್ದರೆ ಇಲ್ಲ ಅಂತ ಸ್ಪಷ್ಟಪಡಿಸಲಿ ಎಂದರು. ಬಿಜೆಪಿಗೆ (BJP) ಲಾಭ ಮಾಡಿಕೊಡಲು ಜೆಡಿಎಸ್‌ ಮಾಡಿರುವ ತಂತ್ರ ಅಂತ ಅನಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸಿಂಗಲ… ಡಿಜಿಟ್‌ ಅಷ್ಟೆಗೆಲ್ಲುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.

ಸಿದ್ದರಾಮಯ್ಯ ( ಜೊತೆ ಸಾಯುವವರೆಗೂ ಸಂಬಂಧ ಕೆಡದು: ನನ್ನ ಸಿದ್ದರಾಮಯ್ಯ ಸಂಬಂಧ ಸಾಯುವವರೆಗೂ ಕೆಡುವುದಿಲ್ಲ. ಕೆಡಲು ಸಾಧ್ಯವೂ ಇಲ್ಲ. ಅಂದು ಸಿದ್ದರಾಮಯ್ಯ ಭಾಷಣಕ್ಕೆ ನಮ್ಮ ಬೆಂಬಲಿಗರು ಅಡ್ಡಿ ಮಾಡಿಲ್ಲ ಎಂದು ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಸ್ಪಷ್ಟಪಡಿಸಿದರು. ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಸ್ಮರಣಾ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣ 5 ನಿಮಿಷ ಮಾತನಾಡಿ ಸಿದ್ದರಾಮಯ್ಯ ಹೋಗಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ನನ್ನ ಅಭಿಮಾನಿಗಳು ಜೈಕಾರ ಕೂಗಿದ್ದು ಕಂಡು ಸಿದ್ದರಾಮಯ್ಯ (Siddaramaiah) ಖುಷಿಯಾಗಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೊಟ್ಟೆಕಿಚ್ವು ಪಟ್ಟುಕೊಳ್ಳುವ ಮನುಷ್ಯ ಅಲ್ಲ. ಅವರಿಗೆ ಜೊತೆಗಾರರು ಬೆಳೆದರೆ ಸಂತೋಷ ಇದೆ ಎಂದರು.

Tap to resize

Latest Videos

undefined

ಮಳೆ ಹಾನಿ- ನೆಪಮಾತಕ್ಕೆ ಪರಿಶೀಲನೆ: ಬೆಂಗಳೂರಿನಲ್ಲಿ (Bengaluru) ಮಳೆ ಅವಾಂತರದ ಬಗ್ಗೆ ಸಿಎಂ ನೆಪಮಾತ್ರಕ್ಕೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಜನರ ಸಂಕಷ್ಟವನ್ನ ಕೇಳಿಲ್ಲ. ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಘೋಷಣೆ ಮಾಡಿಲ್ಲ. ಇದರಿಂದ ಯಾವ ಪ್ರಯೋಜನ ಇಲ್ಲ ಅವರು ಟೀಕಿಸಿದರು.

ವೇದಿಕೆ ತೊರೆದಿದ್ದ ಸಿದ್ದರಾಮಯ್ಯ : 

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಗೈರುಹಾಜರಾಗಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌(Zameer Ahmed Khan) ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅವರ ಬೆಂಬಲಿಗರು ನಿರಂತರ ಘೋಷಣೆ ಕೂಗುತ್ತಾ ಅಶಿಸ್ತು ತೋರಿದ್ದಾರೆ. ಇದರಿಂದ ಬೇಸರಗೊಂಡ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(siddaramaiah) ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ತೆರಳಿದ ಘಟನೆ ಮಂಗಳವಾರ ನಡೆಯಿತು.

ಅಲ್ಲದೆ, ಜಮೀರ್‌ ಬೆಂಬಲಿಗರ ಅಶಿಸ್ತಿನ ವರ್ತನೆಗೆ ಕೆಂಡಾಮಂಡಲರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮರ್‌(DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಷಣ ಮಾಡಲೂ ಬಿಡದೆ ನೀವು ತೋರುತ್ತಿರುವ ಅಶಿಸ್ತನ್ನು ಸಹಿಸಲಾಗದು. ಘೋಷಣೆ ನಿಲ್ಲಸದಿದ್ದರೆ ನಿಮ್ಮನ್ನೆಲ್ಲಾ ಪಕ್ಷದಿಂದ ಉಚ್ಚಾಟಿಸಬೇಕಾಗುತ್ತದೆ. ನೀವೆಲ್ಲಾ ಕಾಂಗ್ರೆಸ್‌(Congress) ದ್ರೋಹಿಗಳು, ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡುವುದನ್ನು ಕಲಿಯಿರಿ ಎಂದು ಕಟುವಾಗಿಯೇ ಎಚ್ಚರಿಸಿದರು.

ದಲಿತ ಸಿಎಂ ಕಿಚ್ಚು ಹೆಚ್ಚಿಸಿದ ಜಿ ಪರಮೇಶ್ವರ್, ಸಿದ್ದರಾಮಯ್ಯಗೆ ಟಾಂಗ್

ಟ್ರಾಫಿಕ್‌ ಜಾಮ್‌ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಬಂದರು. ಅವರು ಬರುತ್ತಿದ್ದಂತೆ ಕಾರ್ಯಕರ್ತರಿಂದ ಜೋರು ಚಪ್ಪಾಳೆ, ಶಿಳ್ಳೆ ಕೇಳಿಬಂತು. ಇದರ ನಡುವೆಯೇ ಜಮೀರ್‌ ಅಹಮದ್‌ ಖಾನ್‌ ಬೆಂಬಲಿಗರ ಗುಂಪೊಂದು ಜಮೀರ್‌ ಪರ ಘೋಷಣೆ ಕೂಗುತ್ತಾ ಕಾರ್ಯಕ್ರಮಕ್ಕೆ ಜಮೀರ್‌ ಬರಬೇಕೆಂದು ಆಗ್ರಹಿಸತೊಡಗಿತ್ತು.

ಇದರ ನಡುವೆ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರೂ ಜಮೀರ್‌ ಬೆಂಬಲಿಗರು ಘೋಷಣೆ ನಿಲ್ಲಿಸಲಿಲ್ಲ. ಆಗ ಸಿದ್ದರಾಮಯ್ಯ ಅವರು ಘೋಷಣೆ ಕೂಗಿ ಅಶಿಸ್ತು ತೋರಿದವರನ್ನು ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿದರು. ಡಿ.ಕೆ.ಶಿವಕುಮಾರ್‌ ಮಾತನಾಡಿ ನೀವೆಲ್ಲಾ ಈಗ ಸುಮ್ಮನಿರುತ್ತೀರೋ ಇಲ್ಲದಿದ್ದರೆ ಪಕ್ಷದಿಂದ ಉಚ್ಛಾಟಿಸುವುದಾಗಿ ಎಚ್ಚರಿಸಿದರು. ಆದರೂ ಅವರು ಸುಮ್ಮನಾಗಲಿಲ್ಲ. ಇದರಿಂದ ಸಿದ್ದು ಬೇಸರಗೊಂಡು ತಮ್ಮ ಭಾಷಣವನ್ನೇ ಮೊಟಕುಗೊಳಿಸಿ ಅಲ್ಲಿಂದ ಹೊರಟುಬಿಟ್ಟರು. ಬಳಿಕ ಜಮೀರ್‌ ಬೆಂಬಲಿಗರು ಘೋಷಣೆ ನಿಲ್ಲಿಸಿದರು. ಈ ವೇಳೆ ಸಿಟ್ಟುಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್‌, ನೀವೆಲ್ಲಾ ಕಾಂಗ್ರೆಸ್‌ ದ್ರೋಹಿಗಳು ಎಂದು ಹೇಳಿದರು.

click me!