ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಸಾವನ್ನಪ್ಪಿದ್ದು, ಇವರ ಸಾವಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಲಾಗಿದೆ.
ಬೆಂಗಳೂರು, (ಅ.26): ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಮಹಾಘಟಕದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಕಾಯ್ದೆಗಳನ್ನು ವಿರೋಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸಿಗರು ಕೆಲವು ಬಾಡಿಗೆ ಭಂಟರನ್ನು ಕರೆತಂದರು. ಮಾರುತಿ ಮಾನ್ಪಡೆ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರ ಪರಿಣಾಮ ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದರು. ಇದಕ್ಕೆ ಡಿ.ಕೆ.ಶಿವಕುಮಾರ್ ಅವರೇ ಕಾರಣಕರ್ತರು ಎಂದು ದೂರಿದರು.
undefined
ರಾಜ್ಯದ ಮತ್ತೋರ್ವ ಹೋರಾಟಗಾರನನ್ನು ಬಲಿ ಪಡೆಯಿತು ಮಹಾಮಾರಿ
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ರೈತರನ್ನು ಬೀದಿಗೆ ತಂದು ನಿಲ್ಲಿಸಿದರು. ಇದರಿಂದ ಕೊರೋನಾ ಸೋಂಕು ಹಬ್ಬಿತು ಎಂದು ಕಿಡಿಕಾರಿದರು.
ಸೋಂಕು ಹಬ್ಬಲು ಕಾರಣ ಯಾರು ? ರೈತರನ್ನು ಬೀದಿಯಲ್ಲೇ ಬಿಡಲು ನಿಮಗೆ ಅಕಾರ ಕೊಟ್ಟವರು ಯಾರು ? ಇಂದು ಎಪಿಎಂಸಿಗಳು ರೈತರ ಹಿಡಿತದಲ್ಲಿ ಇಲ್ಲ ಎಂಬ ಕಟು ಸತ್ಯ ನಿಮಗೆ ಅರ್ಥವಾಗಿಲ್ಲವೆ ? ಬಿಜೆಪಿ ಹಾಗೂ ಮೋದಿಯನ್ನು ಟೀಕಿಸಲು ಹೋರಾಟ ಮಾಡಬೇಕಾಗಿತ್ತೇ ಎಂದು ಸದಾನಂದಗೌಡರು ಪ್ರಶ್ನಿಸಿದರು.
ಸುಮ್ಮನಿದ್ದ ರೈತರನ್ನು ಹಳ್ಳಿಯಿಂದ ಕರೆತಂದಿದ್ದೇ ಕಾಂಗ್ರೆಸಿಗರು. ರೈತರು ಬರುವುದಿಲ್ಲ ಎಂದಾಗ ಬಾಡಿಗೆಗೆ ಕರೆತರಲಾಯಿತು. ಪ್ರತಿಭಟನೆ ನಡೆಸಿ ಕೊರೋನಾ ಸೋಂಕು ಹಬ್ಬಿಸಿದಿರಿ. ಯಾವ ಪುರುಷಾರ್ಥಕ್ಕೆ ಹೋರಾಟ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಪ್ರಸ್ತುತ ನಡೆಯುತ್ತಿರುವ ಎರಡು ವಿಧಾನಸಭೆ ಹಾಗೂ ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಸುವುದರಲ್ಲಿ ಯಾವ ಸಂಶಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದರು.