ರಾಜ್ಯದಲ್ಲಿ ಇದೀಗ ಇಬ್ಬರು ಕೈ ನಾಯಕರು ಬಿಜೆಪಿ ಸೇರುವ ವಿಚಾರ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿದರು
ಹುಬ್ಬಳ್ಳಿ (ಅ.26): ರಾಹುಲ್ ಗಾಂಧಿ ಚೀನಾದ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ. ಅವರ ಪಕ್ಷದ ನಾಯಕರೇ ಅವರ ಹೇಳಿಕೆ ಕೇಳಿ ನಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಕ್ಸಚೀನಾ ಮೊದಲು ನಮ್ಮ ಬಾರ್ಡರ್ ಆಗಿರಲಿಲ್ಲ, ಕಾಂಗ್ರೆಸ್ ಆಡಳಿತದಲ್ಲಿ ರಾಜೀವ್ ಗಾಂಧಿ ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿದ್ದರು. ಕಾಂಗ್ರೆಸ್ ಗೆ ಸಂವಿಧಾನದ ಮೂಲ ಆಶಯದ ಮೇಲೆ ನಂಬಿಕೆಯಿಲ್ಲ. ಕಾಂಗ್ರೆಸ್ ಸತತವಾಗಿ ಪ್ರಜಾಪ್ರಭುತ್ವದ ಅವಹೇಳನ ಮಾಡುವ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿದೆ ಎಂದರು.
undefined
ನಾನು ಯಾರನ್ನೂ ಸುಮ್ಮನೇ ಕೆಣಕಲ್ಲ : ಎಚ್‌ಡಿಕೆಗೆ ಉತ್ತರ ಕೊಟ್ಟ ಸಿದ್ದರಾಮಯ್ಯ .
ಸಂಸತ್ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಮೇಲೆ ಹಲ್ಲೆಮಾಡಿ ತಡೆಯುವ ಯತ್ನ ನಡೆಯಿತು. ಕಾಂಗ್ರೆಸ್ ದೀರ್ಘ ಕಾಲ ಆಡಳಿತ ನಡೆಸಿದವರು ಯಾವುದೇ ಬದಲಾವಣೆ ತರಲು ಆಗಲಿಲ್ಲ. ಕಾಂಗ್ರೆಸ್ ಗೆ ಅಧಿಕಾರ ಇಲ್ಲದೆ ಬದುಕುವುದು ಗೊತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದರು.
ಬಿಜೆಪಿ ಗೆಲುವು : ನಾಲ್ಕು ವಿಧಾನ ಪರಿಷತ್ ಮತ್ತು ಉಪ ಚುನಾವಣೆಯಲ್ಲಿ ಬಹುಮತದ ಮೂಲಕ ಬಿಜೆಪಿ ಗೆದ್ದು ಬರಲಿದೆ. ಬಿಹಾರದಲ್ಲಿಯೂ ಕೂಡ 3/4 ಬಹುಮತದಲ್ಲಿ ಎನ್ ಡಿಎ ಗೆದ್ದು ಬರುತ್ತದೆ ಎಮದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಎಂ.ಬಿ ಪಾಟೀಲ್ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ.
ಜಗದೀಶ್ ಶೆಟ್ಟರ್ ಹಾಗೂ ನನ್ನ ಜೊತೆ ಯಾವುದೇ ನಾಯಕರು ಮಾತನಾಡಿಲ್ಲ. ನಮ್ಮಜೊತೆ ಚರ್ಚಿಸಿದರೆ ಹೇಗೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲು ಸಾದ್ಯ? ನಾನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಂತೋಷ ಜೊತೆಗೆ ಚರ್ಚಿಸಿದ್ದೇನೆ.ಆ ಕುರಿತು ಯಾವುದೇ ವಿಚಾರಗಳು ಚರ್ಚೆ ಗೆ ಬಂದಿಲ್ಲ ಎಂದು ಜೋಶಿ ಹೇಳಿದರು.