Chamarajanagar: ಕುಟುಂಬ ರಾಜಕಾರಣದಲ್ಲಿ ಗೆದ್ದು ಬೀಗಿದ ಶಾಸಕ ಮಂಜುನಾಥ್‌

By Kannadaprabha News  |  First Published May 22, 2023, 10:03 PM IST

ಹನೂರು ಕ್ಷೇತ್ರದಲ್ಲಿ 40ವರ್ಷಗಳ ಬಳಿಕ ಕುಟುಂಬ ರಾಜಕಾರಣ ಮೀರಿ ಜನರ ಪ್ರೀತಿ ಗಳಿಸಿ ಗೆಲ್ಲುವ ಮೂಲಕ ಮಂಜುನಾಥ್‌ ಅವರು ಹೊಸದೊಂದು ಇತಿಹಾಸ ಸೃಷ್ಠಿಸಿ ಹನೂರು ರಾಜಕಾರಣದಲ್ಲೊಂದು ಮೈಲಿಗಲ್ಲಾಗುವ ಮೂಲಕ ಗಮನ ಸೆಳೆದಿದ್ದಾರೆ.


ಎನ್‌ ನಾಗೇಂದ್ರಸ್ವಾಮಿ

ಕೊಳ್ಳೇಗಾಲ (ಮೇ.22): ಹನೂರು ಕ್ಷೇತ್ರದಲ್ಲಿ 40ವರ್ಷಗಳ ಬಳಿಕ ಕುಟುಂಬ ರಾಜಕಾರಣ ಮೀರಿ ಜನರ ಪ್ರೀತಿ ಗಳಿಸಿ ಗೆಲ್ಲುವ ಮೂಲಕ ಮಂಜುನಾಥ್‌ ಅವರು ಹೊಸದೊಂದು ಇತಿಹಾಸ ಸೃಷ್ಠಿಸಿ ಹನೂರು ರಾಜಕಾರಣದಲ್ಲೊಂದು ಮೈಲಿಗಲ್ಲಾಗುವ ಮೂಲಕ ಗಮನ ಸೆಳೆದಿದ್ದಾರೆ. ಮಂಜುನಾಥ್‌, 2018ರ ರಾಜಕಾರಣದಲ್ಲಿ ಹನೂರಿಗೆ ಬಂದದ್ದು, ಅದು ಬಿಜೆಪಿ ಟಿಕೆಟ್‌ ಬಯಸಿ, ಆದರೆ, ಕೊನೆ ಕ್ಷಣದಲ್ಲಿ ದಕ್ಕಿದ್ದು ಜೆಡಿಎಸ್‌ ಟಿಕೆಟ್‌. ಅಲ್ಪ ಸಮಯದಲ್ಲಿಯೇ ಮಂಜುನಾಥ್‌ 44ಸಾವಿರಕ್ಕೂ ಅಧಿಕ ಮತಗಳಿಸಿ ಕುಟುಂಬ ರಾಜಕಾರಣದಲ್ಲೆ ಕ್ಷೇತ್ರದಲ್ಲಿ ಗಮನ ಸೆಳೆದು ಸಾಧನೆ ಮಾಡುತ್ತಿದ್ದಂತೆ ಎಲ್ಲರ ಚಿತ್ತ ಮಂಜುನಾಥ್‌ ಅವರತ್ತ ಬೀರುವಂತಾಗುತ್ತೆ. 

Tap to resize

Latest Videos

undefined

ಅಲ್ಪ ಸಮಯದಲ್ಲಿಯೇ 44ಸಾವಿರಕ್ಕೂ ಅಧಿಕ ಮತವನ್ನು ಮತದಾರರು ನೀಡಿದ್ದಾರೆ. ಸೋತರೂ ನಾನು, ಈ ಬಾರಿ ಅವರ ಸೇವೆಯನ್ನು ಮುಂದುವರೆಸಬೇಕು, ಹಾಗಾದರೆ, ಮತದಾರರು ನನ್ನ ಕೈಬಿಡಲ್ಲ ಎಂಬ ಸದುದ್ದೇಶದಿಂದ ಹನೂರು ಕ್ಷೇತ್ರದತ್ತ ನಾಲ್ಕೈದು ವರ್ಷಗಳ ಕಾಲ ಸೇವೆಯಲ್ಲಿ ತಲ್ಲೀನರಾಗುತ್ತಾರೆ. ಹೊರಗಿನವರು ಮಂಜುನಾಥ್‌ ಎಂಬ ಹಲವರ ಕುಹಕದ ನಡುವೆಯೂ ನಾನು, ನಿಮ್ಮ ಮನೆ ಮಗನು ಎಂಬ ರೀತಿ ವಾರದಲ್ಲಿ ನಾಲ್ಕೈದು ದಿನ ಬಂದು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಗಮನಸೆಳೆದದ್ದೆ ಇಂದು ಶಾಸಕರಾಗುವ ತನಕ ತಲುಪಿದ್ದು ಎಂಬುದು ಕಠೋರ ಸತ್ಯ.

Ramanagara: ಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲೆ ಹೆಚ್ಚಿದ ಜವಾ​ಬ್ದಾ​ರಿ

ರಾಜೂಗೌಡರ ಸೋಲಿಗೆ ಮುನ್ನುಡಿ ಬರೆದ ನಾಗಪ್ಪ: 1983ರಂದು ಶಾಂತಮೂರ್ತಿ ಅವರು ಮಾಜಿ ಸಚಿವ ದಿ. ನಾಗಪ್ಪ ಅವರ ಸಹಕಾರದೊಂದಿಗೆ ಗೆಲುವು ಸಾಧಿಸುತ್ತಾರೆ. ಅಂದು ನಾಗಪ್ಪ ಅವರು ಸ್ಪರ್ಧಿಸದೆ ಇವರಿಗೆ ಬೆಂಬಲ ಸೂಚಿಸಿ ಕ್ಷೇತ್ರಾದ್ಯಂತ ಪ್ರಚಾರದಲ್ಲಿ ಕೈಗೊಳ್ಳುತ್ತಾರೆ. ಅಂದು ರಾಜೂಗೌಡರ ಸೋಲಿಸುವ ತಂತ್ರಗಾರಿಕೆಯೂ ನಡೆಯುತ್ತೆ. ಹಾಗಾಗಿ, ಅಂದು ನಾಗಪ್ಪ ಹಾಗೂ ಇನ್ನಿತರರ ಸಹಕಾರದೊಂದಿಗೆ ಕ್ಷೇತ್ರದವರೆ ಅಲ್ಲದ ಶಾಂತಮೂರ್ತಿ ಅವರು ಕಾಂಗ್ರೆಸ್‌ ನಿಂದ ಸ್ಪರ್ಧಿಸಿ 31,357ಮತಗಳಿಸಿ ಗೆಲುವು ಸಾಧಿಸುತ್ತಾರೆ. ಅದೇ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ರಾಜೂಗೌಡರು ಕೆವಲ 29,951ಮತಗಳಿಸಿ ಸೋಲುತ್ತಾರೆ. ಇದಾದ ಬಳಿಕ 4ದಶಕಗಳಲ್ಲಿ ಎರಡು ಕುಟುಂಬ ರಾಜಕಾರಣದವರೇ ಗೆದ್ದು ಬಂದಿರುವುದು ವಿಶೇಷ.

ಕುಟುಂಬ ರಾಜಕಾರಣದ 2ನೇ ಇನ್ನಿಂಗ್ಸ್‌: 2004ರಿಂದ ಕುಟುಂಬ ರಾಜಕಾರಣದ ಎರಡನೆ ಇನ್ನಿಂಗ್‌್ಸ ಪ್ರಾಂಭವಾಗುವ ಮೂಲಕ ದಿ. ನಾಗಪ್ಪ ಅವರ ಪತ್ನಿ ಪರಿಮಳ ನಾಗಪ್ಪ 2004ರ ಚುನಾವಣಾ ಕಣದಲ್ಲಿ ಸ್ಪರ್ಧೆಗೆ ಅಣಿಯಾಗುತ್ತಾರೆ. ಕಾಂಗ್ರೆಸ್‌ನಿಂದ ರಾಜೂಗೌಡರ ಪುತ್ರ ಸ್ಪರ್ಧೆಗೆ ಸಜ್ಜಾಗುತ್ತಾರೆ. ಪರಿಮಳ ನಾಗಪ್ಪ ಅವರು 61.626ಮತಗಳಿಸಿ ಗೆಲುವು ಸಾಧಿಸಿದರೆ ನರೇಂದ್ರ ಅವರು 48ಸಾವಿರ ಮತಗಳಿಸಿ ಸೋಲುತ್ತಾರೆ. ನಂತರ 2008, 20013 ಹಾಗೂ 2018ರಲ್ಲಿ ಕ್ರಮವಾಗಿ ಮೂರು ಬಾರಿಯೂ ನರೇಂದ್ರ ಶಾಸಕರಾಗಿ ಹ್ಯಾಟ್ರಿಕ್‌ ಶಾಸಕ ಎಂಬ ಹೆಗ್ಗಳಿಕೆಗೆ ಭಾಜನರಾಗುತ್ತಾರೆ.

ನಾಲ್ಕು ದಶಕಗಳಲ್ಲಿ ಗೆದ್ದವರು: 1983ರಲ್ಲಿ ಶಾಂತಮೂರ್ತಿಯವರು ಶಾಸಕರಾದ ಬಳಿಕ 1985ರ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ರಾಜೂಗೌಡರು 36,975ಮತಗಳಿಸಿ ಗೆಲುವು ಸಾಧಿಸುತ್ತಾರೆ. ಅದೇ ಚುನಾವಣೆಯಲ್ಲಿ ಜನತಾಪಕ್ಷದಿಂದ ಕಣದಲ್ಲಿದ್ದ ನಾಗಪ್ಪ ಅವರು 33ಸಾವಿರ ಮತಗಳಿಸಿ ಪರಾಭವ ಹೊಂದುತ್ತಾರೆ. ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದ್ದ ಚಿಕ್ಕಮರಿಗೌಡರು ಕೇವಲ 7ಸಾವಿರ ಮತಗಳಿಸಲಷ್ಟೆಶಕ್ತರಾದರು. ಬಳಿಕ 1989ರಲ್ಲಿ ಪುನಃ ರಾಜೂಗೌಡರು 50ಸಾವಿರ ಮತಗಳಿಸಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ, ಪ್ರತಿಸ್ಪರ್ಧಿಯಾಗಿದ್ದ ಜನತಾದಳದ ಎಚ್‌. ನಾಗಪ್ಪ, 44ಸಾವಿರ ಮತಗಳಿಸಿ 6 ಸಾವಿರ ಮತಗಳ ಅಂತರದಿಂದ ಪರಾಭವಹೊಂದುತ್ತಾರೆ. 

ಕಾರ್ಯಕರ್ತರೇ ಕಾಂಗ್ರೆಸ್‌ ಪಕ್ಷದ ಜೀವಾಳ: ಸಚಿವ ಮುನಿಯಪ್ಪ

1994ರಲ್ಲಿ ನಾಗಪ್ಪ ಅವರು 65,851ಮತಗಳಿಸಿ ರಾಜೂಗೌಡರ ವಿರುದ್ಧ 20ಸಾವಿರಕ್ಕೂ ಅಧಿಕ ಅಂತರದ ಗೆಲುವು ಸಾಧಿಸುತ್ತಾರೆ. ಉಳಿದಂತೆ 1999ರ ಚುನಾವಣೆಯಲ್ಲಿ ಪುನಃ ರಾಜೂಗೌಡರು 62ಸಾವಿರ ಮತಗಳಿಸಿ ಪ್ರತಿಸ್ಪರ್ಧಿ ನಾಗಪ್ಪ ಅವರ ವಿರುದ್ಧ 16ಸಾವಿರ ಮತಗಳ ಅಂತರದಿಂದ ಪರಾಜಯ ಹೊಂದುತ್ತಾರೆ. ನಂತರದ ಬದಲಾದ ರಾಜಕೀಯ ಸನ್ನಿವೇಶ, ನಾಗಪ್ಪರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ, ಹತ್ಯೆ, ಚಂಗಡಿಯಲ್ಲಿ ನಾಗಪ್ಪ ಮೃತದೇಹ ಪತ್ತೆ, ಬಳಿಕ ರಾಜೂಗೌಡರು ಗ್ಯಾಂಗ್ರಿನ್‌ ಕಾಯಿಲೆಗೆ ತುತ್ತಾಗಿ ಸಾವಿಗೀಡಾಗುತ್ತಾರೆ. ಅಲ್ಲಿಗೆ ಎರಡು ಕುಟುಂಬಗಳ ರಾಜಕೀಯ ಹುಲಿಗಳು ಕಣ್ಮರೆಯಾದ ಬಳಿಕ ಪುನಃ ಕುಟುಂಬ ರಾಜಕಾರಣವೇ ಪ್ರಾರಂಭಕ್ಕೆ ಮುನ್ನುಡಿ ಬರೆಯಲಾಗುತ್ತೆ.

click me!