ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ, ಜನರೇ ಮಂಡ್ಯ ಬಂದ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮೈಸೂರು (ಫೆ.03): ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ, ಜನರೇ ಮಂಡ್ಯ ಬಂದ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯ ಬಂದ್ ಗೆ ಕರೆ ವಿಚಾರ ಸಂಬಂಧ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ನಾವೇ ಅವರ ಜೊತೆ ನಿಂತುಕೊಳ್ತಿವಿ. ಯಾವ ಪುರುಷಾರ್ಥಕ್ಕೆ ಹೋರಾಟ, ಬಂದ್ ಮಾಡ್ತಿದ್ದಾರೆ? ಬಿಜೆಪಿ- ಜೆಡಿಎಸ್ ಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.
ಬಾಯಿಗೆ ಬಂದ ರೀತಿ ಮಾತಾಡುತ್ತಾರೆ. ನಮಗೆ ಮಾತಾಡುವುದಕ್ಕೆ ನಾಲಿಗೆ ಇಲ್ವಾ? ನಾವು ಮಂಡ್ಯದ ಮಣ್ಣಿನವರು, ನಮಗೂ ನಾಲಿಗೆ ಇದೆ. ರಾಷ್ಟ್ರ ಧ್ವಜ ತೆಗೀರಿ ಅಂತನಾ ಈ ಹೋರಾಟ? ಹಿಂದುತ್ವ ಎಂಬುದು ಅವರಿಗಿಂತಾ ನಮಗ ಜಾಸ್ತಿ ಇದೆ. ಅವರಿಗಿಂತ ಜಾಸ್ತಿ ಭಕ್ತಿ ನಮಗೆ ಇದೆ ಎಂದು ಅವರು ಹೇಳಿದರು. ಅವನು ಯಾರೋ ಪುಟ್ಟರಾಜನೋ ಬೊಮ್ಮಪ್ಪನ ಹಿಡಿದುಕೊಂಡು ಪತ್ರಿಕಾಗೋಷ್ಠಿ ಮಾಡಿಸುತ್ತಾ ನಿಂತರೆ ನಿಮಗೆ ಜನ ಪಾಠ ಕಲಿಸ್ತಾರೆ ಎಚ್ಚರಿಕೆ ಇರಲಿ. ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ. ಜನರೇ ಬಂದ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದರು.
ಕಾಂಗ್ರೆಸ್ ಸೇರುವಂತೆ ಸುಮಲತಾರನ್ನು ಯಾರೂ ಸಂಪರ್ಕಿಸಿಲ್ಲ: ಸಂಸದೆ ಸುಮಲತಾ ಬಿಜೆಪಿಯಿಂದಲೇ ಸಂಸದರಾಗಲು ಇಚ್ಛಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರುವಂತೆ ಪಕ್ಷದ ಯಾವುದೇ ನಾಯಕರಾಗಲಿ, ಶಾಸಕರಾಗಲಿ ಅವರನ್ನು ಸಂಪರ್ಕಿಸಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಾಂಗ್ರೆಸ್‌ಗೆ ಹೋಗಲ್ಲ. ಬಿಜೆಪಿಯಿಂದಲೇ ಟಿಕೆಟ್ ಬಯಸುತ್ತೇನೆಂದು ತಿಳಿಸಿದ್ದಾರೆ. ಹೀಗಾಗಿ ನಮ್ಮನ್ನು ಏಕೆ ಸಂಪರ್ಕಿಸುತ್ತಾರೆ ಎಂದು ಪ್ರಶ್ನಿಸಿದರು.
ಬಿಕಿನಿ ಬ್ಯೂಟಿ ಸೋನು ಗೌಡ ಕಾರು ಡಿಕ್ಕಿ: ಡ್ರೈವಿಂಗ್ ಬರುತ್ತಾ ಅಂತಿದಾರೆ ಫ್ಯಾನ್ಸ್!
ಅವರಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಂಬರೀಶ್ ಮತ್ತು ನಾನು ಒಳ್ಳೆಯ ಸ್ನೇಹಿತರು, ಅವರ ಕಾಲಾನಂತರ ಸುಮಲತಾ ರಾಜಕಾರಣಕ್ಕೆ ಬಂದಿದ್ದಾರೆ. ಅವರನ್ನು ನಾನಾಗಲಿ, ನಮ್ಮ ಶಾಸಕರು ಮತ್ತು ನಮ್ಮ ನಾಯಕರಾಗಲಿ ಯಾರೂ ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕ ಮಾಡಿದ್ದರೆ ಯಾರು ಎಂಬುದನ್ನು ಸಂಸದರೇ ಬಹಿರಂಗಪಡಿಸಲಿ ಎಂದರು. ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಶೀಘ್ರ ಕಾಂಗ್ರೆಸ್ ಅಭ್ಯರ್ಥಿಯನ್ನು ರಾಷ್ಟ್ರ ಮತ್ತು ರಾಜ್ಯ ನಾಯಕರು ಘೋಷಣೆ ಮಾಡುತ್ತಾರೆ. ಬಹುಶಃ ಫೆಬ್ರವರಿ ಎರಡನೇ ವಾರದೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದರು.