ಮಂಡ್ಯದಲ್ಲಿ ಎಚ್‌ಡಿಕೆ ಭರ್ಜರಿ ಪ್ರಚಾರ; ಚುನಾವಣಾ ವೆಚ್ಚಕ್ಕೆ ಕಾರ್ಯಕರ್ತರಿಂದ 1ಲಕ್ಷ ರೂ. ದೇಣಿಗೆ!

By Ravi JanekalFirst Published Apr 20, 2024, 9:07 PM IST
Highlights

ನಿಮ್ಮ ಮನೆಯ ಮಗ ನಾನು ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಈ ಐತಿಹಾಸಿಕ ಸಭೆಗೆ ಬಂದಿದ್ದೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ನುಡಿದರು. ಸಮಾವೇಶದಲ್ಲಿ ಎಚ್‌ಡಿ ಕುಮಾರಸ್ವಾಮಿಯವರಿಗೆ ಕಾರ್ಯಕರ್ತರು ಒಂದು ಲಕ್ಷ ರೂ ದೇಣಿಗೆ ನೀಡಿದರು.

ಮಂಡ್ಯ (ಏ.20): ನಿಮ್ಮ ಮನೆಯ ಮಗ ನಾನು ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ಪಡೆಯಲು ಈ ಐತಿಹಾಸಿಕ ಸಭೆಗೆ ಬಂದಿದ್ದೇನೆ. ನಾನು ಈ ಚುನಾವಣೆಯಲ್ಲಿ ನಿಲ್ಲಬೇಕು ಅಂತಾ ಅಂದುಕೊಂಡಿರಲಿಲ್ಲ. ನಾನು, ನನ್ನ ಮಗ ನಿಖಿಲ್, ಹೆಚ್‌ಡಿ ದೇವೇಗೌಡರಿಗೆ ಇದ್ದಿದ್ದು ಮಂಡ್ಯದಲ್ಲಿ ಪುಟ್ಟರಾಜು ಅಭ್ಯರ್ಥಿ ಆಗಬೇಕು ಎಂಬುದು.
ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಪುಟ್ಟರಾಜು ಹೆಸರು ಘೋಷಣೆ ಮಾಡಲು ಬಂದಿದ್ದೆ. ಆದರೆ ಅಂದಿನ ಸಭೆಯಲ್ಲಿ ಕೆಲವು ಗೊಂದಲ ಬಂತು. ಕೆಟ್ಟ ಸಂದೇಶ ಹೋಗಬಾರದು ಅಂತಾ ಸಭೆ ಮೊಟಕುಗೊಳಿಸಿದ್ದೆ. ಇವತ್ತು ನಾನಲ್ಲ, ಪುಟ್ಟರಾಜಣ್ಣ ಅಭ್ಯರ್ಥಿಯಾಗಬೇಕಿತ್ತು. ಆದರೆ ನಾನು ಅಭ್ಯರ್ಥಿಯಾಗಿರೋದು ದೈವ ಇಚ್ಛೆ ಎಂದರು.

ಇಂದು ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಲು ಒತ್ತಡ ಇತ್ತು. ಇತ್ತ ನಿಖಿಲ್ ಸ್ಪರ್ಧೆಗೂ ಒತ್ತಡ ಇತ್ತು. ನಿಖಿಲ್ ಕೂಡ ಪುಟ್ಟರಾಜಣ್ಣ ಸ್ಪರ್ಧೆ ಮಾಡಲಿ ಅಂದಿದ್ರು. ಕಳೆದ ಚುನಾವಣೆಯಲ್ಲಿ ಕೆಲವು ಕಾರಣದಿಂದ ನಿಖಿಲ್‌ಗೆ ಸೋಲಾಯ್ತು. ದೇವೇಗೌಡರು ನಿಮ್ಮ ಪರ ಧನಿಯಾಗಿ ಜೀವನ ಮುಡಿಪಾಗಿ ಇಟ್ಟಿದ್ದಾರೆ. ನಿಖಿಲ್ ಮತಗಳಿಂದ ಸೋತಿರಬಹುದು, ನೈತಿಕವಾಗಿ ಸೋತಿರಲಿಲ್ಲ. ಈ ಕುರುಕ್ಷೇತ್ರದ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ಹತನಾಗುವಂತೆ ನಿಖಿಲ್‌ಗೆ ಮಾಡಿದ್ರು. ಕುತಂತ್ರದಿಂದ ನಿಖಿಲ್ ಸೋಲಾಯ್ತು ವಿನಃ ಮಂಡ್ಯ ಜನ ಸೋಲಿಸಿಲ್ಲ. ನೀವು ನನ್ನನ್ನ ಎಳೆದು ಚುನಾವಣೆಗೆ ನಿಲ್ಲಿಸಿದ್ದೀರಿ. ಈ ಚುನಾವಣೆಯಲ್ಲೂ ಅಂದಿನ ಕುತಂತ್ರ ನಡೆಯುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿಯಂತೆ ನಾವು ಹಣಕ್ಕೆ ಸಮನಲ್ಲ. ಹಣದಲ್ಲಿ ಚುನಾವಣೆ ಗೆಲ್ಲೋಕೆ ಎದುರಾಳಿ ನಿಂತಿದ್ದಾರೆ. ಮಂಡ್ಯ ಜನ ಹಣಕ್ಕೆ ಯಾವತ್ತೂ ಮಾರು ಹೋಗಿಲ್ಲ. ಅದನ್ನ ಎದುರಿಸಲು ನನ್ನನ್ನ ದೈವ ಇಚ್ಛೆಯಂತೆ ಅಭ್ಯರ್ಥಿ ಆಗಿದ್ದೇನೆ ಎಂದರು.

ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!

ನನ್ನ ಬಗ್ಗೆ ಕಾಂಗ್ರೆಸ್‌ನವರು ಅವಹೇಳನ ಮಾಡಿ ಮಾತಾಡಿದ್ದಾರೆ. ಅವರ ರೀತಿ ನಾನು ಮಾತಾಡಲ್ಲ. ಹೆಚ್‌ಡಿಕೆ ಏನು ಕಿತ್ತು ಗುಡ್ಡೆ ಹಾಕಿದ್ದಾನೆ ಅಂತಾ ಏಕವಚನದಲ್ಲಿ ಪ್ರಶ್ನಿಸಿದ್ದಾರೆ. ನನಗೆ ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಈ ಜಿಲ್ಲೆಯ ಜನ ನನ್ನ ಕೆಲಸವನ್ನ ನಿಮ್ಮ ಹೃದಯದಲ್ಲಿ ಸ್ಮರಿಸಿಕೊಂಡರೆ ಸಾಕು. ಅದಕ್ಕಿಂತ ದೊಡ್ಡ ಉಪಕಾರ ಇನ್ನೊಂದು ಬೇಕಿಲ್ಲ ಎಂದರು.

ಎಚ್‌ಡಿಕೆಗೆ 1 ಲಕ್ಷ ರೂ. ಧನ ಸಹಾಯ:

ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಎಚ್‌ಡಿ ಕುಮಾರಸ್ವಾಮಿಯವರಿಗೆ ಚುನಾವಣೆ ವೆಚ್ಚಕ್ಕಾಗಿ ಜೆಡಿಎಸ್ ಮುಖಂಡರು 1ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದರು. ಈ ಸಮಾವೇಶದಲ್ಲಿ ಹಲವರು ರೈತಸಂಘ ತೊರೆದು ಮಾಜಿ ಸಚಿವ ಪುಟ್ಟರಾಜು ಸಮ್ಮುಖದಲ್ಲಿ ಸೇರ್ಪಡೆಗೊಂಡರು ಜೆಡಿಎಸ್ ಶಾಲು ಹಾಕಿ ಎಚ್ಡಿ ಕುಮಾರಸ್ವಾಮಿ ಸ್ವಾಗತಿಸಿದರು.

EXCLUSIVE | ಭ್ರಷ್ಟಾಚಾರ ಕೊನೆ ಮಾಡ್ಬೇಕು ಅಂದ್ರೆ, ಇಡಿ-ಸಿಬಿಐನಂಥ ಸಂಸ್ಥೆಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು: ಮೋದಿ

click me!