ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ತಿಂಗಳ ಆಗುತ್ತಿದೆ. ಅದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅದರಲ್ಲೂ ನಿನ್ನೆ ಒಂದೇ ದಿನ ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೂ ಏಳು ಅಪರಾಧ ಕೃತ್ಯಗಳು ನಡೆದಿವೆ. ಆದರೆ ಯಾವುದೇ ಅಲ್ಪಸಂಖ್ಯಾತ ಮುಖಂಡರು ಇದನ್ನು ಖಂಡಿಸಿಲ್ಲ. ಎಂದು ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಡಿಸಿದರು.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.20) : ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರಾಮಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲಿನ ಅಪಘಾತ ಮತ್ತು ಸಾವು ಪ್ರಕರಣವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಕಾವನ್ನು ಬಿಜೆಪಿ ಹಾಗೆಯೇ ಕಾಯ್ದಿರಿಸಿಕೊಂಡಿದೆ. ನಿನ್ನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಮೂರು ಗಂಟೆಗಳ ಕಾಲ ಹೋರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು. ಇಂದು ಕೂಡ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿತು.
ಅರ್ಧ ಗಂಟೆಗೂ ಹೆಚ್ಚು ಸಮಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕೊಡಗಿನ ಇಬ್ಬರು ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ಹೊರ ಹಾಕಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ತಿಂಗಳ ಆಗುತ್ತಿದೆ. ಅದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅದರಲ್ಲೂ ನಿನ್ನೆ ಒಂದೇ ದಿನ ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೂ ಏಳು ಅಪರಾಧ ಕೃತ್ಯಗಳು ನಡೆದಿವೆ. ಆದರೆ ಯಾವುದೇ ಅಲ್ಪಸಂಖ್ಯಾತ ಮುಖಂಡರು ಇದನ್ನು ಖಂಡಿಸಿಲ್ಲ. ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನಡೆದಿರುವಂತ ಘಟನೆ ಎಂತಹವರನ್ನಾದರೂ ಬೆಚ್ಚಿ ಬೀಳಿಸುವಂತೆ ಆಗಿದೆ. ಆ ಹೆಣ್ಣುಮಗಳ ತಾಯಿಯ ಎದುರಿಗೆ ಆ ಮತಾಂಧ ಅಷ್ಟೊಂದು ಬಾರಿ ಇರಿದು ಕೊಂದಿದ್ದಾನೆ. ಬಹಳ ಆಶ್ಚರ್ಯ ಎಂದರೆ ಈ ಅಮಾನುಷ ಕೊಲೆ ಆದರೂ ಮುಖ್ಯಮಂತ್ರಿ ಅದು ವೈಯುಕ್ತಿಕ ವಿಚಾರಕ್ಕೆ ಆಗಿದೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ನೇಹಾ ಹತ್ಯೆ ಪ್ರಕರಣದಲ್ಲಿ ಮತಬ್ಯಾಂಕ್ ರಾಜಕಾರಣ; ರಾಜ್ಯಸರ್ಕಾರದ ವಿರುದ್ಧ ಜೋಶಿ ಆಕ್ರೋಶ
ನಮ್ಮ ಗೃಹ ಸಚಿವರು ಯಾಕೆ ಗೃಹ ಸಚಿವರು ಆಗಿದ್ದಾರೋ ಗೊತ್ತಿಲ್ಲ. ಅವರು ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಲಿ. ಯಾರಾದರು ಗಡುಸುತನ ಇರುವವರು ಆಡಳಿತ ಮಾಡುತ್ತಾರೆ. ಕೊಡಗಿನಲ್ಲೂ ನಮ್ಮ ಕಾರ್ಯಕರ್ತ ರಾಮಪ್ಪ ಅವರನ್ನು ಉದ್ದೇಶ ಪೂರ್ವಕವಾಗಿ ಅಪಘಾತ ಮಾಡಿ ಹತ್ಯೆ ಮಾಡಲಾಗಿದೆ. ಇದನ್ನು ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಮುಖಂಡರು ಖಂಡಿಸಲಿಲ್ಲ. ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಎಲ್ಲರೂ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಡಗಿನವರಾದ ಸ್ಯಾಂಡಲ್ವುಡ್ ನಟ ನಟಿಯರಾದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಮೇಲೆ ಬೆಂಗಳೂರಿನಲ್ಲಿ ನಡೆದಿರುವ ಹಲ್ಲೆಗೂ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯನವರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ಮಾಡಲಾಗಿದೆ. ಜೊತೆಗೆ ದರೋಡೆಗೂ ಯತ್ನಿಸಿದ್ದಾರೆ. ಇದು ಕೂಡ ಮುಸಲ್ಮಾನರೆ ಮಾಡಿರುವ ಕೃತ್ಯ. ಭಯೋತ್ಪಾದಕರು ಹಾಗೂ ಹಿಂದು ವಿರೋಧಿಗಳಿಗೆ ಬೆಂಗಳೂರು ಅಡಗುತಾಣವಾಗಿದೆ. ಯಾರಿಗೆ ಏನು ಬೇಕಾದ್ರು ಮಾಡುವಂತ ಪರಿಸ್ಥಿತಿ ಇದೀಗ ಎದುರಾಗಿದೆ.
ಬೇಲೂರು ಚನ್ನಕೇಶವ ಬ್ರಹ್ಮ ರಥೋತ್ಸವ; ಕುರಾನ್ ಪಠಣ ಮಾಡದೆ ದೇವರಿಗೆ ವಂದನೆ ಸಮರ್ಪಿಸಿದ ಖಾದ್ರಿ
ಕೊಡಗಿನ ನಟ ನಟಿಗೆ ಹೀಗಾದ್ರು ಕೂಡ ಕೊಡಗಿನ ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದಿಸಿದ್ದಾರಾ ಎಂದು ಪ್ರಶ್ನಿಸಿದರು. ? ವಿಧಾನಸಭಾ ಚುನಾವಣಾ ಸಮಯದಲ್ಲಿ ಕೊಡಗಿನ ನರಿ ಕುಂಞಿ(ಹುಲಿಮರಿ) ಎಂದು ಆ ಕುಟುಂಬ ಪ್ರಚಾರ ಮಾಡಿತ್ತು. ಆದರೆ ಅವರ ಮೇಲೆ ಹಲ್ಲೆಯಾಗಿರುವ ವಿಚಾರವನ್ನ ಖಂಡಿಸಿದ್ರಾ ನಿಮ್ಮ ನಾಯಕರು ಎಂದು ಪ್ರಶ್ನಿಸುವ ಮೂಲಕ ವಿರಾಜಪೇಟೆ ಶಾಸಕ ಪೊನ್ನಣ್ಣನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.