ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೇಖ್ರಿ ವೃತ್ತದ ಬಳಿ ಚೊಂಬು ತೋರಿಸಲು ಮುಂದಾದ ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಏ.20): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮರಳಿ ಹೋಗುತ್ತಿರುವಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಮೇಖ್ರಿ ವೃತ್ತದ ಬಳಿ ನಿಂತುಕೊಂಡು ಚೊಂಬು ತೋರಿಸಲು ಮುಂದಾದರು. ಇದನ್ನು ತಡೆದ ಪೊಲೀಸರು ನಲಪಾಡ್ ಅವರನ್ನು ಬಲವಂತವಾಗಿ ಬಂಧಿಸಿ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ.
ದೇಶದ ಪ್ರಧಾನಮಂತ್ರಿ ಬಂದಾಗ ಅವರಿಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸ ಆಗಿರುತ್ತದೆ. ಆದರೆ, ಪ್ರಧಾನಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡರು ಮೇಖ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಇದನ್ನು ತಡೆದಿದ್ದ ಪೊಲೀಸರ ನಡುವೆ ಬಂದಿದ್ದ ಕೆಪಿಸಿಸಿ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಪ್ರಧಾನಿ ಮೋದಿ ವಾಪಸ್ ಹೋಗುವಾಗ ಚೊಂಬು ತೋರಿಸುವ ಯತ್ನ ಮಾಡಿದ್ದಾರೆ. ಆದರೆ, ಇದನ್ನು ವಿಫಲಗೊಳಿಸಿದ ಪೊಲೀಸರು ನಲಪಾಡ್‌ನಲ್ಲಿ ಬಲವಂತವಾಗಿ ಎಳೆದೊಯ್ದು, ಕಾರಿನಲ್ಲಿ ಕೂರಿಸಿ ಸ್ಟೇಷನ್‌ನತ್ತ ಕರೆದೊಯ್ದಿದ್ದಾರೆ.
undefined
ಇನ್ನು ಪ್ರಧಾನಿ ಮೋದಿ ಅವರು ಸಮಾವೇಶದ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ರಸ್ತೆ ಮಾರ್ಗವಾಗಿಯೇ ತೆರಳಿದರು. ಅಲ್ಲಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿ, ನಂತರ ವಿಮಾನದ ಮೂಲಕ ದೆಹಲಿಗೆ ಹೋಗಲಿದ್ದಾರೆ. ಆದರೆ, ಅರಮನೆ ಮೈದಾನದಿಂದ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಹೊರಬರುವ ವೇಳೆ ಮೊಹಮ್ಮದ್ ನಲಪಾಡ್ ಹಾಗೂ ಆಶೀಕ್ ಗೌಡ ಇಬ್ಬರೂ ರಸ್ತೆಗೆ ಕೈಯಲ್ಲಿ ಚೊಂಬು ಹಿಡಿದುಕೊಂಡು ಆಗಮಿಸಿದರು. ಇನ್ನು ಚೊಂಬುಗಳನ್ನು ಹಿಂದೆ ಬಚ್ಚಿಟ್ಟುಕೊಂಡ ಬಂದ ಅವರು ಮೋದಿಯವರ ಕಾನ್ವೇ ಬರುತ್ತಿದ್ದಂತೆಯೇ ಎರಡೂ ಕೈಗಳಲ್ಲಿ ಹಿಡಿದ ಚೊಂಬುಗಳನ್ನು ಮೇಲಕ್ಕೆ ಎತ್ತಿ ಪ್ರದರ್ಶನ ಮಾಡಿದರು. ಇದನ್ನು ಕಂಡ ಪೊಲೀಸರು ಕೂಡಲೇ ಚೊಂಬುಗಳನ್ನು ಕಿತ್ತುಕೊಳ್ಳಲು ಮುಂದಾದರು. ಆದರೆ, ಇದು ಸಾಧ್ಯವಾಗದೇ ಇರುವಾಗ ಇಬ್ಬರನ್ನೂ ಎಳೆದು ರಸ್ತೆ ಬದಿಗೆ ಕರೆತಂದರು.
PM Modi In Karnataka: ಇಂಡಿ ಮೈತ್ರಿಗೆ ನಾಯಕನಿಲ್ಲ, ಭವಿಷ್ಯದ ಯೋಚನೆಯಿಲ್ಲ: ನರೇಂದ್ರ ಮೋದಿ
ಪೊಲೀಸರ ಮುಂದೆಯೇ ರೋಷಾವೇಶ ಪ್ರದರ್ಶನ: ಪ್ರಧಾನಿ ಮೋದಿಗೆ ಖಾಲಿ ಚೊಂಬು ಪ್ರದರ್ಶನಕ್ಕೆ ಮುಂದಾದ ನಲಪಾಡ್ ಅವರನ್ನು ಎಳೆದುಕೊಂಡ ಬಂದ ಪೊಲೀಸರ ಮುಂದೆ ರೋಷಾವೇಷ ಪ್ರದರ್ಶನ ಮಾಡಿದ್ದಾರೆ. ನಾವು ಖಾಲಿ ಚೊಂಬು ತೋರಿಸಿದರೆ ನಿಮಗೇನು. ಇದರಲ್ಲಿ ಯಾವ ತಪ್ಪಿದೆ. ನಮ್ಮನ್ನು ಬಿಟ್ಟುಬಿಡಿ ನಾವು ಚೊಂಬು ಪ್ರದರ್ಶನ ಮಾಡಬೇಕು ಎಂದು ಕೂಗಾಡಿದ್ದಾರೆ. ಆಗ ಐದಾರು ಜನ ಪೊಲೀಸರು ಒಟ್ಟುಗೂಡು ಅವರನ್ನು ಹಿಡಿದು ಕಾರಿಗೆ ಹತ್ತಿಸಿ ಕೂರಿಸಿ ಕರೆದೊಯ್ದ ಘಟನೆ ನಡೆಯಿತು.